AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸಂಖ್ಯೆ ಹೆಚ್ಚಾಗುವುದು ಟ್ರಂಪ್​ಗೆ ಗೌರವದ ಸಂಕೇತವಂತೆ!

ಅಮೆರಿಕದಲ್ಲಿ ಕೊರೊನಾ ಮರಣ ಮೃದಂಗವನ್ನೇ ಬಾರಿಸ್ತಿದೆ. ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಆದರೂ ಇದಕ್ಕೆ ಕ್ಯಾರೆ ಅನ್ನದ ಟ್ರಂಪ್, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವುದು ಗೌರವದ ಸಂಕೇತ ಅಂತಾ ಹೇಳಿದ್ದಾರೆ. ಯಾಕಂದ್ರೆ, ಬೇರೆ ದೇಶಗಳಿಗೆ ಹೋಲಿಕೆ ಮಾಡಿದ್ರೆ, ನಮ್ಮ ದೇಶದಲ್ಲಿ ಸೋಂಕಿನ ಪರೀಕ್ಷೆ ಉತ್ತಮವಾಗಿದೆ. ಹೀಗಾಗಿ, ಸೋಂಕು ಹೆಚ್ಚಳವನ್ನ ಕೆಟ್ಟದಾಗಿ ಭಾವಿಸುವಂತಿಲ್ಲ ಅಂತಾ ಹೇಳಿದ್ದು, ಇದು ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಆನ್​ಲೈನ್ ಶಾಪಿಂಗ್ ಹೆಚ್ಚಳ: ಕೊರೊನಾ ವೈರಸ್​ನಿಂದಾಗಿ ಇರಾಕ್ ಕೂಡ ತತ್ತರಿಸಿದೆ. ಇದ್ರಿಂದ ಎಚ್ಚೆತ್ತ […]

ಕೊರೊನಾ ಸಂಖ್ಯೆ ಹೆಚ್ಚಾಗುವುದು ಟ್ರಂಪ್​ಗೆ ಗೌರವದ ಸಂಕೇತವಂತೆ!
ಡೊನಾಲ್ಡ್​ ಟ್ರಂಪ್​
ಸಾಧು ಶ್ರೀನಾಥ್​
| Edited By: |

Updated on: May 22, 2020 | 5:07 PM

Share

ಅಮೆರಿಕದಲ್ಲಿ ಕೊರೊನಾ ಮರಣ ಮೃದಂಗವನ್ನೇ ಬಾರಿಸ್ತಿದೆ. ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಆದರೂ ಇದಕ್ಕೆ ಕ್ಯಾರೆ ಅನ್ನದ ಟ್ರಂಪ್, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವುದು ಗೌರವದ ಸಂಕೇತ ಅಂತಾ ಹೇಳಿದ್ದಾರೆ. ಯಾಕಂದ್ರೆ, ಬೇರೆ ದೇಶಗಳಿಗೆ ಹೋಲಿಕೆ ಮಾಡಿದ್ರೆ, ನಮ್ಮ ದೇಶದಲ್ಲಿ ಸೋಂಕಿನ ಪರೀಕ್ಷೆ ಉತ್ತಮವಾಗಿದೆ. ಹೀಗಾಗಿ, ಸೋಂಕು ಹೆಚ್ಚಳವನ್ನ ಕೆಟ್ಟದಾಗಿ ಭಾವಿಸುವಂತಿಲ್ಲ ಅಂತಾ ಹೇಳಿದ್ದು, ಇದು ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಆನ್​ಲೈನ್ ಶಾಪಿಂಗ್ ಹೆಚ್ಚಳ: ಕೊರೊನಾ ವೈರಸ್​ನಿಂದಾಗಿ ಇರಾಕ್ ಕೂಡ ತತ್ತರಿಸಿದೆ. ಇದ್ರಿಂದ ಎಚ್ಚೆತ್ತ ಇರಾಕ್ ನ ಜನ ಅಂಗಡಿಗಳಿಗೆ ಶಾಪಿಂಗ್​ಗೆ ತೆರಳುತ್ತಿಲ್ಲ. ಆನ್​ಲೈನ್ ಮೂಲಕವೇ ಅಗತ್ಯ ವಸ್ತುಗಳನ್ನ ಖರೀದಿಸಲು ಮುಂದಾಗಿದ್ದಾರೆ. ಇರಾಕ್​ ಮೊಸೌಲ್​ನಲ್ಲಿ ಬಟ್ಟೆಗಳನ್ನ ಆನ್​ಲೈನ್​ನಲ್ಲೇ ಬುಕ್ ಮಾಡ್ತಿದ್ದಾರೆ, ವ್ಯಾಪಾರಿಗಳೂ ಕೂಡ ಕೈಗೆ ಗ್ಲೌಸ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡೇ ವಸ್ತುಗಳನ್ನ ಸಪ್ಲೈ ಮಾಡ್ತಿದ್ದಾರೆ.

ಕ್ವಾರಂಟೈನ್ ವಿರೋಧಿ ‘ಕಿಚ್ಚು’: ಅರ್ಜೆಂಟಿನಾದಲ್ಲಿ ಕೊರೊನಾ ವೈರಸ್​ ಸೋಂಕಿತರು ಹೆಚ್ಚಾಗ್ತಿರೋದ್ರಿಂದ, ಹಲವರನ್ನ ಕ್ವಾರಂಟೈನ್​ನಲ್ಲಿರಿಸಲಾಗಿದೆ. ಆದ್ರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಲವರು ಅರ್ಜೆಂಟಿನಾ ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ರು. ರಾಜಧಾನಿ ಬೋನೆಸ್ ಏರ್ಸ್​ ನಗರದ ಪ್ರಮುಖ ಬೀದಿಗಳಲ್ಲಿ ಪಾತ್ರೆಗಳ ಮೇಲೆ ಭಿತ್ತಿ ಪತ್ರಗಳನ್ನ ಅಂಟಿಸಿ, ವಿರೋಧಿ ಬ್ಯಾನರ್​ಗಳನ್ನಿಡಿದು, ಘೋಷಣೆಗಳನ್ನ ಕೂಗುತ್ತಾ ಆಕ್ರೋಶ ಹೊರ ಹಾಕಿದ್ರು.

ರಷ್ಯಾಗೆ ವೆಂಟಿಲೇಟರ್​ಗಳ ರವಾನೆ: ಕೊರೊನಾ ವೈರಸ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ರಷ್ಯಾಗೆ ಅಮೆರಿಕ ಸಹಾಯ ಹಸ್ತ ಚಾಚಿದೆ. ಅಮೆರಿಕ ವೆಂಟಿಲೇಟರ್​ಗಳನ್ನ ಸರಬರಾಜು ಮಾಡಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡುವ ಸಲುವಾಗಿ 50 ವೆಂಟಿಲೇಟರ್​ಗಳನ್ನ ಹೊತ್ತ ಅಮೆರಿಕ ಸೇನಾ ವಿಮಾನ ರಷ್ಯಾ ರಾಜಧಾನಿ ಮಾಸ್ಕೋಗೆ ಬಂದಿಳಿದಿದೆ. ಎರಡು ದೇಶಗಳ ನಡುವೆ ಶೀತಲ ಸಮರವಿದ್ದರೂ, ಜನರ ಅನುಕೂಲಕಕ್ಕಾಗಿ ಅವುಗಳನ್ನೆಲ್ಲಾ ದೂರ ಸರಿಸಿದ್ದೇವೆ ಅಂತಾ ರಾಯಬಾರಿಗಳು ಹೇಳಿದ್ದಾರೆ.

ಚಪ್ಪಾಳೆಯ ಪ್ರೋತ್ಸಾಹ: ಇಂಗ್ಲೆಂಡ್​ನಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೀತಿದ್ರೂ, ಲಾಕ್​ಡೌನ್ ಸಡಿಲಿಕೆ ಮಾಡಿದೆ. ಇದ್ರ ಬೆನ್ನಲ್ಲೇ, ವೈದ್ಯಕೀಯ ಸಿಬ್ಬಂದಿ ಜೀವದ ಹಂಗು ತೊರೆದು, ಮನೆಗೂ ತೆರಳದೇ ಕೆಲಸದಲ್ಲಿ ನಿರತರಾಗಿದ್ದಾರೆ. ಇವರ ಶ್ರಮ ಮತ್ತು ಸೇವೆಗೆ ಗೌರವ ಸೂಚಿಸುವ ಸಲುವಾಗಿ ಪ್ರಧಾನಿ ಬೋರಿಸ್ ಜಾನ್ಸನ್ ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹ ನೀಡಿದ್ದಾರೆ. ಲಂಡನ್​ನಲ್ಲಿ ಬೋರಿಸ್, ಹಾಗೂ ಖಜಾನೆಯ ಚಾನ್ಸೆಲರ್ ರಿಶಿ ಸುನಕ್ ಸೇರಿ ಹಲವರು ಭಾಗಿಯಾಗಿದ್ರು.

ಕೊರಿಯರ್​ಗೂ ಕೊರೊನಾ ಕುತ್ತು..! ಕ್ರೂರಿ ವೈರಸ್ ಕೇವಲ ದೊಡ್ಡ ದೊಡ್ಡ ಉದ್ದಿಮೆಗಳನ್ನ ಮಾತ್ರ ಮಕಾಡೆ ಮಲಗಿಸಿಲ್ಲ. ವಸ್ತುಗಳನ್ನ ಪಾರ್ಸಲ್ ಮಾಡುವ ಕೊರಿಯರ್ ಸಂಸ್ಥೆಗಳಿಗೂ ಹೊಡೆತ ಕೊಟ್ಟಿದೆ. ಅಮೆರಿಕದಲ್ಲಿ ಕೊರೊನಾ ಸ್ಯಾಂಪಲ್ ಟೆಸ್ಟ್​ಗಳನ್ನ ಸಪ್ಲೂ ಮಾಡುವ ಕೊರಿಯರ್ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಕೊರಿಯರ್ ಸಿಬ್ಬಂದಿಗೆ ಸೂಕ್ತ ಪಿಪಿಇ ಕಿಟ್ ನೀಡದೇ ಇರೋದ್ರಿಂದ, ಸೋಂಕು ಹರಡುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಸೈಕಲ್​ನಲ್ಲಿ ಕೊರಿಯರ್ ಮಾಡ್ತಿದ್ದ ಕೆಲವರು ಕೆಲಸ ಬಿಡಲು ಮುಂದಾಗಿದ್ದಾರೆ.

ಕೊರೊನಾದಿಂದ ಚೀನಾಗೆ ಹೊಡೆತ: ಕೊರೊನಾ ಇಡೀ ವಿಶ್ವದ ಆರ್ಥಿಕತೆ ಹೊಡೆತ ಕೊಟ್ಟಿದೆ. ಲಾಕ್​ಡೌನ್ ಹೇರಿರೋದ್ರಿಂದ ಕೆಲಸಕಾರ್ಯಗಳಿಲ್ಲದೇ, ಉದ್ಯಮಗಳು ಬಂದ್ ಆಗಿವೆ. ಇದು ಕೊರೊನಾದ ಉಗಮ ಸ್ಥಾನ ಚೀನಾಗೂ ಹೊರತಾಗಿಲ್ಲ. ಹಲವು ಕಂಪನಿಗಳಿಂದ ಚೀನಾದಿಂದ ಕಾಲ್ ತೆಗೀತಿರೋದ್ರಿಂದ, ದೇಶದ ಆರ್ಥಿಕ ಬೆಳಗವಣಿಗೆ ಕುಂಠಿತವಾಗಿದೆ. ಇದನ್ನ ಪರೋಕ್ಷವಾಗಿ ಒಪ್ಪಿಕೊಂಡಿರುವ ಚೀನಾ, ಈ ವರ್ಷದ ಆರ್ಥಿಕ ಬೆಲವಣಿಗೆಯ ಗುರಿ ಹಾಕಿಕೊಳ್ಳುವುದನ್ನ ಕೈ ಬಿಟ್ಟಿದೆ.

ಮರೆಯಲ್ಲಿ ಮಾಸ್ಕ್ ಧರಿಸಿದ್ದ ಟ್ರಂಪ್..! ಕೊರೊನಾ ಅಮೆರಿಕದಲ್ಲಿ ಎಷ್ಟೇ ಅಟ್ಟಹಾಸ ಮೆರೀತಿದ್ರೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಮಾಸ್ಕ್ ಧರಿಸುತ್ತಿಲ್ಲ. ವೈಟ್ ಹೌಸ್​ನಲ್ಲಿ ವೈರಸ್ ಹೊಕ್ಕಿದ್ರೂ ಕ್ಯಾರೆ ಅನ್ನದ ಟ್ರಂಪ್, ಫೋರ್ಟ್ ಕಂಪನಿಯ ಘಟಕಕ್ಕೆ ಭೇಟಿ ನೀಡಿದಾಗ, ಘಟಕದ ಒಳಗೆ ಮಾಸ್ಕ್ ಧರಿಸಿದ್ದಾರೆ. ಧರಿಸಿದ ಮಾಸ್ಕ್ ಅನ್ನೂ ಮಾಧ್ಯಮದವರಿಗೆ ತೋರಿಸಿದ ಟ್ರಂಪ್, ನಿಮ್ಮ ಎದುರು ಮಾಸ್ಕ್ ಧರಿಸುವುದಿಲ್ಲ ಅಂತಾ ಹೇಳುತ್ತಲೇ ತೆರಳಿದ್ರು. ಫೋರ್ಟ್ ನಿಯಮಂದಂತೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು.