ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾದ ಪ್ರೇಮಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಬಂದ ಚೀನಾ ಯುವತಿ

|

Updated on: Jul 28, 2023 | 12:23 PM

ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾಗಿ ಹುಟ್ಟಿಕೊಂಡ ಪ್ರೀತಿಯನ್ನು ಉಳಿಸಿಕೊಳ್ಳಲು ಚೀನಾದ ಯುವತಿಯೊಬ್ಬಳು ಪಾಕಿಸ್ತಾನಕ್ಕೆ ತೆರಳಿರುವ ಘಟನೆ ವರದಿಯಾಗಿದೆ

ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾದ ಪ್ರೇಮಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಬಂದ ಚೀನಾ ಯುವತಿ
ಮೊಬೈಲ್
Follow us on

ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾಗಿ ಹುಟ್ಟಿಕೊಂಡ ಪ್ರೀತಿಯನ್ನು ಉಳಿಸಿಕೊಳ್ಳಲು ಚೀನಾದ ಯುವತಿಯೊಬ್ಬಳು ಪಾಕಿಸ್ತಾನಕ್ಕೆ ತೆರಳಿರುವ ಘಟನೆ ವರದಿಯಾಗಿದೆ. ಇತ್ತೀಚೆಗಷ್ಟೇ ರಾಜಸ್ಥಾನದ ವಿವಾಹಿತ ಮಹಿಳೆ ಅಂಜು ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದರು.
ಗಾವೊ ಫೆಂಗ್ ಎಂಬ ಯುವತಿ ಮೂರು ತಿಂಗಳ ವೀಸಾದ ಮೇಲೆ ಚೀನಾದಿಂದ ಗಿಲ್ಗಿಟ್ ಮೂಲಕ ರಸ್ತೆ ಮಾರ್ಗವಾಗಿ ಕಳೆದ ವಾರ ಇಸ್ಲಾಮಾಬಾದ್‌ಗೆ ಬಂದಿದ್ದಾಳೆ.

21 ವರ್ಷದ ಯುವತಿಯನ್ನು ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಜೌರ್ ಬುಡಕಟ್ಟು ಜಿಲ್ಲೆಯ ನಿವಾಸಿ 18 ವರ್ಷದ ಸ್ನೇಹಿತ ಜಾವೇದ್ ಕರೆದೊಯ್ದಿದ್ದಾನೆ ಎಂದು ಅವರು ಹೇಳಿದರು. ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಬಜೌರ್ ಜಿಲ್ಲೆಯ ಭದ್ರತಾ ಪರಿಸ್ಥಿತಿಯಿಂದಾಗಿ ಜಾವೇದ್ ತನ್ನ ಮನೆಯ ಬದಲು ಲೋವರ್ ದಿರ್ ಜಿಲ್ಲೆಯ ಸಮರ್‌ಬಾಗ್ ತೆಹಸಿಲ್‌ನಲ್ಲಿರುವ ತನ್ನ ತಾಯಿಯ ಚಿಕ್ಕಪ್ಪನ ಮನೆಗೆ ಯುವತಿಯನ್ನು ಕರೆದೊಯ್ದಿದ್ದಾನೆ.

ಮತ್ತಷ್ಟು ಓದಿ: Facebook boyfriend: ಪಾಕಿಸ್ತಾನದ ಪ್ರಿಯತಮನ ಹಂಬಲಿಸಿ, ಭಾರತದ ಗಡಿ ದಾಟಿದ ರಾಜಸ್ತಾನದ ವಿವಾಹಿತ ಮಹಿಳೆ: ಅದು ಫೇಸ್​​​ಬುಕ್ ಪರಿಚಯ!

ಪೊಲೀಸರ ಪ್ರಕಾರ, ಇಬ್ಬರೂ ಕಳೆದ ಮೂರು ವರ್ಷಗಳಿಂದ ಸ್ನ್ಯಾಪ್‌ಚಾಟ್ ಮೂಲಕ ಸಂಪರ್ಕದಲ್ಲಿದ್ದರು ಮತ್ತು ಸ್ನೇಹವು ಪ್ರೇಮವಾಗಿ ಮುಂದುವರೆದಿದೆ. ಗಾವೋ ಇಸ್ಲಾಂಗೆ ಮತಾಂತರಗೊಂಡ ನಂತರ ಬುಧವಾರ ಜಾವೇದ್ ಅವರನ್ನು ವಿವಾಹವಾದರು ಮತ್ತು ಆಕೆಯ ಹೊಸ ಹೆಸರು ಕಿಸ್ವಾ ಎಂದು ತಿಳಿಸಿದ್ದಾರೆ.

ಜುಲೈ 20 ರಂದು ಗಾವೋ ಇಸ್ಲಾಮಾಬಾದ್‌ಗೆ ಬಂದಿದ್ದಾರೆ, ಅಲ್ಲಿಂದ ಅವರು ಜುಲೈ 21 ರಂದು ಲೋವರ್ ದಿರ್ ಜಿಲ್ಲೆಗೆ ಬಂದರು, ಅಲ್ಲಿ ಗಾವೊ ಸಮರ್‌ಬಾಗ್‌ನಲ್ಲಿರುವ ಇಜ್ಜತುಲ್ಲಾ ಅವರ ನಿವಾಸದಲ್ಲಿ ಉಳಿದುಕೊಂಡಿದ್ದರು.

ಜಾವೇದ್ ಬಜೌರ್ ಪದವಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದು, ಚೀನಾದಲ್ಲಿ ಗಾವೊ ಅವರೊಂದಿಗೆ ನ್ಯಾಯಾಲಯದಲ್ಲಿ ವಿವಾಹವಾಗಲಿದ್ದಾರೆ. ಗಾವೊ ಕೆಲವೇ ದಿನಗಳಲ್ಲಿ ಚೀನಾಕ್ಕೆ ಮರಳಲಿದ್ದಾರೆ, ಜಾವೇದ್ ಪಾಕಿಸ್ತಾನದಲ್ಲಿಯೇ ಇರುತ್ತಾನೆ ಎಂದು ಇಜ್ಜತುಲ್ಲಾ ಹೇಳಿದರು.

ಜಾವೇದ್ ತನ್ನ ಶಿಕ್ಷಣವನ್ನು ಪಾಕಿಸ್ತಾನದಲ್ಲಿ ಪೂರ್ಣಗೊಳಿಸಿದ ನಂತರ ಚೀನಾಕ್ಕೆ ಹೋಗುತ್ತಾನೆ, ಅದು ಸುಮಾರು ಒಂದು ವರ್ಷ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ಚೀನಾ ಯುವತಿಯ ಪ್ರಯಾಣ ದಾಖಲೆಗಳು ಕ್ರಮಬದ್ಧವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ರೀತಿ ಪಾಕಿಸ್ತಾನದ ಮಹಿಳೆಯೊಬ್ಬಳು ಪಬ್ಜಿ ಮೂಲಕ ಭೇಟಿಯಾದ ಗೆಳೆಯನನ್ನು ಮದುವೆಯಾಗಲು ಭಾರತಕ್ಕೆ ಬಂದಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:20 pm, Fri, 28 July 23