‘ಲಸಿಕೆ ತೆಗೆದುಕೊಂಡರೆ ಮಹಿಳೆಯರಿಗೆ ಗಡ್ಡ ಬರಬಹುದು.. ನೀವು ಮೊಸಳೆಯಾಗಬಹುದು’ -ಯಾರಪ್ಪಾ ಹೀಗಂದಿದ್ದು!
ಲಸಿಕೆಯ ಬಗ್ಗೆ ಅಷ್ಟೇನೂ ಆಸಕ್ತಿ ತೋರಿಸದ ಬ್ರೆಜಿಲ್ ಅಧ್ಯಕ್ಷ, ತಮ್ಮ ರಾಷ್ಟ್ರದಲ್ಲಿ ಲಸಿಕೆ ಉಚಿತ ಆದರೆ ಕಡ್ಡಾಯವಲ್ಲ ಎಂದಿದ್ದಾರೆ..ಆದರೆ ಅಲ್ಲಿನ ಸುಪ್ರೀಂಕೋರ್ಟ್, ಜನರಿಗೆ ಲಸಿಕೆಯನ್ನು ತೆಗೆದುಕೊಳ್ಳಲು ಬಲವಂತ ಮಾಡಬಾರದು..ಆದರೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದಿದೆ.
ಬ್ರೆಸಿಲಿಯಾ: ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಕೊರೊನಾ ಲಸಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊವಿಡ್-19 ಒಂದು ಸಣ್ಣ ಜ್ವರ ಎಂದು ಈ ಹಿಂದೆಯೇ ಹೇಳಿಕೆ ನೀಡಿದ್ದ ಜೈರ್ ಬೊಲ್ಸನಾರೋ, ನಾನಂತೂ ಯಾವ ಕಾರಣಕ್ಕೂ ಕೊರೊನಾ ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದು ಇತ್ತೀಚೆಗಷ್ಟೇ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಲಸಿಕೆ ತಯಾರಕರ ವಿರುದ್ಧವೂ ವ್ಯಂಗ್ಯವಾಡಿದ್ದಾರೆ.
ಸದ್ಯ ಅಮೆರಿಕದಲ್ಲಿ ಬಳಕೆಯಾಗುತ್ತಿರುವ, ಬ್ರೆಜಿಲ್ನಲ್ಲಿ ಪರೀಕ್ಷಾ ಹಂತದಲ್ಲಿರುವ ಫಿಜರ್ ಲಸಿಕೆಯ ಬಗ್ಗೆ ಮಾತನಾಡಿದ ಅಧ್ಯಕ್ಷ, ಫಿಜರ್ ಕಾಂಟ್ರಾಕ್ಟ್ನಲ್ಲಿಯೇ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ, ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಆದರೂ ನಾವು ಜವಾಬ್ದಾರರು ಅಲ್ಲವೆಂದು.. ಅಂದರೆ ಲಸಿಕೆ ತೆಗೆದುಕೊಂಡ ಬಳಿಕ ನೀವು ಮೊಸಳೆಯಾಗಬಹುದು.. ಸೂಪರ್ ಶಕ್ತಿಯುಳ್ಳ ಮನುಷ್ಯರಾಗಬಹುದು, ಮಹಿಳೆಯರಿಗೆ ಗಡ್ಡ ಬೆಳೆಯಬಹುದು.. ಹಾಗೇ ಪುರುಷರು ಮಹಿಳೆಯರ ಧ್ವನಿಯಲ್ಲಿ ಮಾತನಾಡುವಂತೆ ಆಗಬಹುದು.. ಆದರೆ ಏನೇ ಆದರೂ ಲಸಿಕೆ ತಯಾರಕ ಕಂಪನಿ ಜವಾಬ್ದಾರಿ ಆಗುವುದಿಲ್ಲ ಎಂದು ಬೊಲ್ಸನಾರೋ ಹೇಳಿದ್ದಾರೆ.
ಲಸಿಕೆಯ ಬಗ್ಗೆ ಅಷ್ಟೇನೂ ಆಸಕ್ತಿ ತೋರಿಸದ ಬ್ರೆಜಿಲ್ ಅಧ್ಯಕ್ಷ, ತಮ್ಮ ರಾಷ್ಟ್ರದಲ್ಲಿ ಲಸಿಕೆ ಉಚಿತ ಆದರೆ ಕಡ್ಡಾಯವಲ್ಲ ಎಂದಿದ್ದಾರೆ..ಆದರೆ ಅಲ್ಲಿನ ಸುಪ್ರೀಂಕೋರ್ಟ್, ಜನರಿಗೆ ಲಸಿಕೆಯನ್ನು ತೆಗೆದುಕೊಳ್ಳಲು ಬಲವಂತ ಮಾಡಬಾರದು..ಆದರೆ ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಮಾಡಬೇಕು ಎಂದಿದೆ. ಅಂದರೆ ಯಾರು ಲಸಿಕೆ ತೆಗೆದುಕೊಂಡಿಲ್ಲವೋ ಅವರಿಗೆ ಆಯ್ದ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನೀಡಬಾರದು ಎಂಬ ಸೂಚನೆಯನ್ನು ಕೋರ್ಟ್ ನೀಡಿದೆ.
ಬ್ರೆಜಿಲ್ನಲ್ಲಿ ಈವರೆಗೆ 71 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲಿದ್ದು, 185,000 ಮಂದಿ ಮೃತಪಟ್ಟಿದ್ದಾರೆ.
Published On - 4:17 pm, Sat, 19 December 20