Pushpa Kamal Dahal Prachanda: ಮೂರನೇ ಬಾರಿ ನೇಪಾಳದ ಪ್ರಧಾನಿಯಾಗಿ ಪುಷ್ಪ ಕಮಲ್ ದಹಾಲ್ ಪ್ರಚಂಡ ನೇಮಕ

| Updated By: ರಶ್ಮಿ ಕಲ್ಲಕಟ್ಟ

Updated on: Dec 25, 2022 | 8:08 PM

275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಪ್ರಚಂಡ ಅವರು 165 ಶಾಸಕರ ಬೆಂಬಲವನ್ನು ಹೊಂದಿದ್ದಾರೆ.ಇದರಲ್ಲಿ ಸಿಪಿಎನ್-ಯುಎಂಎಲ್ 78, ಸಿಪಿಎನ್-ಎಂಸಿ 32, ಆರ್‌ಎಸ್‌ಪಿ 20, ಆರ್‌ಪಿಪಿ 14, ಜೆಎಸ್‌ಪಿ 12, ಜನಮತ್ 6 ಮತ್ತು ನಾಗರೀಕ್ ಉನ್ಮುಕ್ತಿ ಪಾರ್ಟಿ 3 ಸೇರಿವೆ. ಪ್ರಚಂಡ ನೇಪಾಳದ ಪ್ರಧಾನಿಯಾಗಿ ಮೂರನೇ ಬಾರಿಗೆ ನೇಮಕವಾಗುತ್ತಿದ್ದಾರೆ.

Pushpa Kamal Dahal Prachanda: ಮೂರನೇ ಬಾರಿ ನೇಪಾಳದ ಪ್ರಧಾನಿಯಾಗಿ ಪುಷ್ಪ ಕಮಲ್ ದಹಾಲ್ ಪ್ರಚಂಡ ನೇಮಕ
ಪುಷ್ಪ ಕಮಲ್ ದಹಾಲ್ ‘ಪ್ರಚಂಡ’
Follow us on

ಕಠ್ಮಂಡು: ನೇಪಾಳದ (Nepal) ನೂತನ ಪ್ರಧಾನಿಯಾಗಿ ಸಿಪಿಎನ್-ಮಾವೋವಾದಿ ಕೇಂದ್ರದ ಅಧ್ಯಕ್ಷ ಪುಷ್ಪ ಕಮಲ್ ದಹಾಲ್ ‘ಪ್ರಚಂಡ’(Pushpa Kamal Dahal Prachanda) ಅವರನ್ನು ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ(Bidya Devi Bhandari) ಭಾನುವಾರ ನೇಮಕ ಮಾಡಿದ್ದಾರೆ. ಪ್ರಚಂಡ ಅವರನ್ನು ನೇಪಾಳದ ಪ್ರಧಾನ ಮಂತ್ರಿಯಾಗಿ ಸಂವಿಧಾನದ 76 ನೇ ವಿಧಿ 2 ರ ಪ್ರಕಾರ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸಂವಿಧಾನದ 76 ನೇ ವಿಧಿ 2 ರಲ್ಲಿ ನಿಗದಿಪಡಿಸಿದಂತೆ ಎರಡು ಅಥವಾ ಹೆಚ್ಚಿನ ಪಕ್ಷಗಳ ಬೆಂಬಲದೊಂದಿಗೆ ಬಹುಮತವನ್ನು ಗಳಿಸಬಹುದಾದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಯಾವುದೇ ಸದಸ್ಯರನ್ನು ಪ್ರಧಾನ ಮಂತ್ರಿ ಹುದ್ದೆಗೆ ಹಕ್ಕು ಸಲ್ಲಿಸಲು ರಾಷ್ಟ್ರಪತಿಗಳು ಕರೆದಿದ್ದರು. ರಾಷ್ಟ್ರಪತಿಗಳು ನೀಡಿದ್ದ ಗಡುವು ಭಾನುವಾರ ಸಂಜೆ 5 ಗಂಟೆಗೆ ಮುಗಿಯುವ ಮುನ್ನವೇ 68 ವರ್ಷದ ಪ್ರಚಂಡ ಹಕ್ಕು ಸಲ್ಲಿಸಿದ್ದರು. ನೂತನ ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸೋಮವಾರ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ರಾಷ್ಟ್ರಪತಿ ಕಚೇರಿ ತಿಳಿಸಿದೆ. ಪ್ರಚಂಡ ಅವರು ಸಿಪಿಎನ್-ಯುಎಂಎಲ್ ಅಧ್ಯಕ್ಷ ಕೆಪಿ ಶರ್ಮಾ ಒಲಿ, ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಅಧ್ಯಕ್ಷ ರವಿ ಲಮಿಚಾನೆ, ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ ಮುಖ್ಯಸ್ಥ ರಾಜೇಂದ್ರ ಲಿಂಗ್ಡೆನ್ ಸೇರಿದಂತೆ ಇತರ ಉನ್ನತ ನಾಯಕರು ಈ ಹಿಂದೆ ರಾಷ್ಟ್ರಪತಿ ಕಚೇರಿಗೆ ತೆರಳಿ ಅವರನ್ನು ಹೊಸ ಪ್ರಧಾನಿಯಾಗಿ ನೇಮಿಸುವ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಪ್ರಚಂಡ ಅವರು 165 ಶಾಸಕರ ಬೆಂಬಲವನ್ನು ಹೊಂದಿದ್ದಾರೆ.ಇದರಲ್ಲಿ ಸಿಪಿಎನ್-ಯುಎಂಎಲ್ 78, ಸಿಪಿಎನ್-ಎಂಸಿ 32, ಆರ್‌ಎಸ್‌ಪಿ 20, ಆರ್‌ಪಿಪಿ 14, ಜೆಎಸ್‌ಪಿ 12, ಜನಮತ್ 6 ಮತ್ತು ನಾಗರೀಕ್ ಉನ್ಮುಕ್ತಿ ಪಾರ್ಟಿ 3 ಸೇರಿವೆ. ಪ್ರಚಂಡ ನೇಪಾಳದ ಪ್ರಧಾನಿಯಾಗಿ ಮೂರನೇ ಬಾರಿಗೆ ನೇಮಕವಾಗುತ್ತಿದ್ದಾರೆ.

ಡಿಸೆಂಬರ್ 11, 1954 ರಂದು ಪೋಖರಾ ಬಳಿಯ ಕಸ್ಕಿ ಜಿಲ್ಲೆಯ ಧಿಕುರ್ಪೋಖಾರಿಯಲ್ಲಿ ಜನಿಸಿದ ಪ್ರಚಂಡ ಅವರು ಸುಮಾರು 13 ವರ್ಷಗಳ ಕಾಲ ಭೂಗತರಾಗಿದ್ದರು. ಸಿಪಿಎನ್-ಮಾವೋವಾದಿಗಳು ಶಾಂತಿಯುತ ರಾಜಕೀಯವನ್ನು ಅಳವಡಿಸಿಕೊಂಡಾಗ ದಶಕದ ಸಶಸ್ತ್ರ ದಂಗೆಯನ್ನು ಕೊನೆಗೊಳಿಸಿ ಅವರು ಮುಖ್ಯವಾಹಿನಿಯ ರಾಜಕೀಯಕ್ಕೆ ಸೇರಿದರು.

ಇದನ್ನೂ ಓದಿ:Mikey Hothi ಮೊದಲ ಬಾರಿ ಕ್ಯಾಲಿಫೋರ್ನಿಯಾದ ಲೋಡಿ ನಗರದ ಮೇಯರ್ ಆಗಿ ಭಾರತ ಮೂಲದ ಸಿಖ್ ವ್ಯಕ್ತಿ ಆಯ್ಕೆ

ಅವರು 1996 ರಿಂದ 2006 ರವರೆಗೆ ದಶಕದ ಸಶಸ್ತ್ರ ಹೋರಾಟವನ್ನು ಮುನ್ನಡೆಸಿದರು, ಇದು ಅಂತಿಮವಾಗಿ ನವೆಂಬರ್ 2006 ರಲ್ಲಿ ಸಮಗ್ರ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಕೊನೆಗೊಂಡಿತು. ಇದಕ್ಕೂ ಮೊದಲು ಮಾಜಿ ಪ್ರಧಾನಿ ಒಲಿ ಅವರ ನಿವಾಸದಲ್ಲಿ ನಿರ್ಣಾಯಕ ಸಭೆ ನಡೆದಿತ್ತು. ಅಲ್ಲಿ ಸಿಪಿಎನ್-ಮಾವೋವಾದಿ ಕೇಂದ್ರ ಮತ್ತು ಇತರ ಸಣ್ಣ ಪಕ್ಷಗಳು ‘ಪ್ರಚಂಡ’ ನೇತೃತ್ವದಲ್ಲಿ ಸರ್ಕಾರ ರಚಿಸಲು ಒಪ್ಪಿಕೊಂಡವು.

ಸರದಿ ಆಧಾರದ ಮೇಲೆ ಸರ್ಕಾರವನ್ನು ಮುನ್ನಡೆಸಲು ಪ್ರಚಂಡ ಮತ್ತು ಓಲಿ ನಡುವೆ ಒಪ್ಪಂದ ಉಂಟಾಗಿದೆ. ಒಲಿ ಅವರ ಬೇಡಿಕೆಯಂತೆ ಮೊದಲ ಅವಕಾಶದಲ್ಲಿ ಪ್ರಚಂಡ ಅವರನ್ನು ಪ್ರಧಾನಿ ಮಾಡಲು ಒಪ್ಪಿಕೊಂಡರು. ಅತಿದೊಡ್ಡ ಪಕ್ಷವಾಗಿ ನೇಪಾಳಿ ಕಾಂಗ್ರೆಸ್ ಅಧ್ಯಕ್ಷರ ಗಡುವಿನೊಳಗೆ ಸಂವಿಧಾನದ 76 (2) ನೇ ವಿಧಿಯ ಪ್ರಕಾರ ತನ್ನ ನಾಯಕತ್ವದಲ್ಲಿ ಸರ್ಕಾರವನ್ನು ರಚಿಸಲು ವಿಫಲವಾಗಿದೆ. ಈಗ, 165 ಶಾಸಕರ ಬೆಂಬಲದೊಂದಿಗೆ ಪ್ರಚಂಡ ನೇತೃತ್ವದಲ್ಲಿ ಹೊಸ ಸರ್ಕಾರವನ್ನು ರಚಿಸಲು ಸಿಪಿಎನ್-ಯುಎಂಎಲ್ ಉಪಕ್ರಮವನ್ನು ತೆಗೆದುಕೊಂಡಿದೆ ಎಂದು ಸಿಪಿಎನ್-ಯುಎಂಎಲ್ ಪ್ರಧಾನ ಕಾರ್ಯದರ್ಶಿ ಶಂಕರ್ ಪೋಖರೆಲ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಹಿಂದಿನ ದಿನದಲ್ಲಿ ಪ್ರಧಾನ ಮಂತ್ರಿ ಮತ್ತು ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಅವರು ಪ್ರಧಾನಿಯಾಗಲು ಮೊದಲ ಸುತ್ತಿನ ಪ್ರಯತ್ನವನ್ನು ತಿರಸ್ಕರಿಸಿದ ನಂತರ ನೇಪಾಳಿ ಕಾಂಗ್ರೆಸ್ ನೇತೃತ್ವದ ಐದು ಪಕ್ಷಗಳ ಮೈತ್ರಿಯಿಂದ ಪ್ರಚಂಡ ಹೊರನಡೆದರು.
ದೇವುಬಾ ಮತ್ತು ಪ್ರಚಂಡ ಈ ಹಿಂದೆ ಹೊಸ ಸರ್ಕಾರವನ್ನು ಸರದಿಯ ಆಧಾರದ ಮೇಲೆ ಮುನ್ನಡೆಸಲು ಮೌನವಾದ ತಿಳುವಳಿಕೆಯನ್ನು ತಲುಪಿದ್ದರು.

ಭಾನುವಾರ ಬೆಳಗ್ಗೆ ಪಿಎಂ ಹೌಸ್‌ನಲ್ಲಿ ಪ್ರಚಂಡ ಅವರೊಂದಿಗೆ ಮಾತುಕತೆ ನಡೆಸಿದಾಗ, ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿಯ ಎರಡೂ ಪ್ರಮುಖ ಹುದ್ದೆಗಳಿಗೆ ಹಕ್ಕು ಸಾಧಿಸಿತ್ತು, ಇದನ್ನು ಪ್ರಚಂಡ ತಿರಸ್ಕರಿಸಿದರು ಮಾತುಕತೆ ವಿಫಲವಾಗಿದೆ ಎಂದು ಮಾವೋವಾದಿ ಮೂಲಗಳು ತಿಳಿಸಿವೆ.

ಎನ್‌ಸಿ ಮಾವೋವಾದಿ ಪಕ್ಷಕ್ಕೆ ಸ್ಪೀಕರ್ ಹುದ್ದೆಯನ್ನು ನೀಡಿತು, ಅದನ್ನು ಪ್ರಚಂಡ ತಿರಸ್ಕರಿಸಿದರು. “ದೇವುಬಾ ಮತ್ತು ಪ್ರಚಂಡ ನಡುವಿನ ಕೊನೆಯ ಕ್ಷಣದ ಮಾತುಕತೆ ಒಪ್ಪಂದ ಮಾಡಿಕೊಳ್ಳಲು ವಿಫಲವಾದ ಕಾರಣ ಮೈತ್ರಿ ಮುರಿದುಬಿದ್ದಿದೆ” ಎಂದು ಶಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಪ್ರಧಾನ ಮಂತ್ರಿ ದೇವುಬಾ ಅವರೊಂದಿಗಿನ ಮಾತುಕತೆ ವಿಫಲವಾದ ನಂತರ, ಪ್ರಚಂಡ ಅವರು ಪ್ರಧಾನ ಮಂತ್ರಿಯಾಗಲು ಬೆಂಬಲವನ್ನು ಪಡೆಯಲು ಸಿಪಿಎನ್-ಯುಎಂಎಲ್ ಅಧ್ಯಕ್ಷ ಓಲಿ ಅವರ ಖಾಸಗಿ ನಿವಾಸವನ್ನು ತಲುಪಿದರು. ಅವರೊಂದಿಗೆ ಇತರ ಸಣ್ಣ ಪಕ್ಷಗಳ ನಾಯಕರು ಸೇರಿಕೊಂಡರು.

275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಯಾವುದೇ ಪಕ್ಷವು ಸರ್ಕಾರ ರಚಿಸಲು 138 ಸ್ಥಾನಗಳನ್ನು ಹೊಂದಿಲ್ಲ.
ಸದನದಲ್ಲಿ, ಸಿಪಿಎನ್ (ಯುನಿಫೈಡ್ ಸೋಷಿಯಲಿಸ್ಟ್) 10 ಸ್ಥಾನಗಳನ್ನು ಹೊಂದಿದೆ, ಲೋಕತಾಂತ್ರಿಕ ಸಮಾಜವಾದಿ ಪಕ್ಷ (ಎಲ್‌ಎಸ್‌ಪಿ) ನಾಲ್ಕು ಮತ್ತು ರಾಷ್ಟ್ರೀಯ ಜನಮೋರ್ಚಾ ಮತ್ತು ನೇಪಾಳ ಕಾರ್ಮಿಕರು ಮತ್ತು ರೈತ ಪಕ್ಷಗಳು ತಲಾ ಒಂದು ಸ್ಥಾನವನ್ನು ಹೊಂದಿವೆ.
ಕೆಳಮನೆಯಲ್ಲಿ ಐವರು ಸ್ವತಂತ್ರ ಸದಸ್ಯರಿದ್ದಾರೆ.

ಮತ್ತಷ್ಟು  ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Sun, 25 December 22