ಕಾಬೂಲ್: ಅಫ್ಘಾನಿಸ್ತಾನದ ಜಲಾಲಾಬಾದ್ ನಗರದಲ್ಲಿ ನಾಗರಿಕರು ತಾಲಿಬಾನ್ ವಿರುದ್ಧ ಪ್ರತಿಭಟನೆ ನಡೆಸಿ, ಸರ್ಕಾರಿ ಕಟ್ಟಡಗಳ ಮೇಲೆ ಅಫ್ಘಾನಿಸ್ತಾನದ ರಾಷ್ಟ್ರೀಯ ಧ್ವಜ ಹಾರಿಸಬೇಕು ಎಂದು ಒತ್ತಾಯಿಸಿದರು. ತಾಲಿಬಾನ್ ಧ್ವಜ ಕಿತ್ತೆಸೆದು, ಅಫ್ಘಾನ್ ರಾಷ್ಟ್ರೀಯ ಧ್ವಜ ಹಾರಿಸಿದಾಗ ಪ್ರತಿಭಟನಾನಿರತರ ವಿರುದ್ಧ ಗುಂಡು ಹಾರಾಟ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜಲಾಲಾಬಾದ್ನ ಜನನಿಬಿಡ ರಸ್ತೆಯೊಂದರಲ್ಲಿ ಜನರು ಅಫ್ಘಾನ್ ರಾಷ್ಟ್ರೀಯ ಧ್ವಜವನ್ನು ಭಾವುಕರಾಗಿ ಕೈಲಿ ಹಿಡಿದಿರುವ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತಾಲಿಬಾನ್ ಹೋರಾಟಗಾರರು ಗುಂಡು ಹಾರಿಸುವ ಸದ್ದು ಸಹ ವಿಡಿಯೊದಲ್ಲಿ ದಾಖಲಾಗಿದೆ. ಗಾಯಾಳುಗಳ ಮಾಹಿತಿ ಲಭ್ಯವಾಗಿಲ್ಲ.
Breaking:
Protestors in Jalalabad city want the national flag back on offices & rejects Taliban terrorists’ flag. Taliban openly fires at protestors. Reports of casualties. pic.twitter.com/EFoy4oh3uT
— Najeeb Nangyal (@NajeebNangyal) August 18, 2021
ಹಕ್ಕಾನಿ-ಕರ್ಜೈ ಭೇಟಿ
ತಾಲಿಬಾನ್ ನಾಯಕ ಅನಸ್ ಹಕ್ಕಾನಿ ಮತ್ತು ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಬುಧವಾರ ಪರಸ್ಪರ ಭೇಟಿಯಾಗಿ ಸರ್ಕಾರ ರಚನೆ ಕುರಿತು ಚರ್ಚಿಸಿದರು.
ಫೋಟೊ ಬದಲಾವಣೆ
ತಜಕಿಸ್ತಾನದ ಅಫ್ಘಾನ್ ರಾಯಭಾರ ಕಚೇರಿಯಲ್ಲಿದ್ದ ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಅವರ ಫೋಟೊ ಜಾಗದಲ್ಲಿ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವ ಅಮರುಲ್ಲಾ ಸಲೇಹಾ ಅವರ ಭಾವಚಿತ್ರ ಹಾಕಲಾಗಿದೆ.
ಮಾತು ನಂಬಬೇಡಿ ಎಂದ ಬ್ರಿಟನ್
ತಾಲಿಬಾನಿಗಳ ಮಾತಿನ ಮೇಲೆ ವಿಶ್ವಾಸ ಇರಿಸಲು ಆಗದು. ಅವರ ಕೆಲಸ ನೋಡಿ ನಿರ್ಧಾರಕ್ಕೆ ಬರಬೇಕು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿಕೆ ನೀಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ 40 ಮಂದಿ ಸಾವು
ಕಾಬೂಲ್ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಂಡು ಹಾರಿಸಲಾಗಿದ್ದು, 40 ಮಂದಿ ಸಾವನ್ನಪ್ಪಿದ್ದಾರೆ. ಕಿಕ್ಕಿರಿದು ಸೇರಿದ್ದ ಜನರನ್ನು ಚೆದುರಿಸಲು ವಿಮಾನ ನಿಲ್ದಾಣದಲ್ಲಿ ಗುಂಡು ಹಾರಿಸಲಾಯಿತು ಎಂದು ಹೇಳಲಾಗಿದೆ. ಗುಂಡು ಹಾರಿಸಿದ್ದು ಅಮೆರಿಕ ಸೇನೆ ಎಂದು ತಾಲಿಬಾನ್ ಹೇಳಿದೆ.
(Civilians Protest in Jalalabad of Afghanistan Hoist Afghan National Flag Taliban Fires on Them)
ಇದನ್ನೂ ಓದಿ: Opinion ‘ಅಫ್ಘಾನಿಸ್ತಾನ, ತಾಲಿಬಾನ್ ಬಗ್ಗೆ ನಾನು ವಿದೇಶಾಂಗ ಸಚಿವನಾಗಿ ಕಲಿತದ್ದು’- ಯಶವಂತ್ ಸಿನ್ಹಾ ಬರಹ
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಯಾವುದೇ ದೇಶಕ್ಕೆ ಬೆದರಿಕೆಯಿಲ್ಲ: ಮೊದಲ ಸುದ್ದಿಗೋಷ್ಠಿಯಲ್ಲಿ ತಾಲಿಬಾನ್ ಅಭಯ