ಲೂಸಿಯಾನ: ಅಮೆರಿಕದ ಲೂಸಿಯಾನ ರಾಜ್ಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮೂರು ವರ್ಷದ ಬಾಲಕ ತನ್ನ ತಂದೆಯ ಗನ್ ಜೊತೆ ಆಟವಾಡುವಾಗ ಆಕಸ್ಮಿಕವಾಗಿ ತನ್ನ ಮುಖಕ್ಕೆ ಗುಂಡು ಹಾರಿಸಿಕೊಂಡಿದ್ದಾನೆ. ಇದರಿಂದ ಆ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಬೆಡ್ ರೂಂನಲ್ಲಿ ಇಟ್ಟಿದ್ದ ತನ್ನ ತಂದೆಯ ಗನ್ ಅನ್ನು ತೆಗೆದುಕೊಂಡ ಬಾಲಕ ಅದರೊಂದಿಗೆ ಆಟವಾಡುತ್ತಿದ್ದ. ಇದು ಯಾರ ಗಮನಕ್ಕೂ ಬರಲಿಲ್ಲ. ಈ ವೇಳೆ ಆತ ತನ್ನ ಮುಖದ ಮುಂದೆ ಗನ್ ಹಿಡಿದುಕೊಂಡು ಟ್ರಿಗರ್ ಒತ್ತಿದ್ದಾನೆ. ಇದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಶಬ್ದ ಕೇಳಿ ಓಡಿಬಂದ ಆತನ ತಂದೆ ಅವನನ್ನು ಬದುಕಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಆ ಗನ್ ಅನ್ನು ಹಾಸಿಗೆಯ ಮೇಲ್ಭಾಗದಲ್ಲಿದ್ದ ಶೆಲ್ಫ್ನಲ್ಲಿ ಇರಿಸಲಾಗಿತ್ತು. ಹೀಗಾಗಿ, ಆ ಮಗುವಿಗೆ ಅದು ಸುಲಭವಾಗಿ ಸಿಕ್ಕಿತ್ತು.
ಇದನ್ನೂ ಓದಿ: ಬಿಹಾರ: ವಿಐಪಿ ಮುಖ್ಯಸ್ಥ, ಮಾಜಿ ಸಚಿವ ಮುಕೇಶ್ ಸಹಾನಿ ತಂದೆ ಜಿತನ್ ಹತ್ಯೆ
ತಂದೆ ಬಂದೂಕನ್ನು ಸುರಕ್ಷತೆಯ ದೃಷ್ಟಿಯಿಂದ ಇಟ್ಟುಕೊಂಡಿದ್ದರೂ ಅದನ್ನು ಸರಿಯಾಗಿ ಭದ್ರಪಡಿಸದಿರುವುದು ದುರದೃಷ್ಟಕರ ದುರಂತಕ್ಕೆ ಕಾರಣವಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ