45 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಕಾರು, ಎಲುಬಿನ ಚೂರುಗಳು ಪತ್ತೆ

| Updated By: Pavitra Bhat Jigalemane

Updated on: Dec 10, 2021 | 5:42 PM

ಪೊಲೀಸರು ನಾಪತ್ತೆಯಾಗಿದ್ದ ಕಾರನ್ನು ಪತ್ತೆ ಮಾಡಿದ್ದಾರೆ. ಕಾರಿನ ಜತೆಗೆ ಕ್ಲೈಲ್​ನ ಐಡಿ ಕಾರ್ಡ್​ ಮತ್ತು ಕ್ರೆಡಿಟ್​ ಕಾರ್ಡ್ ಹಾಗೂ ಮೂಳೆಗಳು ದೊರೆತಿವೆ ಎಂದು ಸುದ್ದಿ ಸಂಸ್ಥೆಗೆ ಪೊಲೀಸರು ತಿಳಿಸಿದ್ದಾರೆ. ಆದರೆ ಮೂಳೆಗಳು ಅದೇ ವಿದ್ಯಾರ್ಥಿಯದ್ದೇ ಎನ್ನುವುದು ಸ್ಪಷ್ಟವಿಲ್ಲ. ಹೀಗಾಗಿ ಪರೀಕ್ಷೆಯ ಬಳಿಕವೇ ಕಾರಿನಲ್ಲಿ ಸಿಕ್ಕ ಮೂಳೆಗಳು ಯಾರದ್ದು ಎಂದು ತಿಳಿಯಬೇಕಿದೆ.

45 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಕಾರು, ಎಲುಬಿನ ಚೂರುಗಳು ಪತ್ತೆ
45 ವರ್ಷಗಳ ಬಳಿಕ ಪತ್ತೆಯಾದ ಕಾರು
Follow us on

ಜಾರ್ಜಿಯಾ: ಯುಎಸ್​ ನ ಜಾರ್ಜಿಯಾದ ಅಬರ್ನ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನ ಕಾರು 45 ವರ್ಷಗಳ ಬಳಿಕ ಪತ್ತೆಯಾಗಿದೆ. ಕಾರಿನಲ್ಲಿ ಮೂಳೆಗಳೂ ಪತ್ತೆಯಾಗಿದ್ದು ತಜ್ಞರು ಸತ್ಯ ತಿಳಿಯಲು ಮುಂದಾಗಿದ್ದಾರೆ. 1976ರಲ್ಲಿ ಕಣ್ಮರೆಯಾಗಿದ್ದ ವಿದ್ಯಾರ್ಥಿಯ ಕಾರು ಎನ್ನಲಾಗಿದ್ದು, ಕಾರಿನಲ್ಲಿ ಎಲುಬಿನ ತುಂಡುಗಳು ಪತ್ತೆಯಾಗಿವೆ22 ವರ್ಷದ ಕ್ಲೈಲ್​ ಕ್ಲಿಂಕ್ಸ್ಲೇಸ್ ಎನ್ನುವ ವಿದ್ಯಾರ್ಥಿ 1976ರಲ್ಲಿ ಕಾಲೇಜಿಗೆ ಹೋಗುವ ವೇಳೆ ಕಾರು ನದಿಗೆ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ್ದ. ಜಾರ್ಜಿಯಾದಿಂದ ಅಬರ್ನ ವಿಶ್ವವಿದ್ಯಾಲಯಕ್ಕೆ ತೆರಳುತ್ತಿದ್ದ ದಾರಿಯಲ್ಲಿ ವಿದ್ಯಾರ್ಥಿ ಅಪಘಾತಕ್ಕೀಡಾಗಿದ್ದ.

ಇದೀಗ ಪೊಲೀಸರು ನಾಪತ್ತೆಯಾಗಿದ್ದ ಕಾರನ್ನು ಪತ್ತೆ ಮಾಡಿದ್ದಾರೆ. ಕಾರಿನ ಜತೆಗೆ ಕ್ಲೈಲ್​ನ ಐಡಿ ಕಾರ್ಡ್​ ಮತ್ತು ಕ್ರೆಡಿಟ್​ ಕಾರ್ಡ್ ಹಾಗೂ ಮೂಳೆಗಳು ದೊರೆತಿವೆ ಎಂದು ಸುದ್ದಿ ಸಂಸ್ಥೆಗೆ ಪೊಲೀಸರು ತಿಳಿಸಿದ್ದಾರೆ. ಆದರೆ ಮೂಳೆಗಳು ಅದೇ ವಿದ್ಯಾರ್ಥಿಯದ್ದೇ ಎನ್ನುವುದು ಸ್ಪಷ್ಟವಿಲ್ಲ. ಹೀಗಾಗಿ ಪರೀಕ್ಷೆಯ ಬಳಿಕವೇ ಕಾರಿನಲ್ಲಿ ಸಿಕ್ಕ ಮೂಳೆಗಳು ಯಾರದ್ದು ಎಂದು ತಿಳಿಯಬೇಕಿದೆ. ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೆ ಯುಎಸ್​ನ ಇನ್ವೆಸ್ಟಿಗೇಷನ್​ ತಂಡವು ಹೆಚ್ಚಿನ ಮಾಹಿತಿ ಕಲೆ ಹಾಕಲು ಪ್ರಯತ್ನಿಸುತ್ತಿದೆ.

ಕ್ಲೈಲ್​ ಅವರ ತಂದೆ ತಾಯಿ ಇಬ್ಬರೂ ಆತನ ಬರುವಿಕೆಗಾಗಿ ಕಾದಿದ್ದರು. ಹಲವು ಬಾರಿ ಪೊಲೀಸರಿಗೆ ದೂರನ್ನು ಕೂಡ ನೀಡಿದ್ದರು. ಆತನ ಸುಳಿವೇ ಇರಲಿಲ್ಲ. ಕಳೆದ 5 ವರ್ಷಗಳ ಅವಧಿಯಲ್ಲಿ ಕ್ಲೈಲ್​ ತಂದೆ ತಾಯಿಗಳಿಬ್ಬರೂ ಮೃತಪಟ್ಟಿದ್ದಾರೆ. ಕ್ಲೈಲ್​ನದ್ದೇ ಎನ್ನಲಾದ ಪುರಾವೆಗಳು ಸಿಕ್ಕಿವೆ. ಅದನ್ನು ಪರಿಶೀಲನೆ ನಡೆಸಿ ಸತ್ಯಾಂಶವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತವೆ ಎಂದು ಯುಎಸ್​ನ ತನಿಖಾಧಿಕಾರಿ ವುಡ್ರಫ್​ ಎನ್ನುವವರು ತಿಳಿಸಿದ್ದಾರೆ.

ಇದನ್ನೂ ಓದಿ:

Rakesh Jhunjhunwala: ಸ್ಟಾರ್ ಹೆಲ್ತ್ ಇನ್ಷೂರೆನ್ಸ್​ ಲಿಸ್ಟಿಂಗ್​ನಿಂದ ರಾಕೇಶ್​ ಜುಂಜುನ್​ವಾಲಾಗೆ 6 ಸಾವಿರ ಕೋಟಿ ರೂ. ಲಾಭ

ವಿಶ್ವದ ಅತ್ಯಂತ ಪ್ರಬಲ ದೇಶದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ಗೆ ಬ್ಲ್ಯೂಟೂಥ್ ಬಡ್ಸ್ ಫೋಬಿಯ!