ಅಮೆರಿಕದಲ್ಲಿ ತೆಲುಗು ಮಾತನಾಡುವವರ ಜನರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. 2016ರಲ್ಲಿ ಇಲ್ಲಿ ತೆಲುಗು ಮಾತನಾಡುವವರ ಸಂಖ್ಯೆ 3.2 ಲಕ್ಷ ಇತ್ತು 2024ರ ವೇಳೆಗೆ ಈ ಸಂಖ್ಯೆ ನಾಲ್ಕು ಪಟ್ಟು ಅಂದರೆ 12.3 ಲಕ್ಷಕ್ಕೆ ಏರಿಕೆಯಾಗಿದೆ. ನಾಲ್ಕನೇ ತಲೆಮಾರಿನ ವಲಸಿಗರಿಂದ ಹಿಡಿದು ಇತ್ತೀಚೆಗೆ ಬಂದ ವಿದ್ಯಾರ್ಥಿಗಳವರೆಗಿನ ಲೆಕ್ಕ ಇದಾಗಿದೆ. ಕ್ಯಾಲಿಫೋರ್ನಿಯಾ ಅತಿ ಹೆಚ್ಚು ತೆಲುಗು ಮಾತನಾಡುವ ಜನಸಂಖ್ಯೆಯನ್ನು ಹೊಂದಿದೆ. ಅದರ ಸಂಖ್ಯೆ ಸುಮಾರು 2 ಲಕ್ಷ.
ನಂತರ ಟೆಕ್ಸಾಸ್ (1.5 ಲಕ್ಷ) ಮತ್ತು ನ್ಯೂಜೆರ್ಸಿ (1.1 ಲಕ್ಷ). ಇಲಿನಾಯ್ಸ್ (83,000), ವರ್ಜೀನಿಯಾ (78,000) ಮತ್ತು ಜಾರ್ಜಿಯಾ (52,000) ನಂತಹ ರಾಜ್ಯಗಳು ತೆಲುಗು ಮಾತನಾಡುವವರನ್ನು ಹೊಂದಿದೆ.
ಪ್ರತಿಯೊಂದು ರಾಜ್ಯವು ಸಂಖ್ಯೆಯಲ್ಲಿ ನಾಲ್ಕು ಪಟ್ಟು ಹೆಚ್ಚಳವನ್ನು ಕಂಡಿದೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಸ್ಥಳೀಯ ತೆಲುಗು ಒಕ್ಕೂಟಗಳು ಈ ಸಂಖ್ಯೆಗಳು ತಮ್ಮದೇ ಆದ ಅಂದಾಜಿಗೆ ಅನುಗುಣವಾಗಿವೆ ಎಂದು ಹೇಳಿವೆ.
ಅಮೆರಿಕದಲ್ಲಿ 350 ಭಾಷೆಗಳಲ್ಲಿ ತೆಲುಗು 11ನೇ ಸ್ಥಾನದಲ್ಲಿದೆ
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಪ್ರತಿ ವರ್ಷ 60,000 ರಿಂದ 70,000 ವಿದ್ಯಾರ್ಥಿಗಳು ಅಮೆರಿಕಕ್ಕೆ ಬರುತ್ತಾರೆ. ಇದರೊಂದಿಗೆ ಸುಮಾರು 10,000 ಎಚ್1ಬಿ ವೀಸಾದಾರರೂ ಬರುತ್ತಾರೆ. ಶೇ.80ರಷ್ಟು ಮಂದಿ ನಮ್ಮಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಉತ್ತರ ಅಮೆರಿಕದ ತೆಲುಗು ಅಸೋಸಿಯೇಷನ್ ನ ಮಾಜಿ ಕಾರ್ಯದರ್ಶಿ ಅಶೋಕ್ ಕೊಲ್ಲಾ ಹೇಳಿದ್ದಾರೆ.
ಮತ್ತಷ್ಟು ಓದಿ: ಅಮೆರಿಕದಲ್ಲಿ ಪ್ರಧಾನಿ ಮೋದಿ 30 ವರ್ಷಗಳ ಹಿಂದೆ ಹೀಗಿದ್ದರು, ಅವರ ಜೊತೆ ಕರ್ನಾಟಕದ ಮಾಜಿ ಕೇಂದ್ರ ಸಚಿವರೊಬ್ಬರು ಇದ್ದರು! ಯಾರವರು ನೋಡಿ!
ಅವರಲ್ಲಿ 75% ಕ್ಕಿಂತ ಹೆಚ್ಚು ಅಮೆರಿಕದಲ್ಲಿ ನೆಲೆಸಿದ್ದಾರೆ. ಹೆಚ್ಚಿನವರು ಡಲ್ಲಾಸ್, ಬೇ ಏರಿಯಾ, ಉತ್ತರ ಕೆರೊಲಿನಾ, ನ್ಯೂಜೆರ್ಸಿ, ಅಟ್ಲಾಂಟಾ, ಫ್ಲೋರಿಡಾ ಮತ್ತು ನ್ಯಾಶ್‌ವಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.
ಹಳೆಯ ತಲೆಮಾರಿನ ಜನರು ಮುಖ್ಯವಾಗಿ ಉದ್ಯಮಿಗಳು. ಆದರೆ 80% ಕ್ಕಿಂತ ಹೆಚ್ಚು ಯುವ ಪೀಳಿಗೆ ಐಟಿ ಮತ್ತು ಹಣಕಾಸು ವಲಯದಲ್ಲಿದೆ.
ತೆಲುಗು ಭಾಷೆಯ ಪ್ರಭಾವ ಎಷ್ಟರಮಟ್ಟಿಗೆ ಬೆಳೆದಿದೆಯೆಂದರೆ ಅದು ಈಗ ಅಮೆರಿಕದಲ್ಲಿ 350 ಭಾಷೆಗಳಲ್ಲಿ 11ನೇ ಅತಿ ಹೆಚ್ಚು ಮಾತನಾಡುವ ವಿದೇಶಿ ಭಾಷೆಯಾಗಿದೆ. ಹಿಂದಿ ಮತ್ತು ಗುಜರಾತಿ ನಂತರ ಇದು ಮೂರನೇ ಹೆಚ್ಚು ಮಾತನಾಡುವ ಭಾರತೀಯ ಭಾಷೆಯಾಗಿದೆ.
ಇಂಡಿಯನ್ ಮೊಬಿಲಿಟಿ ರಿಪೋರ್ಟ್ 2024 ರ ಪ್ರಕಾರ, ಯುಎಸ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ದೊಡ್ಡ ಗುಂಪು ಆಂಧ್ರ ಪ್ರದೇಶ ಮತ್ತು ತೆಲಂಗಾಣದಿಂದ ಬಂದಿದೆ. ಒಟ್ಟು ವಿದ್ಯಾರ್ಥಿ ಸಮೂಹದ 12.5% ಇಲ್ಲಿಂದಲೇ ಬರುತ್ತದೆ ಎನ್ನಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:43 am, Thu, 27 June 24