ಮಿಂಕ್ಗಳ ಮೇಲೂ ಕೊರೊನಾ ಅಟ್ಟಹಾಸ | Covid-19 pandemic killing minks in US
ಕೊರೊನಾ ಸೋಂಕಿನ ಉಪಟಳ, ಭೀತಿ ಸಧ್ಯಕ್ಕೇನೂ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ವಿಶ್ವದಾದ್ಯಂತ ಸೋಂಕಿನ ಪ್ರಕರಣಗಳು ಕ್ರಮೇಣ ಕಡಿಮೆಯಾದಾಗ ಜನ ಸದ್ಯ ಬಚಾವಾದೆವು ಅಂತ ನಿಟ್ಟುಸಿರಾಗಿದ್ದರು. ಆದರೆ ಕೊವಿಡ್-19 ವ್ಯಾಧಿಯ ಎರಡನೇ ಅಲೆ ವಕ್ಕರಿಸಲಾರಂಭಿಸಿದ್ದು ಜನರನ್ನು ಮತ್ತೊಮ್ಮೆ ತಲ್ಲಣಿಸುವಂತೆ ಮಾಡಿದೆ. ನಿಮಗೆ ಕೇಳಿ ಆಶ್ಚರ್ಯವಾಗಬಹದು. ಈಗಷ್ಟೇ ಹೊಸ ಅಧ್ಯಕ್ಷನನ್ನು ಆಯ್ಕೆಮಾಡಿಕೊಂಡಿರುವ ಅಮೆರಿಕಾದಲ್ಲಿ ಇವತ್ತು ಒಂದೇ ದಿನ 2,00,000 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮಹಾಮಾರಿಗೆ ಲಕ್ಷಾಂತರ ಜನ ಬಲಿಯಾಗಿದ್ದಾರೆ ಮತ್ತು ಮತ್ತು ಸಾಯುವವರ ಸಂಖ್ಯೆ ಇನ್ನೂ ನಿಂತಿಲ್ಲ. […]
ಕೊರೊನಾ ಸೋಂಕಿನ ಉಪಟಳ, ಭೀತಿ ಸಧ್ಯಕ್ಕೇನೂ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ವಿಶ್ವದಾದ್ಯಂತ ಸೋಂಕಿನ ಪ್ರಕರಣಗಳು ಕ್ರಮೇಣ ಕಡಿಮೆಯಾದಾಗ ಜನ ಸದ್ಯ ಬಚಾವಾದೆವು ಅಂತ ನಿಟ್ಟುಸಿರಾಗಿದ್ದರು. ಆದರೆ ಕೊವಿಡ್-19 ವ್ಯಾಧಿಯ ಎರಡನೇ ಅಲೆ ವಕ್ಕರಿಸಲಾರಂಭಿಸಿದ್ದು ಜನರನ್ನು ಮತ್ತೊಮ್ಮೆ ತಲ್ಲಣಿಸುವಂತೆ ಮಾಡಿದೆ. ನಿಮಗೆ ಕೇಳಿ ಆಶ್ಚರ್ಯವಾಗಬಹದು. ಈಗಷ್ಟೇ ಹೊಸ ಅಧ್ಯಕ್ಷನನ್ನು ಆಯ್ಕೆಮಾಡಿಕೊಂಡಿರುವ ಅಮೆರಿಕಾದಲ್ಲಿ ಇವತ್ತು ಒಂದೇ ದಿನ 2,00,000 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮಹಾಮಾರಿಗೆ ಲಕ್ಷಾಂತರ ಜನ ಬಲಿಯಾಗಿದ್ದಾರೆ ಮತ್ತು ಮತ್ತು ಸಾಯುವವರ ಸಂಖ್ಯೆ ಇನ್ನೂ ನಿಂತಿಲ್ಲ.
ಅಂದಹಾಗೆ, ಕೊರೊನಾ ಸೋಂಕು ಕೇವಲ ಮನುಕುಲವನ್ನಷ್ಟೇ ಬಾಧಿಸುತ್ತಿಲ್ಲ. ಪ್ರಾಣಿಗಳಿಗೂ ಸೋಂಕು ತಗುಲಿ ಅವು ಆಹುತಿಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಅಮೆರಿಕದಲ್ಲಿ, ಈ ಸೋಂಕು ಪ್ರಾಣಿಗಳ ಮೇಲೆ ರುದ್ರನರ್ತನ ನಡೆಸುತ್ತಿರುವುದು ಅಲ್ಲಿನ ಜನರನ್ನು ಆತಂಕಕ್ಕೀಡು ಮಾಡಿದೆ. ಮಿಂಕ್ ಹೆಸರಿನ ಪ್ರಾಣಿಗಳು ನಿಮಗೆ ಗೊತ್ತಲ್ಲ? ಮೈಮೇಲೆ ಉಣ್ಣೆ ಹೊದ್ದು ನೋಡಲು ಮುಂಗುಸಿಯಂತೆ ಕಾಣುವ ಮಿಂಕ್ಗಳಿಗೆ ಕನ್ನಡದಲ್ಲಿ ನಿರ್ದಿಷ್ಟವಾದ ಪದವಿಲ್ಲ. ಲಭ್ಯವಾಗಿರುವ ಮಾಹಿತಿಯೊಂದರ ಪ್ರಕಾರ ಅಮೆರಿಕದಲ್ಲಿ ಸುಮಾರು 15,000 ಹೆಚ್ಚು ಮಿಂಕ್ಗಳು ಕೊರೊನಾ ಸೋಂಕಿನಿಂದ ಸಾವನ್ನಪ್ಪಿವೆ. ಯುಟಾ, ವಿಸ್ಕಾನ್ಸಿನ್ ಮತ್ತು ಮಿಚಿಗನ್ ರಾಜ್ಯಗಳಲ್ಲಿ ಮಿಂಕ್ಗಳು ಸಾಯುತ್ತಿರುವುದು ವರದಿಯಾಗಿದೆ.
ಯುಎಸ್ ಕೃಷಿ ಇಲಾಖೆ ಇದಕ್ಕೆ ಸಂಬಂಧಿಸಿದ ಜೈವಿಕ ಸುರಕ್ಷಾ ಕ್ರಮಗಳನ್ನು ಜಾರಿಗೊಳಿಸುವುದರ ಜೊತೆಗೆ ಕೊರೊನಾ ಪೀಡಿತ ಮಿಂಕ್ ಫಾರ್ಮ್ಗಳನ್ನು ರಕ್ಷಿಸುವಂತಹ ಯೋಜನೆಗಳನ್ನು ರೂಪಿಸುವ ಪ್ರಯೋಗದಲ್ಲಿ ಯಶ ಕಾಣುವ ನಿರೀಕ್ಷೆಯಲ್ಲಿದೆ. ಮಿಂಕ್ಗಳಲ್ಲಿ ಸೋಂಕನ್ನು ಆಗಸ್ಟ್ ತಿಂಗಳಲ್ಲಿ ದೃಢೀಕರಿಸಿದ ಮೊದಲ ರಾಜ್ಯ ಯುಟಾನಲ್ಲಿನ ಒಂಬತ್ತು ಸಾಕಾಣಿಕೆ ಕೇಂದ್ರಗಳಲ್ಲಿದ್ದ ಮಿಂಕ್ಗಳೂ ಸೇರಿದಂತೆ ಒಟ್ಟು 10,700 ಮಿಂಕ್ಗಳು ಸಾವನ್ನಪ್ಪಿವೆ. ಈ ಪ್ರಾಣಿಗಳಿಗೆ ಮಾನವರಿಂದ ಕೊರೊನಾ ಸೋಂಕು ತಗುಲುತ್ತಿದೆಯೇ ಎನ್ನುವ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ.
Published On - 7:39 pm, Wed, 11 November 20