ಬೀಜಿಂಗ್: ಚೀನಾದಲ್ಲಿ ಮತ್ತೆ ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳು (Covid Cases) ಇದೀಗ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಚೀನಾದಲ್ಲಿ (China Coronavirus Variant) ಕಾಣಿಸಿಕೊಂಡಿರುವ ಕೊವಿಡ್ನ ಬಿಎಫ್.7 ಉಪರೂಪಾಂತರಿ ಕೊವಿಡ್ ಪ್ರಕರಣಗಳ ಭಾರೀ ಏರಿಕೆಗೆ ಕಾರಣವಾಗಬಹುದು ಎನ್ನಲಾಗುತ್ತಿದೆ. ಸಂಶೋಧಕರ ಪ್ರಕಾರ, ಕೊರೊನಾವೈರಸ್‌ನ ಬಿಎ.5 ಉಪರೂಪಾಂತರಿ ಕೂಡ ಮನುಷ್ಯನ ಮೆದುಳಿನ ಮೇಲೆ ದಾಳಿ ಮಾಡಲು ವಿಕಸನಗೊಳ್ಳುತ್ತಿರಬಹುದು.
ವಿಜ್ಞಾನಿಗಳ ಹೊಸ ಅಧ್ಯಯನವು ಕೊವಿಡ್ ವೈರಸ್‌ಗಳು ವಿಕಸನಗೊಂಡಂತೆ ಕಡಿಮೆ ಅಪಾಯಕಾರಿಯಾಗುತ್ತವೆ ಎಂಬ ಊಹೆಗಳಿಗೆ ಸವಾಲು ಹಾಕಿದೆ. ಕೊವಿಡ್ -19 ಮಾನವನ ದೇಹದ ಮೇಲೆ ದಾಳಿ ಮಾಡುವ ಮಾರ್ಗವನ್ನು ಬದಲಾಯಿಸುತ್ತಿರಬಹುದು ಮತ್ತು ಮನುಷ್ಯನ ಉಸಿರಾಟದ ವ್ಯವಸ್ಥೆಯ ಬದಲಿಗೆ ಮೆದುಳನ್ನು ಹೆಚ್ಚು ಗುರಿಯಾಗಿಸಿಕೊಳ್ಳುತ್ತಿರಬಹುದು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಇದನ್ನೂ ಓದಿ: ಚೆನ್ನೈ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದ ಇಬ್ಬರಿಗೆ ಕೊವಿಡ್ ಸೋಂಕು ದೃಢ
ಹಿಂದಿನ BA.1 ಸಬ್‌ವೇರಿಯಂಟ್‌ಗೆ ಹೋಲಿಸಿದರೆ ಚೀನಾದಲ್ಲಿ ಇದೀಗ ಕಾಣಿಸಿಕೊಂಡಿರುವ BF.7 ಉಪರೂಪಾಂತರಿ ಹೆಚ್ಚು ಆತಂಕಕಾರಿಯಾಗಿದೆ. ಇದಕ್ಕೂ ಹಿಂದೆ ಇದ್ದ BA.5 ಎಂಬ ಸಬ್‌ವೇರಿಯಂಟ್ ಇಲಿಗಳ ಮಿದುಳುಗಳು ಮತ್ತು ಮಾನವ ಮೆದುಳಿನ ಅಂಗಾಂಶಗಳಿಗೆ ತೀವ್ರ ಹಾನಿಯನ್ನುಂಟುಮಾಡಿದೆ ಎಂದು ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ನ ಸಂಶೋಧಕರು ಹೇಳಿದ್ದಾರೆ. ಮೆದುಳಿನ ಮೇಲಿನ ದಾಳಿಯು ಮೆದುಳಿನ ಉರಿಯೂತ, ತೂಕ ಕಡಿಮೆಯಾಗುವುದು ಮತ್ತು ಸಾವಿಗೂ ಕಾರಣವಾಗಿದೆ ಎಂದು ಚೀನಾ ಮೂಲದ ದಿನಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: Covid Alert: ಚೀನಾದಿಂದ ಬರುವ ಪ್ರಯಾಣಿಕರಿಗೆ ಅಮೆರಿಕದಲ್ಲಿ ಕೊವಿಡ್ ಪರೀಕ್ಷೆ ಕಡ್ಡಾಯ
ಆದರೆ, ಸದ್ಯಕ್ಕೆ ಇಲಿಗಳ ಮೇಲೆ ಈ ಪ್ರಯೋಗ ಮಾಡಲಾಗಿರುವುದರಿಂದ ಇದು ಇಲಿಗಳ ಮೆದುಳಿಗೆ ಮಾತ್ರ ಅನ್ವಯವಾಗಬಹುದು. ಮನುಷ್ಯರ ಮೆದುಳಿನ ಮೇಲೆ ಅಷ್ಟು ಗಾಢವಾದ ಪರಿಣಾಮ ಉಂಟಾಗಲಾರದು ಎಂದು ಕೂಡ ಕೆಲವು ತಜ್ಞರು ಹೇಳಿದ್ದಾರೆ.
ಕೊವಿಡ್ನಿಂದ ಚೀನಾ 2 ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ಜನರನ್ನು ಕಳೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಆದರೆ ಕೆಲವು ಜಾಗತಿಕ ಆರೋಗ್ಯ ತಜ್ಞರು ಕೊರೊನಾವೈರಸ್ ಪ್ರತಿದಿನ 1 ಮಿಲಿಯನ್ ಜನರಿಗೆ ಸೋಂಕು ತಗುಲಿಸಬಹುದು ಎಂದು ಅಂದಾಜಿಸಿದ್ದಾರೆ. ಚೀನಾದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ಚೀನಾ ಪ್ರತಿದಿನ ಕೊವಿಡ್ ಸೋಂಕಿತರ ಪಟ್ಟಿಯನ್ನು ಬಿಡುಗಡೆ ಮಾಡುವುದನ್ನೇ ನಿಲ್ಲಿಸಿದೆ. ಇದು ಬೇರೆ ದೇಶಗಳಲ್ಲಿ ಕಳವಳ ಉಂಟುಮಾಡಿದೆ.