Cyclone Sitrang: ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ಸಿತರಂಗ್ ಚಂಡಮಾರುತಕ್ಕೆ 7 ಬಲಿ, ಸಾವಿರಾರು ಮಂದಿ ಸ್ಥಳಾಂತರ

ಮುಂಜಾಗ್ರತಾ ಕ್ರಮವಾಗಿ ಬಾಂಗ್ಲಾದೇಶದ ಕಾಕ್ಸ್ ಬಜಾರ್ ಕರಾವಳಿಯಿಂದ ಸಾವಿರಾರು ಜನರು ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

Cyclone Sitrang: ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ಸಿತರಂಗ್ ಚಂಡಮಾರುತಕ್ಕೆ 7 ಬಲಿ, ಸಾವಿರಾರು ಮಂದಿ ಸ್ಥಳಾಂತರ
ಬಾಂಗ್ಲಾದೇಶದ ಕಾಕ್ಸ್​ಬಜಾರ್​ನಲ್ಲಿ ಚಂಡಮಾರುತ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 25, 2022 | 7:59 AM

ಢಾಕಾ: ಸಿತರಂಗ್ ಚಂಡಮಾರುತವು (Cyclone Sitrang) ಬಾಂಗ್ಲಾದೇಶದ ಕಡಲತೀರಕ್ಕೆ ಸೋಮವಾರ ರಾತ್ರಿ-ಮಂಗಳವಾರ ನಸುಕಿನ ನಡುವಣ ಅವಧಿಯಲ್ಲಿ ಅಪ್ಪಳಿಸಿದ್ದು, ಹಲವು ಕಟ್ಟಡಗಳು ಕುಸಿದಿವೆ. ಕುಸಿದ ಕಟ್ಟಡಗಳ ಇಟ್ಟಿಗೆ, ಕಂಬಿಗಳಿಗೆ ಸಿಲುಕಿ ಹಾಗೂ ಮರಮುಟ್ಟು ಉರುಳಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ದೇಶದ ವಿವಿಧೆಡೆ ಸಂಭವಿಸಿರುವ ಇತರ ಅನಾಹುತಗಳಲ್ಲಿ ನಾಲ್ವು ಮೃತಪಟ್ಟಿದ್ದು, ಚಂಡಮಾರುತದಿಂದ ಮೃತಪಟ್ಟಿರುವ ಸಂಖ್ಯೆಯು 7ಕ್ಕೆ ಏರಿದೆ.

ಚಂಡಮಾರುತವು ಈ ಪ್ರಮಾಣದಲ್ಲಿ ಹಾನಿಯುಂಟು ಮಾಡಬಹುದು ಎಂದು ಬಾಂಗ್ಲಾ ಸರ್ಕಾರ ನಿರೀಕ್ಷಿಸಿರಲಿಲ್ಲ. ಸಾವುನೋವುಗಳು ವ್ಯಾಪಕವಾಗಿ ವರದಿಯಾದ ನಂತರ, ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ಇಲಾಖೆಯ ಮೇಲ್ವಿಚಾರಣಾ ಕೋಶವೊಂದನ್ನು ರಚಿಸಿದ ಸರ್ಕಾರವು, ತ್ವರಿತ ಗತಿಯಲ್ಲಿ ಪರಿಹಾರ ಕಾರ್ಯಾಚರಣೆ ಆರಂಭಿಸಿತು. ಢಾಕಾ, ಕುಮಿಲ್ಲಾ ದೌಲತ್ಖಾನ್​ನಲ್ಲಿರುವ ನಾಗಲ್​ಕೋಟ್, ಭೋಲಾದಲ್ಲಿರುವ ಚಾರ್ಫೆಸನ್ ಮತ್ತು ನರೈಲ್​ನ ಲೋಹಾಗರಾದಲ್ಲಿ ಚಂಡಮಾರುತದ ಅನಾಹುತಗಳು ಸಂಭವಿಸಿವೆ. ‘ಬಾಂಗ್ಲಾದೇಶದಲ್ಲಿ ಭಾರಿ ಮಳೆ ಮತ್ತು ವಿನಾಶಕಾರಿ ಗಾಳಿಯೊಂದಿಗೆ ಚಂಡಮಾರುತ ಅಪ್ಪಳಿಸಿದೆ’ ಎಂದು ಬಾಂಗ್ಲಾದ ಸುದ್ದಿವಾಹಿನಿ ‘ಬಿಡಿನ್ಯೂಸ್ 24’ ವರದಿ ಮಾಡಿದೆ.

ಸಿತರಾಂಗ್ ಚಂಡಮಾರುತದಿಂದ ಉಂಟಾದ ಪ್ರತಿಕೂಲ ಹವಾಮಾನದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಬಾಂಗ್ಲಾದೇಶದ ಕಾಕ್ಸ್ ಬಜಾರ್ ಕರಾವಳಿಯಿಂದ ಸಾವಿರಾರು ಜನರು ಮತ್ತು ಜಾನುವಾರುಗಳನ್ನು ಸೋಮವಾರ ಚಂಡಮಾರುತ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಬಾಂಗ್ಲಾದ ಮತ್ತೊಂದು ಪ್ರಮುಖ ನಗರ ಕಾಕ್ಸ್​ಬಜಾರ್​ನಿಂದ 28,155 ಜನರು ಮತ್ತು 2,736 ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆರಂಭಿಸಿದ್ದ ಆಶ್ರಯ ತಾಣಗಳಿಗೆ ಸಂತ್ರಸ್ತರನ್ನು ಸ್ಥಳಾಂತರಿಸಲಾಯಿತು. ಚಂಡಮಾರುತದ ಪ್ರಭಾವ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ 576 ಆಶ್ರಯ ತಾಣಗಳನ್ನು ಸಿದ್ಧಪಡಿಸಲಾಗಿದೆ ಎಂದು ‘ಢಾಕಾ ಟ್ರಿಬ್ಯೂನ್’ ವರದಿ ಮಾಡಿದೆ. ಚಂಡಮಾರುತದ ಕುರಿತು ಪ್ರತಿಕ್ರಿಯಿಸಿರುವ ಕಾಕ್ಸ್​ಬಜಾರ್ ಜಿಲ್ಲಾಧಿಕಾರಿ ಮಾಮುನುರ್ ರಶೀದ್, ‘ಅಗತ್ಯ ಸಂದರ್ಭದಲ್ಲಿ ಬಳಸಲು ಅನುಕೂಲವಾಗುವಂತೆ ಶಿಕ್ಷಣ ಸಂಸ್ಥೆಗಳ ಕಟ್ಟಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಜನರು ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸ ಚುರುಕಾಗಿ ಸಾಗಿದೆ’ ಎಂದು ತಿಳಿಸಿದರು.

ತುರ್ತು ಸಂದರ್ಭಗಳಲ್ಲಿ ನೆರವು ಒದಗಿಸಲೆಂದು 104 ವೈದ್ಯಕೀಯ ತಂಡಗಳು, 323 ಟನ್ ಅಕ್ಕಿ, 8 ಲಕ್ಷ ಟಾಕಾ (ಬಾಂಗ್ಲಾ ಕರೆನ್ಸೆ), ಒಣ ಆಹಾರದ 1,198 ಪ್ಯಾಕೇಟ್​ಗಳು, 350 ಕಾರ್ಟನ್ ಒಣ ರೊಟ್ಟಿಗಳು, 400 ಕಾರ್ಟನ್ ಬಿಸ್ಕತ್ತುಗಳನ್ನು ಜನರಿಗಾಗಿ ಸಂಗ್ರಹಿಸಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಸಿತರಾಂಗ್ ಚಂಡಮಾರುತವು ಗಂಟೆಗೆ 28 ಕಿಮೀ ವೇಗದಲ್ಲಿ ಚಲಿಸುತ್ತಿದೆ. ಟಿಕೋನಾ ದ್ವೀಪ ಮತ್ತು ಸಂದ್ವಿಪ್​ ನಡುವೆ ಈ ಚಂಡಮಾರುತವು ಭೂಸ್ಪರ್ಶ ಮಾಡಿದ್ದು, ಬಿರುಗಾಳಿ ಸಹಿತ ಮಳೆ ಸುರಿಯುತ್ತಿದೆ.

Published On - 7:59 am, Tue, 25 October 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್