ಗಣರಾಜ್ಯೋತ್ಸವದ ಗಣ್ಯ ಅತಿಥಿ: ಲಾಕ್ಡೌನ್ ಇದ್ದರೂ ಬ್ರಿಟನ್ ಪ್ರಧಾನಿ ಭಾರತಕ್ಕೆ ಬರುವುದು ಖಚಿತ
ಲಾಕ್ಡೌನ್ ಜಂಜಾಟದ ನಡುವೆಯೂ ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಭಾರತಕ್ಕೆ ಆಗಮಿಸುವುದು ಖಚಿತವಾಗಿರುವ ಕಾರಣ. ಲಸಿಕೆಗೆ ಸಂಬಂಧಿಸಿದಂತೆ ಇನ್ನಷ್ಟು ಬೆಳವಣಿಗೆಗಳೂ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ರೂಪಾಂತರಗೊಂಡ ಕೊರೊನಾ ವೈರಾಣುವನ್ನು ತಡೆಗಟ್ಟುವ ಸಲುವಾಗಿ ಬ್ರಿಟನ್ನಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿದೆ. ಆದರೆ, ಲಾಕ್ಡೌನ್ ನಡುವೆಯೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತದ ಗಣರಾಜ್ಯೋತ್ಸವ ಸಮಾರಂಭಕ್ಕೆ ಭೇಟಿ ನೀಡುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲವೆಂದು ಬ್ರಿಟನ್ ಸರ್ಕಾರದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಸದ್ಯ ಬ್ರಿಟನ್ನಲ್ಲಿ 27 ಲಕ್ಷಕ್ಕೂ ಅಧಿಕ ಕೊವಿಡ್ ಪ್ರಕರಣಗಳು ದಾಖಲಾಗಿದ್ದು, ಸಾವಿನ ಪ್ರಮಾಣವೂ ಗಣನೀಯವಾಗಿ ಏರಿಕೆ ಕಂಡಿದೆ. ಈಗಾಗಲೇ 75 ಸಾವಿರಕ್ಕೂ ಅಧಿಕ ಮಂದಿ ಕೊರೊನಾದಿಂದ ಜೀವತೆತ್ತಿರುವ ಕಾರಣ ಬ್ರಿಟನ್ ಸರ್ಕಾರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದೆ.
ಈ ನಡುವೆ ಬ್ರಿಟನ್ನಲ್ಲಿ ಫೈಜರ್ ಸಂಸ್ಥೆ ಹಾಗೂ ಆಕ್ಸ್ಫರ್ಡ್ ಮತ್ತು ಆಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಲಸಿಕೆಗಳ ವಿತರಣೆಯೂ ಆರಂಭವಾಗಿದೆ. ಬ್ರಿಟನ್ನ ಆಕ್ಸ್ಫರ್ಡ್ ಮತ್ತು ಆಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಲಸಿಕೆ ಭಾರತದ ಸೆರಮ್ ಸಂಸ್ಥೆಯಲ್ಲಿ ಉತ್ಪಾದನೆಯಾಗುತ್ತಿರುವ ಕಾರಣ ಬ್ರಿಟನ್ ಮತ್ತು ಭಾರತದ ಸಂಬಂಧವೂ ವೃದ್ಧಿಯಾಗುತ್ತಿದೆ ಎಂದು ಬೋರಿಸ್ ಜಾನ್ಸನ್ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು.
ಲಾಕ್ಡೌನ್ ಜಂಜಾಟದ ನಡುವೆಯೂ ಬೋರಿಸ್ ಜಾನ್ಸನ್ ಭಾರತಕ್ಕೆ ಆಗಮಿಸುವುದು ಖಚಿತವಾಗಿರುವ ಕಾರಣ. ಲಸಿಕೆಗೆ ಸಂಬಂಧಿಸಿದಂತೆ ಇನ್ನಷ್ಟು ಬೆಳವಣಿಗೆಗಳೂ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಲಾಕ್ಡೌನ್ ನಿರ್ಧಾರಕ್ಕೆ ದಾಖಲೆಗಳ ಸಮೇತ ಕಾರಣ ನೀಡಿದ ಬೋರಿಸ್ ಜಾನ್ಸನ್