ಮಿಶೆಲ್‌ ಒಬಾಮ VOTE ನೆಕ್‌ಲೇಸ್‌ ಆಯ್ತು ಸಿಕ್ಕಾಪಟ್ಟೆ ವೈರಲ್, ಏನಿದರ ವಿಶೇಷ?‌

ನ್ಯೂಯಾರ್ಕ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್‌ ಪಕ್ಷದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಅಭ್ಯರ್ಥಿಗಳಾಗಿರುವ ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್‌ ಅವರನ್ನು ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಲು ಈಗ ನಾಲ್ಕು ದಿನಗಳ ಬೃಹತ್ ಸಮಾವೇಶಗಳು ನಡೆಯುತ್ತಿವೆ. ಬಹುತೇಕ ಆನ್‌ಲೈನ್‌ನಲ್ಲೇ ನಡೆಯುತ್ತಿರುವ ಈ ಸಮಾವೇಶಗಳಲ್ಲಿ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಪತ್ನಿ ಮಿಶೆಲ್ ಒಬಾಮ ಅವರ ಭಾಷಣ ಈಗ ಎಲ್ಲೆಡೆ ಚರ್ಚೆಯಾಗುತ್ತಿದ್ದು, ಇದಕ್ಕೆ ಕಾರಣ ಅವರು ಧರಿಸಿದ್ದ ನೆಕ್‌ಲೇಸ್‌. wrong president ಇದರ ಜೊತೆಗೆ ಮಿಶೆಲ್ ಒಬಾಮ, […]

ಮಿಶೆಲ್‌ ಒಬಾಮ VOTE ನೆಕ್‌ಲೇಸ್‌ ಆಯ್ತು ಸಿಕ್ಕಾಪಟ್ಟೆ ವೈರಲ್, ಏನಿದರ ವಿಶೇಷ?‌
Follow us
Guru
| Updated By: ಸಾಧು ಶ್ರೀನಾಥ್​

Updated on:Aug 18, 2020 | 5:54 PM

ನ್ಯೂಯಾರ್ಕ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್‌ ಪಕ್ಷದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಅಭ್ಯರ್ಥಿಗಳಾಗಿರುವ ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್‌ ಅವರನ್ನು ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಲು ಈಗ ನಾಲ್ಕು ದಿನಗಳ ಬೃಹತ್ ಸಮಾವೇಶಗಳು ನಡೆಯುತ್ತಿವೆ. ಬಹುತೇಕ ಆನ್‌ಲೈನ್‌ನಲ್ಲೇ ನಡೆಯುತ್ತಿರುವ ಈ ಸಮಾವೇಶಗಳಲ್ಲಿ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಪತ್ನಿ ಮಿಶೆಲ್ ಒಬಾಮ ಅವರ ಭಾಷಣ ಈಗ ಎಲ್ಲೆಡೆ ಚರ್ಚೆಯಾಗುತ್ತಿದ್ದು, ಇದಕ್ಕೆ ಕಾರಣ ಅವರು ಧರಿಸಿದ್ದ ನೆಕ್‌ಲೇಸ್‌.

wrong president ಇದರ ಜೊತೆಗೆ ಮಿಶೆಲ್ ಒಬಾಮ, ಡೊನಾಲ್ಡ್ ಟ್ರಂಪ್​ರನ್ನು ಅಮೆರಿಕದ wrong president ಅಂದಿರುವುದೂ ಅರ್ಥಪೂರ್ಣವಾಗಿದೆ ಎಂದು ಅಮೆರಿಕನ್ನರು ಮಾತನಾಡಿಕೊಳ್ಳುತ್ತಿದ್ದಾರೆ.

Vote Necklace ಹೌದು ಮಿಶೆಲ್‌ ಒಬಾಮ ಅವರ ಭಾಷಣಕ್ಕಿಂತ ಅವರು ಭಾಷಣದ ವೇಳೆ ಹಾಕಿಕೊಂಡಿದ್ದ ವೋಟ್‌ ಅಕ್ಷರಗಳ ಚಿನ್ನದ ಸರ ಈಗ ಅಕ್ಷರಶಃ ಟಾಕ್‌ ಆಫ್‌ ದಿ ಟೌನ್‌ ಆಗಿದೆ. V-O-T-E ಎಂಬ ಅಕ್ಷರವಿರುವ ಈ ನೆಕ್‌ಲೇಸ್‌ ಈಗ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಎಲ್ಲರ ಬಾಯಲ್ಲೂ ಇದರದ್ದೇ ಮಾತು.

ಒಂದರ್ಥದಲ್ಲಿ ಮೂಗಿಗಿಂತ ಮೂಗುತಿ ಭಾರ ಎನ್ನುವಂತೆ ಜನರು ಈಗ ಮಿಶೆಲ್‌ ಏನು ಹೇಳಿದ್ರೂ ಅನ್ನೋದಕ್ಕಿಂತ ಯಾವ ಸರ ಹಾಕಿದ್ರು, ಅದು ಎಲ್ಲಿ ಸಿಗುತ್ತೆ? ಯಾರು ಡಿಸೈನ್‌ ಮಾಡಿದ್ರು? ಎಷ್ಟಕ್ಕೆ ಸಿಗುತ್ತೇ? ಹೀಗೆ ಸಾಮಾಜಿಕ ತಾಣದ ತುಂಬೆಲ್ಲಾ ನೆಕ್‌ಲೇಸ್‌ನದ್ದೇ ಹವಾ. ಗೂಗಲ್‌ ಸರ್ಚ್‌ನಲ್ಲಿ ಕೂಡಾ ಇದು ಈಗ ಟಾಪ್‌ ಟ್ರೆಂಡಿಂಗ್‌ನಲ್ಲಿದೆ.

ಸಹಜವಾಗಿಯೇ ಈ ಬೆಳವಣಿಗೆಯು ಈ ನೆಕ್‌ಲೇಸ್‌ ಡಿಸೈನರ್‌ ಚೆರಿ ಕತ್‌ಬರ್ಟ್‌ ಅವರಲ್ಲಿ ಥ್ರಿಲ್‌ ಮೂಡಿಸಿದೆ. ತಾನು ಡಿಸೈನ್‌ ಮಾಡಿದ ನೆಕ್‌ಲೇಸ್‌ ಅನ್ನು ಮಿಶೆಲ್‌ ಒಬಾಮ ಧರಿಸಿದ್ದಲ್ಲದೇ ಅದು ಈಗ ವೈರಲ್‌ ಆಗಿರೋದಕ್ಕೆ ಸಖತ್‌ ಥ್ರಿಲ್‌ ಆಗಿದ್ದಾರೆ. ಜಮೈಕಾ ಸಂಜಾತೆಯಾಗಿರುು ಕತ್‌ಬರ್ಟ್‌ ಈಗ ದಿನಬೆಳಗಾಗೊದ್ರೊಳಗಾಗಿ ಮನೆ ಮಾತಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕತ್‌ಬರ್ಟ್‌ “ನೆಕ್‌ಲೇಸ್‌ ಅನ್ನು ನನಗಾಗಿ ನಾನು ರೆಡಿ ಮಾಡಿಕೊಂಡಿದ್ದೆ. ಆದ್ರೆ ಮಿಶೆಲ್‌ ಅದೇ ತೆರನಾದ ಡಿಸೈನ್‌ ಕೇಳಿದ್ದರಿಂದ ಅವರಿಗೆ ಕೊಟ್ಟೆ” ಎಂದಿದ್ದಾರೆ. ಅದೇನೇ ಇರಲಿ 430 ಅಮೆರಿಕನ್‌ ಡಾಲರ್‌ ಬೆಲೆಯ ಈ ನೆಕ್‌ಲೇಸ್‌ನಿಂದಾಗಿ ಈಗ ಮಿಶೆಲ್‌ ಭಾಷಣ ವೈರಲ್‌ ಆಗಿದೆ ಹಾಗೇನೆ ಕತ್‌ಬರ್ಟ್‌ಗಂತೂ ಸಿಕ್ಕಾಪಟ್ಟೆ ಬಿಸಿನೆಸ್‌.

Published On - 5:44 pm, Tue, 18 August 20