Sign In

By signing in or creating an account, you agree with Associated Broadcasting Company's Terms & Conditions and Privacy Policy.

China Landslide: ಚೀನಾದಲ್ಲಿ ಭೂಕುಸಿತ, 18 ಮನೆಗಳು ಸಂಪೂರ್ಣ ನೆಲಸಮ, 44 ಮಂದಿ ಸಾವು

ಚೀನಾದ ನೈಋತ್ಯ ಪ್ರಾಂತ್ಯದ ಗೈಝೌನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಕನಿಷ್ಠ 44 ಜನರು ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ. ಸೋಮವಾರ ಮುಂಜಾನೆ 5.51 ಕ್ಕೆ ಜೆಂಕ್ಯಾಂಗ್ ಕೌಂಟಿಯಲ್ಲಿ ಈ ಅಪಘಾತ ಸಂಭವಿಸಿದೆ. ಭೂಕುಸಿತದಿಂದ 18 ಮನೆಗಳು ಸಂಪೂರ್ಣ ನಾಶವಾಗಿವೆ ಎಂದು ಹೇಳಲಾಗುತ್ತಿದೆ.

China Landslide: ಚೀನಾದಲ್ಲಿ ಭೂಕುಸಿತ, 18 ಮನೆಗಳು ಸಂಪೂರ್ಣ ನೆಲಸಮ, 44 ಮಂದಿ ಸಾವು
ಭೂಕುಸಿತ
Follow us
ನಯನಾ ರಾಜೀವ್
|

Updated on:Jan 22, 2024 | 9:23 AM

ಚೀನಾದ ನೈಋತ್ಯ ಪ್ರಾಂತ್ಯದ ಗೈಝೌನಲ್ಲಿ ಸಂಭವಿಸಿದ ಭೀಕರ ಭೂಕುಸಿತ(Landslide)ದಿಂದಾಗಿ ಕನಿಷ್ಠ 44 ಜನರು ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ. ಸೋಮವಾರ ಮುಂಜಾನೆ 5.51 ಕ್ಕೆ ಜೆಂಕ್ಯಾಂಗ್ ಕೌಂಟಿಯಲ್ಲಿ ಈ ಅಪಘಾತ ಸಂಭವಿಸಿದೆ. ಭೂಕುಸಿತದಿಂದ 18 ಮನೆಗಳು ಸಂಪೂರ್ಣ ನಾಶವಾಗಿವೆ ಎಂದು ಹೇಳಲಾಗುತ್ತಿದೆ.

ಸರ್ಕಾರಿ ಮಾಧ್ಯಮಗಳು ನೀಡಿರುವ ಮಾಹಿತಿ ಪ್ರಕಾರ, ಅವಶೇಷಗಳ ಅಡಿಯಲ್ಲಿ ಹುದುಗಿರುವ ಜನರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ, ರಕ್ಷಣಾ ತಂಡಗಳು ಅವಶೇಷಗಳನ್ನು ತೆಗೆದುಹಾಕಲು ಹಗಲಿರುಳು ಶ್ರಮಿಸುತ್ತಿವೆ ಮತ್ತು ಕೆಲವರನ್ನು ಜೀವಂತವಾಗಿ ರಕ್ಷಿಸಬಹುದು ಎಂದು ನಂಬಲಾಗಿದೆ.

ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದ ಮಣ್ಣು ಮೆತ್ತಗಾಗಿದ್ದು ಭೂಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. 200ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:22 am, Mon, 22 January 24