ಪಾಕ್​ಗೆ ತೀವ್ರ ಇರಿಸುಮುರುಸು! ಕಳಚಿ ಬೀಳ್ತಿದೆ ಇಸ್ಲಾಮಾಬಾದ್‌ ವಿ. ನಿಲ್ದಾಣದ ಸೀಲಿಂಗ್‌

| Updated By: ಸಾಧು ಶ್ರೀನಾಥ್​

Updated on: Aug 18, 2020 | 2:50 PM

ಇಸ್ಲಾಮಾಬಾದ್‌: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕೆಲ ಭಾಗದ ಸೀಲಿಂಗ್‌ ಕುಸಿದು ಬಿದ್ದ ಘಟನೆ ಸಂಭವಿಸಿದೆ. ಪಾಕ್​ಗೆ ತೀವ್ರ ಇರಿಸುಮುರುಸು! ಇಸ್ಲಾಮಾಬಾದ್‌ ವಿಮಾನ ನಿಲ್ದಾಣದ ಗಾಂಧಾರ ಗ್ಯಾಲರಿ ಸಮೀಪ ಈ ಘಟನೆ ಸಂಭವಿಸಿದೆ. ಈ ವಿಮಾನ ನಿಲ್ದಾಣವನ್ನು ಕಟ್ಟಿ ಈಗಷ್ಟೇ ಎರಡು ವರ್ಷಗಳು ಉರುಳಿವೆ. ಆಗಲೇ ವಿಮಾನ ನಿಲ್ಧಾಣದ ಸೀಲಿಂಗ್‌ನ ಕೆಲ ಟೈಲ್ಸ್‌ಗಳು ಸುರಿದ ಭಾರೀ ಮಳೆಗೆ ಕಳಚಿ ಬೀಳುತ್ತಿವೆ. ಈ ವಿಮಾನ ನಿಲ್ಧಾಣವನ್ನು ಚೀನಾದ ಸಹಯೋಗದೊಂದಿಗೆ ಕಟ್ಟಲಾಗಿದೆ. ಆದ್ರೆ ಕಟ್ಟಿದ ಎರಡೇ ವರ್ಷಗಳಲ್ಲಿ […]

ಪಾಕ್​ಗೆ ತೀವ್ರ ಇರಿಸುಮುರುಸು! ಕಳಚಿ ಬೀಳ್ತಿದೆ ಇಸ್ಲಾಮಾಬಾದ್‌ ವಿ. ನಿಲ್ದಾಣದ ಸೀಲಿಂಗ್‌
Follow us on

ಇಸ್ಲಾಮಾಬಾದ್‌: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕೆಲ ಭಾಗದ ಸೀಲಿಂಗ್‌ ಕುಸಿದು ಬಿದ್ದ ಘಟನೆ ಸಂಭವಿಸಿದೆ.

ಪಾಕ್​ಗೆ ತೀವ್ರ ಇರಿಸುಮುರುಸು!
ಇಸ್ಲಾಮಾಬಾದ್‌ ವಿಮಾನ ನಿಲ್ದಾಣದ ಗಾಂಧಾರ ಗ್ಯಾಲರಿ ಸಮೀಪ ಈ ಘಟನೆ ಸಂಭವಿಸಿದೆ. ಈ ವಿಮಾನ ನಿಲ್ದಾಣವನ್ನು ಕಟ್ಟಿ ಈಗಷ್ಟೇ ಎರಡು ವರ್ಷಗಳು ಉರುಳಿವೆ. ಆಗಲೇ ವಿಮಾನ ನಿಲ್ಧಾಣದ ಸೀಲಿಂಗ್‌ನ ಕೆಲ ಟೈಲ್ಸ್‌ಗಳು ಸುರಿದ ಭಾರೀ ಮಳೆಗೆ ಕಳಚಿ ಬೀಳುತ್ತಿವೆ.

ಈ ವಿಮಾನ ನಿಲ್ಧಾಣವನ್ನು ಚೀನಾದ ಸಹಯೋಗದೊಂದಿಗೆ ಕಟ್ಟಲಾಗಿದೆ. ಆದ್ರೆ ಕಟ್ಟಿದ ಎರಡೇ ವರ್ಷಗಳಲ್ಲಿ ಸೀಲಿಂಗ್‌ ಕಳಚಿ ಬೀಳುತ್ತಿರೋದು ಪಾಕಿಸ್ತಾನಕ್ಕೆ ತೀವ್ರ ಇರಿಸುಮುರುಸು ಉಂಟಾಗಿದೆ. ಈ ಬಗ್ಗೆ ಪಾಕ್‌ನ ವಿಮಾನಯಾನ ಸಚಿವರು ಗರಂ‌ ಆಗಿದ್ದು ತನಿಖೆಗೆ ಆದೇಶಿಸಿದ್ದಾರೆ.