ಚೀನಾದಲ್ಲಿ ಮತ್ತೆ ಸೋಂಕಿನ ಭೀತಿ.. ಕಠಿಣ ನಿಯಮಗಳ ಜಾರಿಗೆ ಮುಂದಾದ ಚೀನಾ ಸರ್ಕಾರ

| Updated By: ಸಾಧು ಶ್ರೀನಾಥ್​

Updated on: Jan 05, 2021 | 3:03 PM

ಹೊಸದಾಗಿ ಪತ್ತೆಯಾದ ಒಟ್ಟು 14 ಸೋಂಕಿತರ ಪೈಕಿ 11 ಪ್ರಕರಣಗಳು ಶಿಜಿಯಾಜುಯಾಂಗ್​ ನಗರದಲ್ಲಿ, 3 ಪ್ರಕರಣಗಳು ಯಾಂತೈ ನಗರದಲ್ಲಿ ಪತ್ತೆಯಾಗಿದೆ. ಅಲ್ಲಿನ ವರದಿಗಳ ಪ್ರಕಾರ ಇದುವರೆಗೆ 87,183 ಕೊವಿಡ್​ ಪ್ರಕರಣ ದಾಖಲಾಗಿದ್ದು, 4,634 ಜನ ಸೋಂಕಿತರು ಮೃತಪಟ್ಟಿದ್ದಾರೆ.

ಚೀನಾದಲ್ಲಿ ಮತ್ತೆ ಸೋಂಕಿನ ಭೀತಿ.. ಕಠಿಣ ನಿಯಮಗಳ ಜಾರಿಗೆ ಮುಂದಾದ ಚೀನಾ ಸರ್ಕಾರ
ಪ್ರಾತಿನಿಧಿಕ ಚಿತ್ರ
Follow us on

ಬೀಜಿಂಗ್​: ಕೊರೊನಾ ವೈರಾಣುವಿನ ಮಾತೃಭೂಮಿ ಎಂಬ ಕುಖ್ಯಾತಿಗೆ ಈಡಾಗಿರುವ ಚೀನಾ ದೇಶದಲ್ಲೀಗ ಮತ್ತೆ ಸೋಂಕು ಹರಡುವ ಭೀತಿ ಉಂಟಾಗಿದೆ. ಹೊಸದಾಗಿ 14 ಕೊವಿಡ್​ ಪ್ರಕರಣಗಳು ದಾಖಲಾಗಿರುವ ಚೀನಾದ ಹೆಬೆ ಪ್ರಾಂತ್ಯವನ್ನು ಅತಿ ಅಪಾಯಕಾರಿ ವಲಯ ಎಂದು ಗುರುತಿಸಲಾಗಿದೆ. ಇದರ ಪೈಕಿ 11 ಪ್ರಕರಣಗಳು ಶಿಜಿಯಾಜುಯಾಂಗ್​ ನಗರದಲ್ಲಿ ಪತ್ತೆಯಾಗಿದೆ.

2022 ರಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್​ ಕ್ರೀಡಾಕೂಟದ ಕೆಲವು ಕಾರ್ಯಕ್ರಮಗಳು ಶಿಜಿಯಾಜುಯಾಂಗ್​ ನಗರದಲ್ಲಿ ನಡೆಯಲಿದ್ದು ಕೊವಿಡ್​ ಪ್ರಕರಣದಲ್ಲಿ ಏರಿಕೆ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಜೊತೆಗೆ, ಯಾವುದೇ ಲಕ್ಷಣಗಳಿಲ್ಲದ ಇತರೆ 30 ಜನರಲ್ಲೂ ಪಾಸಿಟಿವ್​ ಕಂಡುಬಂದಿರುವುದರಿಂದ ಸ್ಥಳೀಯ ಆಡಳಿತ ಕಟ್ಟೆಚ್ಚರ ವಹಿಸುತ್ತಿದೆ.

ಹೊಸದಾಗಿ ಪತ್ತೆಯಾದ ಒಟ್ಟು 14 ಸೋಂಕಿತರ ಪೈಕಿ ಉಳಿದ ಮೂವರು ಯಾಂತೈ ನಗರದವರಾಗಿದ್ದಾರೆ. ಸದ್ಯ ಶಿಜಿಯಾಜುಯಾಂಗ್​ ನಗರವನ್ನು ಅತಿ ಅಪಾಯಕಾರಿ ವಲಯವೆಂದೂ, ಯಾಂತೈ ನಗರವನ್ನು ಮಧ್ಯಮ ಅಪಾಯಕಾರಿ ವಲಯವೆಂದೂ ಗುರುತಿಸಲಾಗಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರ ಯಾವ ಮೂಲದಿಂದ ಕೊರೊನಾ ಸೋಂಕು ಮತ್ತೆ ಹರಡಲು ಆರಂಭವಾಯಿತು ಎಂದು ಹುಡುಕಾಟ ನಡೆಸುತ್ತಿದೆ. ಅಲ್ಲಿನ ವರದಿಗಳ ಪ್ರಕಾರ ಇದುವರೆಗೆ 87,183 ಕೊವಿಡ್​ ಪ್ರಕರಣ ದಾಖಲಾಗಿದ್ದು, 4,634 ಜನ ಸೋಂಕಿತರು ಮೃತಪಟ್ಟಿದ್ದಾರೆ. ಆದರೆ, ಯಾವುದೇ ಲಕ್ಷಣಗಳಿಲ್ಲದೇ ಸೋಂಕಿತರಾದವರನ್ನು ಪ್ರತ್ಯೇಕವಾಗಿ ಎಣಿಸಲಾಗಿದೆ ಎಂಬುದನ್ನೂ ವರದಿ ತಿಳಿಸಿದೆ.

ಟ್ವಿಟರ್​ನಲ್ಲಿ ಮತ್ತೆ ಟ್ರೆಂಡ್​ ಆಯ್ತು #BoycottChina​; ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಿರುವ ನೆಟ್ಟಿಗರು