AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಸಿಕೆ ಪಡೆದು ಹೃದಯಾಘಾತಕ್ಕೆ ಒಳಗಾದ ಹುಡುಗ ಈಗ ಕೋಟ್ಯಾಧಿಪತಿ!

ಕೊರೊನಾ ಲಸಿಕೆ ಪಡೆದ ಬಳಿಕ ನಡೆಸಿದ ಪರೀಕ್ಷೆಯಲ್ಲಿ ಆತನಿಗೆ ಅಡ್ಡಪರಿಣಾಮಗಳು ಉಂಟಾಗಿರುವುದು ಕೂಡ ಖಚಿತವಾಗಿದೆ. ಸರ್ಕಾರದ ವರದಿಯಂತೆ ವೈರಲ್ ಇನ್ಫೆಕ್ಷನ್​ನಿಂದ ಈ ಅಡ್ಡಪರಿಣಾಮ ಕಂಡುಬಂದಿದೆ.

ಕೊರೊನಾ ಲಸಿಕೆ ಪಡೆದು ಹೃದಯಾಘಾತಕ್ಕೆ ಒಳಗಾದ ಹುಡುಗ ಈಗ ಕೋಟ್ಯಾಧಿಪತಿ!
ಲಸಿಕೆ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on: Aug 20, 2021 | 1:25 PM

Share

ಸಿಂಗಾಪುರ: ವಿವಿಧ ದೇಶಗಳ ಸರ್ಕಾರಗಳು ಕೊರೊನಾ ವಿರುದ್ಧ ಕೊವಿಡ್-19 ಲಸಿಕೆಯ ಸಮರ ಸಾರಿದೆ. ಹಲವು ಬಗೆಯಿಂದ ಜನರು ಲಸಿಕೆ ಪಡೆದುಕೊಳ್ಳುವಂತೆ ಎಲ್ಲಾ ದೇಶಗಳು ಶ್ರಮಿಸುತ್ತಿವೆ. ಆದರೆ, ಯಾವುದೇ ಸರ್ಕಾರ ಕೂಡ ಜನರಿಗೆ ಲಸಿಕೆ ನೀಡಿ ಅವರನ್ನು ಕೋಟ್ಯಾಧಿಪತಿಯಾಗಿ ಮಾಡಿರುವ ವಿಚಾರ ನೀವು ಕೇಳಿರಲಿಕ್ಕಿಲ್ಲ. ಅಂತಹಾ ಒಂದು ವಿಚಿತ್ರ, ಆಶ್ಚರ್ಯಕರ ಆದರೂ ಸತ್ಯವಾದ ಘಟನೆ ಸಿಂಗಾಪುರ್​ನಲ್ಲಿ ನಡೆದಿದೆ. 16 ವರ್ಷದ ಬಾಲಕನಿಗೆ ಕೊರೊನಾ ಲಸಿಕೆ ಊಹಿಸಲೂ ಆಗದಂತ ಬದಲಾವಣೆ ತಂದಿದೆ. ಆ ಬಾಲಕ ಲಸಿಕೆ ಪಡೆದ ಮೊದಲಿಗೆ ಅನಾರೋಗ್ಯಕ್ಕೆ ಒಳಗಾಗಿದ್ದಾನೆ. ನಂತರ ತಕ್ಷಣ ಶ್ರೀಮಂತನೂ ಆಗಿದ್ದಾನೆ. ಹಾಗೆಂದು ಸಂಭ್ರಮಿಸುವ ವಿಚಾರ ಇದಲ್ಲ.

ಈ ಬಾಲಕ ಕೊರೊನಾ ಲಸಿಕೆ ಫೈಜರ್ ಪಡೆದ ಆರು ದಿನಗಳ ಬಳಿಕ ಹೃದಯಾಘಾತ ಅನುಭವಿಸಿದ್ದಾನೆ. ಒಂದೆಡೆ ಈ ನೋವಿನಲ್ಲಿ, ಆರೋಗ್ಯ ಸಮಸ್ಯೆಯಲ್ಲಿ ಇರುವ ಸಂದರ್ಭ ಸಿಂಗಾಪುರದ ಆರೋಗ್ಯ ಸಚಿವಾಲಯ ಆತನಿಗೆ ಉತ್ತಮ ಸಮಾಚಾರ ಒಂದು ನೀಡಿದೆ. ಅದೇನೆಂದರೆ ಅಲ್ಲಿನ ಆರೋಗ್ಯ ಸಚಿವಾಲಯ ಆತನಿಗೆ ಪರಿಹಾರವಾಗಿ ಕೋಟಿ ರೂಪಾಯಿ ನೀಡಿದೆ.

ಕೊರೊನಾ ಲಸಿಕೆ ಪಡೆದ ಬಳಿಕ ಅದರಿಂದ ಆರೋಗ್ಯ ಸಮಸ್ಯೆ ಎದುರಾದರೆ ಹಣಕಾಸು ನೆರವು ನೀಡುವುದಾಗಿ ಸಿಂಗಾಪುರ ಸರ್ಕಾರ ಹೇಳಿದೆ. ಸಿಂಗಾಪುರದ ವ್ಯಾಕ್ಸಿನ್ ಇಂಜುರಿ ಫೈನಾನ್ಶಿಯಲ್ ಅಸಿಸ್ಟನ್ಸ್ ಪ್ರೋಗ್ರಾಂ (VIFAP) ಅನ್ವಯ ನೆರವು ನೀಡಲಾಗುತ್ತದೆ. ಅದರಂತೆ, ಈ ಪ್ರಕರಣದಲ್ಲಿ ಹುಡುಗ ಲಸಿಕೆ ಪಡೆದ ನಂತರ ಆರೋಗ್ಯ ಸಮಸ್ಯೆ ಎದುರಿಸಿದ್ದಾನೆ. ಹಾಗಾಗಿ, ಆತನಿಗೆ ಪರಿಹಾರವಾಗಿ ಸಿಂಗಾಪುರ ಸರ್ಕಾರ 2.25 ಲಕ್ಷ ಸಿಂಗಾಪುರ ಡಾಲರ್ಸ್ ನೀಡಿದೆ. ಅಂದರೆ, ಭಾರತದಲ್ಲಿ ಅದು 1.23 ಕೋಟಿ ರೂಪಾಯಿಗಳಷ್ಟು ಆಗುತ್ತದೆ!

ಕೊರೊನಾ ಲಸಿಕೆ ಪಡೆದ ಬಳಿಕ ನಡೆಸಿದ ಪರೀಕ್ಷೆಯಲ್ಲಿ ಆತನಿಗೆ ಅಡ್ಡಪರಿಣಾಮಗಳು ಉಂಟಾಗಿರುವುದು ಕೂಡ ಖಚಿತವಾಗಿದೆ. ಸರ್ಕಾರದ ವರದಿಯಂತೆ ವೈರಲ್ ಇನ್ಫೆಕ್ಷನ್​ನಿಂದ ಈ ಅಡ್ಡಪರಿಣಾಮ ಕಂಡುಬಂದಿದೆ. ಎದೆ ನೋವು, ಉಸಿರಾಟದ ಸಮಸ್ಯೆ ಕೂಡ ಆತನಿಗೆ ಅಡ್ಡಪರಿಣಾಮಗಳಾಗಿ ಕಂಡುಬಂದಿರಬಹುದು ಎಂದು ಹೇಳಲಾಗಿದೆ.

ಹೃದಯಾಘಾತದ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಆತ ಆರೋಗ್ಯವಾಗಿ ಇದ್ದಾನೆ ಎಂದು ಸರ್ಕಾರ ಹೇಳಿದೆ. ಇನ್ನು ಕೆಲವು ದಿನಗಳ ಚಿಕಿತ್ಸೆ ಆತನಿಗೆ ಬೇಕಿದೆ ಎಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ಹೇಳಿದೆ. ಸಿಂಗಾಪುರದಲ್ಲಿ ಲಸಿಕೆಯಿಂದ ಅಡ್ಡಪರಿಣಾಮ ಉಂಟಾದಂತಹ ಘಟನೆಗಳು ಹೆಚ್ಚು ಸಂಭವಿಸಿಲ್ಲ. ಬಹುತೇಕ ಎಲ್ಲರೂ ಲಸಿಕೆಯಿಂದ ಧನಾತ್ಮಕ ಫಲಿತಾಂಶವನ್ನೇ ಪಡೆದಿದ್ದಾರೆ. ಈ ಹುಡುಗನ ಪ್ರಕರಣ ಮಾತ್ರ ಭಿನ್ನಾವಾಗಿತ್ತು.

ಇದನ್ನೂ ಓದಿ: Intel: ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ತಲಾ 18,600 ರೂಪಾಯಿಯನ್ನು ಉದ್ಯೋಗಿಗಳಿಗೆ ನೀಡುತ್ತಿದೆ ಈ ಕಂಪೆನಿ

ಅಫ್ಘಾನಿಸ್ತಾನಕ್ಕೆ ಹಣ ನೀಡದಿರಲು ಐಎಂಎಫ್ ನಿರ್ಧಾರ; ಆರ್ಥಿಕ ಬಲ ಇಲ್ಲದೆ ತಾಲಿಬಾನಿಗಳು ಕಂಗಾಲು

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್