China Covid Cases: ಚೀನಾದಲ್ಲಿ ಕೊರೊನಾ ಪ್ರಕರಣ ಹೆಚ್ಚಿದ್ದರೂ ವಿದೇಶಿ ಪ್ರಯಾಣ ನಿರ್ಬಂಧ ತೆರವು, ಕ್ವಾರಂಟೈನ್ ಇಲ್ಲ

| Updated By: ನಯನಾ ರಾಜೀವ್

Updated on: Jan 08, 2023 | 1:12 PM

ಚೀನಾದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ವಿದೇಶಿ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಒಂದೆಡೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಇತರೆ ದೇಶಗಳಿಗೆ ತಲೆನೋವಾಗಿ ಪರಿಣಮಿಸಿದೆ.

China Covid Cases: ಚೀನಾದಲ್ಲಿ ಕೊರೊನಾ ಪ್ರಕರಣ ಹೆಚ್ಚಿದ್ದರೂ ವಿದೇಶಿ ಪ್ರಯಾಣ ನಿರ್ಬಂಧ ತೆರವು, ಕ್ವಾರಂಟೈನ್ ಇಲ್ಲ
ಚೀನಾ ಏರ್​ಪೋರ್ಟ್​
Follow us on

ಚೀನಾದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ವಿದೇಶಿ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಜತೆಗೆ ಕ್ವಾರಂಟೈನ್ ನಿಮವನ್ನು ಕೂಡ ತೆಗೆದುಹಾಕಿದೆ.  ಒಂದೆಡೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಇತರೆ ದೇಶಗಳಿಗೆ ತಲೆನೋವಾಗಿ ಪರಿಣಮಿಸಿದೆ. ಚೀನಾದಲ್ಲಿ ಈಗಾಗಲೇ ಶೂನ್ಯ ಕೋವಿಡ್ ನಿಯಮವನ್ನು ಕೂಡ ಹಿಂಪಡೆದಿದ್ದು, ಇದೀಗ ವಿದೇಶಿ ಪ್ರಯಾಣ ನಿರ್ಬಂಧವನ್ನು ಕೂಡ ಕೊನೆಗೊಳಿಸಿದೆ. ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳಿಗೆ ಬರುವ ಚೀನ ಪ್ರಜೆಗಳು ಕೊವಿಡ್- ನೆಗೆಟಿವ್‍ ಪ್ರಮಾಣ ಪತ್ರ ಕಡ್ಡಾಯ ಎಂದು ಕಠಿಣ ನಿರ್ಬಂಧ ಹೇರುವ ಚಿಂತನೆ ಮುಂದುವರೆಸಿದೆ.

ಕಳೆದ ಒಂದು ವಾರದಿಂದ ಐರೋಪ್ಯ ಒಕ್ಕೂಟದ ಆರೋಗ್ಯ ತಜ್ಞರ ನಡುವಿನ ಮಾತುಕತೆಯ ನಂತರ, ಇಟಲಿ, ಫ್ರಾನ್ಸ್ ಮತ್ತು ಸ್ಪೇನ್‍ನಂತಹ ದೇಶಗಳು ಈಗಾಗಲೇ ಜಾರಿಗೆ ತಂದ ಪ್ರಯಾಣದ ನಿರ್ಬಂಧವನ್ನು ಎಲ್ಲಾ 27 ಸದಸ್ಯ ರಾಷ್ಟ್ರಗಳು ಪಾಲಿಸಲು ಮುಂದಾಗಿದೆ. ಚೀನಾ ಈ ಕ್ರಮಗಳನ್ನು ತೀವ್ರವಾಗಿ ತಿರಸ್ಕರಿಸಿದೆ ಮತ್ತು ಪ್ರತಿಕ್ರಮದ ಎಚ್ಚರಿಕೆ ನೀಡಿದೆ.

ಮತ್ತಷ್ಟು ಓದಿ: China Covid Updates: ಮುಂದಿನ 90 ದಿನಗಳಲ್ಲಿ ಚೀನಾದ ಶೇ.60ರಷ್ಟು ಜನತೆ ಕೊರೊನಾ ಸೋಂಕಿಗೆ ಒಳಗಾಗಬಹುದು: ಲಕ್ಷಾಂತರ ಮಂದಿ ಸಾಯಬಹುದು

ಚೀನಾದಿಂದ ಹೊರಹೊಮ್ಮುವ ಕೊರೊನಾವೈರಸ್ ರೂಪಾಂತರಗಳು ಈಗಾಗಲೇ ಯುರೋಪ್‍ನಲ್ಲಿ ಪ್ರಚಲಿತದಲ್ಲಿರುವುದರಿಂದ ಪ್ರಯಾಣದ ಮೇಲೆ ಯಾವುದೇ ನಿರ್ಬಂಧಗಳ ಅಗತ್ಯವಿಲ್ಲ ಎಂದು ಚೀನಾ ಸರ್ಕಾರ ಮತ್ತು ಯುರೋಪಿಯನ್ ಆರೋಗ್ಯ ತಜ್ಞರು ಹೇಳಿದ್ದಾರೆ.

ವಿಶ್ವಾದ್ಯಂತ ಸುಮಾರು 300 ವಿಮಾನಯಾನ ಸಂಸ್ಥೆಗಳನ್ನು ಪ್ರತಿನಿಧಿಸುವ ಇಂಟನ್ರ್ಯಾಷನಲ್ ಏರ್ ಟ್ರಾನ್ಸ್‍ಪೋರ್ಟ್ ಅಸೋಸಿಯೇಷನ್ ಇದಕ್ಕೆ ಪ್ರಬಲ ಧ್ವನಿನೀಡಿದೆ.

ಯುರೋಪಿಯನ್ ಯೂನಿಯನ್ ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಸ್ವೀಡನ್ ಮಾತ್ರ , ಚೀನಾದಿಂದ ಬರುವ ಪ್ರಯಾಣಿಕರು ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳುವ ನಿರ್ಧಾರಗಳಿಗೆ ಸಿದ್ಧರಾಗಿರಬೇಕು ಎಂದು ತಿಳಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ