ಸ್ಟಾರ್ಡಮ್ ಅಥವಾ ತಾರಾಪಟ್ಟ ಅಂತ ಏನು ಕರೆಯಲಾಗುತ್ತೆ ಅದರ ಬಗ್ಗೆ ಈ ವರದಿಯಲ್ಲಿ ನಿಮಗೆ ಗೊತ್ತಾಗುತ್ತದೆ. ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಮಾಡಿದ ಇದೊಂದು ಕೆಲಸಕ್ಕೆ ಆ ಬ್ರ್ಯಾಂಡ್ನ ಮೌಲ್ಯಕ್ಕೇ ಪೆಟ್ಟು ಬಿದ್ದಿದೆ. ಅಸಲಿಗೆ ಆಗಿದ್ದೇನು ಗೊತ್ತಾ? ಪೋರ್ಚುಗೀಸ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಯುರೋ 2020 ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಅವರ ಮುಂಭಾಗ ಕೋಕ ಕೋಲಾ ಬಾಟಲಿಗಳನ್ನು ಇಡಲಾಗಿತ್ತು. ಕಾರ್ಬೊನೇಟೆಡ್ ಸಾಫ್ಟ್ ಡ್ರಿಂಕ್ಸ್ಗಳನ್ನು ಇಷ್ಟಪಡದ ರೊನಾಲ್ಡೊ, ಆ ಎರಡು ಬಾಟಲಿಗಳನ್ನು ಅಲ್ಲಿಂದ ತೆಗೆಸಿ, ಅದರ ಬದಲಿಗೆ ನೀರು ಕುಡಿಯಿರಿ ಎಂದು ಜನರನ್ನು ಉತ್ತೇಜಿಸಿದರು. ಗ್ರೂಪ್ ಎಫ್ ವಿಭಾಗದ ತಮ್ಮ ಉದ್ಘಾಟನಾ ಪಂದ್ಯವನ್ನು ಹಂಗೇರಿ ವಿರುದ್ಧ ಆಡುವ ಮುನ್ನ ಮಾಧ್ಯಮಗಳ ಎದುರು ಅವರು ಮಾತನಾಡಿದರು. ಹಾಗೆ ಮಾಡುವ ಮೊದಲಿಗೆ ತಮ್ಮ ಎದುರಿಗೆ ಇದ್ದ ಕೋಕ ಕೋಲಾ ಬಾಟಲಿಗಳನ್ನು ತೆಗೆಸಿದ್ದರಿಂದ ಈಗ ಆ ಬ್ರ್ಯಾಂಡ್ಗೆ ದೊಡ್ಡ ನಷ್ಟವಾಗಿದೆ. ನೀರಿನ ಬಾಟಲಿಯನ್ನು ಕೈಲಿ ಹಿಡಿದು, ಪೋರ್ಚುಗೀಸ್ನಲ್ಲಿ Agua! ಎಂದು ಕೂಗಿದ್ದಾರೆ.
ಅಸಲಿಗೆ CR7 ನಿರ್ಬಂಧವು ಕೋಕ ಕೋಲಾದ ಮೇಲೆ ನಿಜವಾದ ಪ್ರಭಾವ ಬೀರಿತು. ಆ ಕಂಪೆನಿಯ ಷೇರು ಶೇ 1.6ರಷ್ಟು ಇಳಿಕೆ ಕಾಣಲು ಕಾರಣವಾಯಿತು. ಆ ಮೂಲಕ ಕಂಪೆನಿಯ ಮೌಲ್ಯ 242 ಬಿಲಿಯನ್ ಯುಎಸ್ಡಿಯಿಂದ 238 ಬಿಲಿಯನ್ ಯುಎಸ್ಡಿಗೆ ಕುಸಿಯಿತು. ಆ ಮೂಲಕ 400 ಕೋಟಿ ಅಮೆರಿಕನ್ ಡಾಲರ್ ನಷ್ಟ ಆಯಿತು. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ 29,200 ಕೋಟಿಗೂ ಹೆಚ್ಚು.
Cristiano Ronaldo Hates Coca Cola ? , he quickly removed Euro 2020 sponsor Coca-Cola bottles in front of him during his pre-Hungary v Portugal press conference saying "Drink water!" instead. pic.twitter.com/6O5y1emv2B
— ZimViral? (@ZimViral) June 15, 2021
36 ವರ್ಷದ ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ದಾಖಲೆಗಳನ್ನು ವಿಸ್ತರಿಸಿಕೊಂಡಿದ್ದಾರೆ. ಐದು ಪ್ರತ್ಯೇಕ ಯುರೋ ಫೈನಲ್ಗಳಲ್ಲಿ ಅಂಕ ಪಡೆದ ದಾಖಲೆ ಅವರ ಹೆಸರಲ್ಲಿದೆ. ಜತೆಗೆ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ದಾಖಲೆ, 2004ರ ಆರಂಭದಿಂದ ಹಂಗೇರಿ ಎದುರಿನ ತನಕ 22 ಪಂದ್ಯಗಳನ್ನು ಆಡಿದ್ದಾರೆ.
ಇದನ್ನೂ ಓದಿ: ಷೇರುಪೇಟೆಯಲ್ಲಿ ಪತರಗುಟ್ಟಿದ ಅದಾನಿ ಕಂಪನಿಯ ಷೇರು ಬೆಲೆ; ಮೂರು ಗಂಟೆಯಲ್ಲಿ 92 ಸಾವಿರ ಕೋಟಿ ರೂ ಗಂಟು ನಷ್ಟ
(Football player Cristiano Ronaldo removed Coca- Cola bottle during press meet. After that company share value down by 4 billion USD)