AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದಲ್ಲಿ ಒಂದೇ ದಿನ 40,000 ಮಂದಿಗೆ ಕೊವಿಡ್ ಸೋಂಕು: ಲಾಕ್​ಡೌನ್ ವಿರೋಧಿಸಿದ ಜನರ ಮೇಲೆ ಪೊಲೀಸರಿಂದ ಪೆಪ್ಪರ್ ಸ್ಪ್ರೇ

ಶಾಂಘೈನಲ್ಲಿ ನಡೆದ ಲಾಕ್​ಡೌನ್ ವಿರೋಧಿ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಪೆಪ್ಪರ್ ಸ್ಪ್ರೇ ಬಳಸಿದರು.

ಚೀನಾದಲ್ಲಿ ಒಂದೇ ದಿನ 40,000 ಮಂದಿಗೆ ಕೊವಿಡ್ ಸೋಂಕು: ಲಾಕ್​ಡೌನ್ ವಿರೋಧಿಸಿದ ಜನರ ಮೇಲೆ ಪೊಲೀಸರಿಂದ ಪೆಪ್ಪರ್ ಸ್ಪ್ರೇ
ಚೀನಾದಲ್ಲಿ ಕೊವಿಡ್
TV9 Web
| Edited By: |

Updated on:Nov 28, 2022 | 7:34 AM

Share

ಬೀಚಿಂಗ್: ಚೀನಾದ ಹಲವು ನಗರಗಳಲ್ಲಿ ಕೊವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದು, ಸರ್ಕಾರ ಮತ್ತೆ ಲಾಕ್​ಡೌನ್ ಮೊರೆ ಹೋಗಿದೆ. ಭಾನುವಾರ (ನ 27) ಒಂದೇ ದಿನ 40,000ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕೊವಿಡ್​ ನಿಯಂತ್ರಣಕ್ಕಾಗಿ ಅಲ್ಲಿನ ಸರ್ಕಾರವು ಘೋಷಿಸುತ್ತಿರುವ ಲಾಕ್​ಡೌನ್ ಆದೇಶಗಳು ಜನರನ್ನು ಸಿಟ್ಟಿಗೆಬ್ಬಿಸಿದೆ. ಈಗಾಗಲೇ ಸಾಕಷ್ಟು ಕಷ್ಟನಷ್ಟ ಅನುಭವಿಸಿರುವ ಜನರು ಇನ್ನೊಂದು ಸುತ್ತಿನ ಕ್ವಾರಂಟೈನ್, ಸಾಮೂಹಿಕ ತಪಾಸಣೆಗಳು ಹಾಗೂ ಸುದೀರ್ಘ ನಿರ್ಬಂಧ ಆದೇಶಗಳನ್ನು ಸಹಿಸುವ ಸ್ಥಿತಿಯಲ್ಲಿ ಇಲ್ಲ. ಜನರ ಆಕ್ರೋಶವು ಪ್ರತಿಭಟನೆಗಳಾಗಿ ಜನಾಕ್ರೋಶವು ಸ್ಫೋಟಗೊಳ್ಳುತ್ತಿರುವುದು ಅಲ್ಲಿನ ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಚೀನಾದ ಷಿನ್​ಜಿಯಾಂಗ್ ಪ್ರಾಂತ್ಯದ ರಾಜಧಾನಿ ಉರುಂಖಿ ನಗರದಲ್ಲಿ ಕಳೆದ ಗುರುವಾರ ಸಂಭವಿಸಿದ ಬೆಂಕಿ ಅನಾಹುತವು ಜನರಲ್ಲಿದ್ದ ಸಿಟ್ಟನ್ನು ಮತ್ತಷ್ಟು ಹೆಚ್ಚಿಸಿತು. ರಕ್ಷಣಾ ಕಾರ್ಯಾಚರಣೆಗೆ ಕೊವಿಡ್​ ಲಾಕ್​ಡೌನ್ ನಿರ್ಬಂಧಗಳಿಂದ ತೊಂದರೆಯಾಯಿತು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರ ರಾತ್ರಿ ಬೀಜಿಂಗ್ ನಗರದ ನದಿ ದಂಡೆಯ ಮೇಲೆ ಸುಮಾರು 400 ಮಂದಿ ಸೇರಿ, ಹಲವು ಗಂಟೆಗಳವರೆಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಅವರು ‘ನಾವು ಷಿನ್​ಜಿಯಾಂಗ್​ ಜನರು, ಚೀನಾದ ಜನರೇ ದೂರ ಹೋಗಿ’ ಎಂದು ಕೂಗಿದ್ದರು. ಈ ವೇಳೆ ಅವರು ರಾಷ್ಟ್ರಗೀತೆ ಹಾಡಿದರಲ್ಲದೆ ಭಾಷಣಗಳನ್ನೂ ಕೇಳಿದರು. ನದಿಯ ಮತ್ತೊಂದು ದಂಡೆಯಲ್ಲಿ ಪೊಲೀಸ್ ವಾಹನಗಳು ಕಾದು ನಿಂತಿದ್ದವು.

ಲಾಕ್​ಡೌನ್ ಹೆಸರಿನಲ್ಲಿ ಹಲವು ಅಪಾರ್ಟ್​ಮೆಂಟ್ ಹಾಗೂ ಕಟ್ಟಡ ಸಮುಚ್ಚಯಗಳಿಗೂ ಬೀಗಮುದ್ರೆ ಹಾಕಲಾಗಿದೆ. ಈ ಕಟ್ಟಡಗಳ ಕಾಂಪೌಂಡ್​ ಒಳಗೆ ಜನರು ಪ್ರತಿಭಟನೆ ಆರಂಭಿಸಿದ್ದಾರೆ. ಈ ವೇಳೆ ಆಡಳಿತಾರೂಢ ಚೀನಾ ಕಮ್ಯುನಿಸ್ಟ್‌ ಪಕ್ಷ (ಸಿಪಿಸಿ) ಮತ್ತು ಅಧ್ಯಕ್ಷ ಷಿ ಜಿನ್‌ಪಿಂಗ್‌ ವಿರುದ್ಧ ಘೋಷಣೆಗಳನ್ನು ಕೂಗುವುದು ಸಾಮಾನ್ಯ ಸಂಗತಿ ಎನಿಸಿದೆ. ವಿಶ್ವವಿದ್ಯಾಲಯ ಮತ್ತು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಹ ಪ್ರತಿಭಟನೆಗಳಲ್ಲಿ ಕೈಜೋಡಿಸಿದ್ದಾರೆ. ಇಂಥ ದೃಶ್ಯಗಳಿರುವ ವಿಡಿಯೊ ತುಣುಕುಗಳು ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಶಾಂಘೈನಲ್ಲಿ ನಡೆದ ಲಾಕ್​ಡೌನ್ ವಿರೋಧಿ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಪೆಪ್ಪರ್ ಸ್ಪ್ರೇ ಬಳಸಿದರು. ಈ ವೇಳೆ ಜನರು ‘ಷಿ ಜಿನ್​ಪಿಂಗ್ ಅಧಿಕಾರದಿಂದ ಕೆಳಗಿಳಿಯಲಿ, ಕಮ್ಯುನಿಷ್ಟ ಪಕ್ಷವು ಅಧಿಕಾರ ತ್ಯಾಗ ಮಾಡಲಿ, ಜನರಿಗೆ ಸ್ವಾತಂತ್ರ್ಯ ಸಿಗಲಿ’ ಎಂದು ಘೋಷಣೆ ಕೂಗಿದರು. ಆರ್ಥಿಕ ಹಿಂಜರಿತದ ಭೀತಿಯಲ್ಲಿ ಸಿಲುಕಿರುವ ಚೀನಾದಲ್ಲಿ ಕೊವಿಡ್​ ಲಾಕ್​ಡೌನ್ ನಿಭಾಯಿಸುವುದು ಅಲ್ಲಿನ ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Published On - 7:34 am, Mon, 28 November 22

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್