ಚೀನಾದಲ್ಲಿ ಭಾರಿ ಮಳೆ, ಸೇತುವೆ ಕುಸಿದು 11 ಮಂದಿ ಸಾವು, 30 ಜನರು ನಾಪತ್ತೆ
ಚೀನಾದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ವಾಯುವ್ಯ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಸೇತುವೆಯೊಂದು ಭಾಗಶಃ ಕುಸಿದಿದ್ದು, 11 ಮಂದಿ ಮೃತಪಟ್ಟಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಆಧುನಿಕ ಮೂಲಸೌಕರ್ಯಕ್ಕೆ ಹೆಸರುವಾಸಿಯಾಗಿರುವ ಚೀನಾದಲ್ಲಿ ಸೇತುವೆ ಕುಸಿದು 11 ಮಂದಿ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿದ್ದಾರೆ. ವಾಯುವ್ಯ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಸೇತುವೆಯೊಂದು ಭಾಗಶಃ ಕುಸಿದಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಹಠಾತ್ ಪ್ರವಾಹದಿಂದಾಗಿ ಹೆದ್ದಾರಿ ಸೇತುವೆ ಕುಸಿದು ಕೆಲವು ವಾಹನಗಳು ನದಿಗೆ ಬಿದ್ದಿವೆ. ಶನಿವಾರದ ಹೊತ್ತಿಗೆ ಐದು ವಾಹನಗಳು ನೀರಿನಲ್ಲಿ ಬಿದ್ದಿರುವುದು ದೃಢಪಟ್ಟಿದ್ದು, 30 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಶಾಂಕ್ಸಿಯ ಬಾವೋಜಿ ನಗರದಲ್ಲಿ ಮಳೆಯ ಪ್ರವಾಹ ಮತ್ತು ಮಣ್ಣಿನ ಕುಸಿತದ ನಂತರ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. ಎಂಟು ಮಂದಿ ಕಾಣೆಯಾಗಿದ್ದಾರೆ. ಚೀನಾದಲ್ಲಿ ಈ ಬಾರಿ ಬೇಸಿಗೆಯಿಂದ ಜನರು ಪರಿತಪಿಸಿದ್ದರು. ನೈಋತ್ಯ ಚೀನಾದ ಜಿಗಾಂಗ್ ನಗರದಲ್ಲಿ ಬುಧವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 16 ಜನರು ಸಾವನ್ನಪ್ಪಿದ್ದಾರೆ.
14 ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಬುಧವಾರ ಸಂಜೆ 6 ಗಂಟೆಯ ನಂತರ ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಕರು ಬೆಂಕಿ ಕರೆಗೆ ಸ್ಪಂದಿಸಿದರು ಮತ್ತು 75 ಜನರನ್ನು ಸುರಕ್ಷಿತವಾಗಿ ರಕ್ಷಿಸಿದರು. ಕಳೆದ ಕೆಲವು ದಿನಗಳಿಂದ ಚೀನಾದಲ್ಲಿ ಭಾರಿ ಮಳೆಯಾಗುತ್ತಿದೆ, ಭಾರತದಲ್ಲಿಯೂ ಮುಂಗಾರು ಆರಂಭವಾದಾಗಿನಿಂದ ಹಲವು ಸೇತುವೆಗಳು ಕುಸಿದಿವೆ. ಉತ್ತರಾಖಂಡದ ಋಷಿಕೇಶ-ಬದ್ರಿನಾಥ ಹೆದ್ದಾರಿಯಲ್ಲಿ ರುದ್ರ ಪ್ರಯಾಗದ ಬಳಿ ನಿರ್ಮಾಣ ಹಂತದಲ್ಲಿದ್ದ ಸಿಗ್ನೇಚರ್ ಸೇತುವೆಯ ಒಂದು ಭಾಗವು ಕುಸಿದಿದೆ.
🚨 BREAKING: BRIDGE COLLAPSE KILLS AT LEAST 11 IN CHINA
Flash floods just caused the collapse of a highway bridge in the central Chinese city of Shangluo. Rescue teams have recovered 5 vehicles that fell into the river so far.
Source: @RawsGlobal
Wild Weather, the… pic.twitter.com/gX3blxQgZg
— ZetaTalk Followers: Watch X, Planet X, aka Nibiru (@ZT_Followers) July 20, 2024
ಒಳ್ಳೆಯ ವಿಷಯವೇನೆಂದರೆ ಆ ಸಮಯದಲ್ಲಿ ಕಾರ್ಮಿಕರೂ ಯಾರೂ ಕೂಡ ಆ ಸ್ಥಳದಲ್ಲಿರಲಿಲ್ಲ. 66 ಕೋಟಿ ವೆಚ್ಚದಲ್ಲಿ ನಾರ್ಕೋಟಾದಲ್ಲಿ 110 ಮೀಟರ್ ಉದ್ದದ ಸಿಗ್ನೇಚರ್ ಸೇತುವೆಯನ್ನು ನಿರ್ಮಿಸಲಾಗುತ್ತಿದೆ.
ಮತ್ತಷ್ಟು ಓದಿ: ಬಿಹಾರದಲ್ಲಿ 15 ವರ್ಷ ಹಳೆಯ ಸೇತುವೆ ಕುಸಿತ; 15 ದಿನಗಳಲ್ಲಿ ಕುಸಿದಿದ್ದು 10 ಸೇತುವೆಗಳು!
ಈ ಯೋಜನೆಯ ಕೆಲಸ 2021ರಿಂದ ನಡೆಯುತ್ತಿದೆ. 2022ರಲ್ಲಿ ಈ ಸೇತುವೆಯ ತಳವು ಕುಸಿದು ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಬಿಹಾರದಲ್ಲಿ ಭಾರಿ ಮಳೆಗೆ ಅನೇಕ ಸೇತುವೆಗಳು ಕುಸಿದಿವೆ, ಜೂನ್ ತಿಂಗಳಲ್ಲಿ ಬಿಹಾರದಲ್ಲಿ 11 ದಿನಗಳಲ್ಲಿ ಐದು ಸೇತುವೆಗಳು ಕುಸಿದಿವೆ. ಜೂನ್ 28ರಂದು ಗಂಗಾ ನದಿಗೆ ನಿರ್ಮಿಸಲಾಗಿದ್ದ ಸೇತುವೆಯ ಒಂದು ಭಾಗ ಕುಸಿದಿತ್ತು. ಸೇತುವೆ ಕುಸಿತದ ಬಗ್ಗೆಯೂ ರಾಜಕೀಯ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ