ಯುವತಿಯನ್ನು ಹಿಂಬಾಲಿಸಿದ ಆರೋಪ; ಭಾರತೀಯ ಮೂಲದ ವಿದ್ಯಾರ್ಥಿಯನ್ನು ಹೊರಹಾಕಿದ ಬ್ರಿಟನ್ ವಿವಿ

UK: ವಿದ್ಯಾರ್ಥಿನಿಯೋರ್ವಳನ್ನು ಹಿಂಬಾಲಿಸಿ, ತೊಂದರೆ ನೀಡಿದ ಆರೋಪದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೋರ್ವನಿಗೆ ಶಿಕ್ಷೆ ನೀಡಿ ಬ್ರಿಟನ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಯುವತಿಯನ್ನು ಹಿಂಬಾಲಿಸಿದ ಆರೋಪ; ಭಾರತೀಯ ಮೂಲದ ವಿದ್ಯಾರ್ಥಿಯನ್ನು ಹೊರಹಾಕಿದ ಬ್ರಿಟನ್ ವಿವಿ
ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದ ಭಾರತೀಯ ಮೂಲದ ವಿದ್ಯಾರ್ಥಿ ಸಾಹಿಲ್ ಭವ್ನಾನಿ
Follow us
TV9 Web
| Updated By: shivaprasad.hs

Updated on: Dec 11, 2021 | 12:38 PM

ಬ್ರಿಟನ್: 22 ವರ್ಷ ವಯಸ್ಸಿನ ಭಾರತೀಯ ಮೂಲದ ವಿದ್ಯಾರ್ಥಿಯೋರ್ವನಿಗೆ ಯುವತಿಯನ್ನು ಹಿಂಬಾಲಿಸಿದ ಆರೋಪದಲ್ಲಿ ಹಾಗೂ 100 ಪುಟಗಳ ಬೆದರಿಕೆ ಪತ್ರ ನೀಡಿದ ಆರೋಪದಲ್ಲಿ ಬ್ರಿಟನ್ ನ್ಯಾಯಾಲಯವು ಅಮಾನತು ಶಿಕ್ಷೆ ನೀಡಿದೆ. ಅಲ್ಲದೇ ವಿಶ್ವವಿದ್ಯಾಲಯವು ಅವನನ್ನು ಹೊರಹಾಕಲಿದ್ದು, ನಂತರ ಅಪರಾಧಿ ಹಾಂಗ್​ಕಾಂಗ್​ಗೆ ತೆರಳಲಿದ್ದಾನೆ. ಆಕ್ಸ್‌ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಸಾಹಿಲ್ ಭವ್ನಾನಿ ಎಂಬಾತನಿಗೆ ನಾಲ್ಕು ತಿಂಗಳ ಜೈಲು ಶಿಕ್ಷೆ, ಎರಡು ವರ್ಷಗಳ ಅಮಾನತು ಮತ್ತು ಐದು ವರ್ಷಗಳ ತಡೆಯಾಜ್ಞೆ ವಿಧಿಸಿ ನ್ಯಾಯಾಲಯವು ಗುರುವಾರ ಆದೇಶ ಹೊರಡಿಸಿದೆ. ಆಕ್ಸ್‌ಫರ್ಡ್ ಕ್ರೌನ್ ಕೋರ್ಟ್‌ನಲ್ಲಿ ನ್ಯಾಯಾಧೀಶ ನಿಗೆಲ್ ಡಾಲಿ ಅವರು ತೀರ್ಪು ಪ್ರಕಟಿಸಿದರು, ಭವ್ನಾನಿ ಶನಿವಾರ ತಮ್ಮ ತಂದೆಯೊಂದಿಗೆ ಹಾಂಗ್ ಕಾಂಗ್‌ಗೆ ಮರಳಲಿದ್ದಾರೆ ಎಂದು ಇದೇ ವೇಳೆ ತಿಳಿಸಲಾಗಿದೆ.

ಪ್ರತಿವಾದಿ ವಕೀಲರಾದ ರಿಚರ್ಡ್ ಡೇವಿಸ್ ನ್ಯಾಯಾಲಯಕ್ಕೆ ಮಂಡಿಸಿದ ವಾದದಲ್ಲಿ, ಆರೋಪಿಯನ್ನು ಆಕ್ಸ್​ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾಲಯದಿಂದ ಅಮಾನತು ಮಾಡಬೇಕು ಎಂದು ಹೇಳಿದ್ದರು. ಈ ಶಿಕ್ಷೆ ಕ್ರಿಮಿನಲ್ ಅಪರಾಧಕ್ಕಾಗಿ ನೀಡಲಾಗಿದ್ದು, ನ್ಯಾಯಾಲಯವು ಆರೋಪಿಗೆ ಪರೀಕ್ಷೆ ಬರೆಯಲು ಅನುಮತಿಸಬೇಕೆ ಎಂದೂ ಚರ್ಚೆ ನಡೆಸಲಾಗಿತ್ತು. ಆಕ್ಸ್​​ಫರ್ಡ್ ಮೇಲ್ ವರದಿ ಮಾಡಿರುವ ಪ್ರಕಾರ, ಭವ್ನಾನಿಗೆ ಕಳೆದ ತಿಂಗಳೇ ಶಿಕ್ಷೆಯಾಗಬೇಕಿತ್ತು. ಆದರೆ ವಿಶ್ವವಿದ್ಯಾಲಯವು ವಿದ್ಯಾರ್ಥಿಯನ್ನು ಇಂಜಿನಿಯರಿಂಗ್ ಕೋರ್ಸ್ ಮಧ್ಯದಿಂದ ಅಮಾನತು ಮಾಡಬೇಕೆ ಎಂದು ಚರ್ಚೆ ನಡೆಸಿತ್ತು. ಆದ್ದರಿಂದ ಪ್ರಕರಣವನ್ನು ಜನವರಿ 2022ಕ್ಕೆ ಮುಂದೂಡಲಾಗಿತ್ತು.

ಆದರೆ ವಿಶ್ವವಿದ್ಯಾಲಯ ಈ ಕುರಿತು ತೀರ್ಮಾನ ತೆಗೆದುಕೊಂಡಿದ್ದರಿಂದ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಒಂದು ವೇಳೆ ಈಗಿರುವ ಅಮಾನತ್ತಿನ ನಿಯಮವನ್ನು ಉಲ್ಲಂಘಿಸಿದರೆ ಗರಿಷ್ಠ 5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ನ್ಯಾಯಾಲಯವು ಭವ್ನಾನಿಗೆ ಎಚ್ಚರಿಕೆ ನೀಡಿದೆ. ಅಲ್ಲದೇ ಯುವತಿಯ ಕುರಿತಾದ ನಿಲುವು ಮುಗಿದಿದೆ ಎಂದು ಭಾವಿಸುತ್ತೇವೆ ಎಂದೂ ನ್ಯಾಯಾಲಯ ಭವ್ನಾನಿಗೆ ಹೇಳಿದೆ.

ಮಹಿಳಾ ನರ್ಸಿಂಗ್ ವಿದ್ಯಾರ್ಥಿನಿಯೋರ್ವರಿಗೆ 100 ಪುಟಗಳ ಬೆದರಿಕೆ ಪತ್ರವನ್ನು ಭವ್ನಾನಿ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಭವ್ನಾನಿ, ಆನ್​ಲೈನ್​ನಲ್ಲಿ ಸಿಕ್ಕಿದ ಪದ್ಯವನ್ನು ನಕಲಿಸಿ ಅದನ್ನು ಬರೆದಿದ್ದಾಗಿ ಒಪ್ಪಿಕೊಂಡಿದ್ದರು. ಸಂತ್ರಸ್ತೆ ವಿದ್ಯಾರ್ಥಿನಿ ಭವ್ನಾನಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಅಲ್ಲದೇ ಭವ್ನಾನಿ ಆರು ನಿಮಿಷದ ದೀರ್ಘ ವಾಯ್ಸ್ ಮೆಸೇಜ್ ಮೂಲಕ ‘‘ನಿನ್ನನ್ನು ನನ್ನ ಪತ್ನಿಯಾಗಿಸುತ್ತೇನೆ, ನನ್ನ ಮಕ್ಕಳಿಗೆ ತಾಯಿಯಾಗಿಸುತ್ತೇನೆ, ನನ್ನೊಂದಿಗಿರುತ್ತೇನೆ’’ ಎಂಬಿತ್ಯಾದಿ ಸಂದೇಶಗಳ ಮೂಲಕ ದೌರ್ಜನ್ಯ ಎಸಗಿದ್ದ ಎಂದು ಸಂತ್ರಸ್ತೆ ಬಿಬಿಸಿಗೆ ತಿಳಿಸಿದ್ದರು. ಅಲ್ಲದೇ ಈ ಕುರಿತು ಯಾವುದೇ ಆಸಕ್ತಿ ಇಲ್ಲ ಎಂದು ತಿಳಿಸಿದ್ದರೂ ಭವ್ನಾನಿ ಹಿಂಬಾಲಿಸಿ, ತೊಂದರೆ ನೀಡಿದ್ದ ಎಂದು ವಿದ್ಯಾರ್ಥಿನಿ ಆರೋಪಿಸಿದ್ದರು.

ಆಕ್ಸ್​ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾಲಯವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಘಟನೆಗಳ ಕುರಿತು ಎಚ್ಚರಿಕೆ ವಹಿಸುವುದಾಗಿ ತಿಳಿಸಿದೆ. ಅಲ್ಲದೇ ಭವ್ನಾನಿಗೆ ವಿಶ್ವವಿದ್ಯಾಲಯ ನೀಡಬಹುದಾದ ಅತ್ಯಂತ ದೊಡ್ಡ ಶಿಕ್ಷೆ ನೀಡಿ, ಅಮಾನತು ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ:

ಸಿಡಿಎಸ್ ರಾವತ್ ನಿಧನದ ಬಗ್ಗೆ ವಿಕೃತ ಪೋಸ್ಟ್! ದೇಶ ವಿರೋಧಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲು ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ

ನನ್ನ ಪ್ರಕಾರ ಆ ಬಗ್ಗೆ ಮಾತನ್ನು ಮುಗಿಸಿದ್ದೇನೆ: ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಸಮಂತಾ