ಟೆಕ್ಸಾಸ್ ಶಾಲೆಯಲ್ಲಿ​ ಫೈರಿಂಗ್ ಹಿನ್ನೆಲೆ; ಕೆನಡಾದಲ್ಲಿ ಬಂದೂಕು, ಗನ್ ರೀತಿಯ ಆಟಿಕೆ ಮಾರಾಟ ನಿಷೇಧಕ್ಕೆ ನಿರ್ಧಾರ

ಬಂದೂಕುಗಳಂತೆ ಕಾಣುವ ಕೆಲವು ಆಟಿಕೆಗಳನ್ನು ನಿಷೇಧಿಸುವ ಗನ್ ಕಂಟ್ರೋಲ್ ಪ್ಯಾಕೇಜ್‌ನ ಭಾಗವಾಗಿ ಕೈಬಂದೂಕುಗಳ ಮಾರಾಟ ಮತ್ತು ಖರೀದಿಯ ಮೇಲೆ ನಿಷೇಧ ಹೇರಲು ಕೆನಡಾದ ಸರ್ಕಾರ ನಿರ್ಧರಿಸಿದೆ.

ಟೆಕ್ಸಾಸ್ ಶಾಲೆಯಲ್ಲಿ​ ಫೈರಿಂಗ್ ಹಿನ್ನೆಲೆ; ಕೆನಡಾದಲ್ಲಿ ಬಂದೂಕು, ಗನ್ ರೀತಿಯ ಆಟಿಕೆ ಮಾರಾಟ ನಿಷೇಧಕ್ಕೆ ನಿರ್ಧಾರ
ಕೆನಡಾ ಅಧ್ಯಕ್ಷ ಜಸ್ಟಿನ್
Image Credit source: NDTV
Edited By:

Updated on: May 31, 2022 | 8:28 AM

ಒಟ್ಟಾವಾ: ಅಮೆರಿಕಾದ ಟೆಕ್ಸಾಸ್​ನಲ್ಲಿ ಶಾಲಾ ಮಕ್ಕಳ ಮೇಲೆ ಫೈರಿಂಗ್ (Texas School Firing) ಪ್ರಕರಣಕ್ಕೆ ಇಡೀ ವಿಶ್ವಾದ್ಯಂತ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಬಂದೂಕುಗಳ ಮಾರಾಟ, ಆಮದು ಮತ್ತು ರಫ್ತಿನ ಮೇಲೆ ಕೆನಡಾ (Canada) ನಿಷೇಧ ಹೇರಿದೆ. ಬಂದೂಕುಗಳಂತೆ ಕಾಣುವ ಕೆಲವು ಆಟಿಕೆಗಳನ್ನು ನಿಷೇಧಿಸುವ ಗನ್ ಕಂಟ್ರೋಲ್ ಪ್ಯಾಕೇಜ್‌ನ ಭಾಗವಾಗಿ ಕೈಬಂದೂಕುಗಳ ಮಾರಾಟ ಮತ್ತು ಖರೀದಿಯ ಮೇಲೆ ನಿಷೇಧ ಹೇರಲು ಕೆನಡಾದ ಸರ್ಕಾರವು ಸೋಮವಾರ ನಿರ್ಧರಿಸಿದೆ. ಕಳೆದ ವರ್ಷ ಕೆನಡಾದ ರಾಷ್ಟ್ರೀಯ ಚುನಾವಣೆಯ ನಡುವೆ ಸ್ಥಗಿತಗೊಂಡ ಕೆಲವು ಕ್ರಮಗಳನ್ನು ಪುನರುತ್ಥಾನಗೊಳಿಸುವ ಹೊಸ ಕಾಯ್ದೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಟೆಕ್ಸಾಸ್‌ನ ಉವಾಲ್ಡೆಯಲ್ಲಿ ತರಗತಿಯಲ್ಲಿ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ಬಂದೂಕುಧಾರಿ ಕೊಂದ ಘಟನೆ ನಡೆದು ಒಂದು ವಾರದಲ್ಲೇ ಕೆನಡಾದಲ್ಲಿ ಈ ನಿಷೇಧ ಹೇರಲಾಗಿದೆ.

ಬಂದೂಕುಗಳಿಂದ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಕ್ರಮಗಳ ಅಗತ್ಯವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಬಗ್ಗೆ ನಾವು ದೃಢವಾಗಿ ಮತ್ತು ವೇಗವಾಗಿ ಕ್ರಮ ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಇದರಿಂದ ಆ ಪರಿಸ್ಥಿತಿಯನ್ನು ಎದುರಿಸಲು ಹೆಚ್ಚು ಕಷ್ಟಕರವಾಗುತ್ತದೆ. ಹೀಗಾಗಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ
ಟೆಕ್ಸಾಸ್​ ಶಾಲೆಯಲ್ಲಿ ಗುಂಡಿನ ದಾಳಿ: 19 ಮಕ್ಕಳು ಸೇರಿ 21 ಮುಗ್ಧರ ಹತ್ಯೆ, ಶೋಕಾಚರಣೆಗೆ ಅಧ್ಯಕ್ಷ ಜೋ ಬೈಡೆನ್ ಸೂಚನೆ
Watch ಟೆಕ್ಸಾಸ್ ಶಾಲೆಯಲ್ಲಿ ಭಾರತೀಯ ಬಾಲಕನಿಗೆ ಸಹಪಾಠಿಯೊಬ್ಬ ನಿಂದಿಸಿ ಕಿರುಕುಳ ನೀಡುತ್ತಿರುವ ವಿಡಿಯೊ ವೈರಲ್, ವ್ಯಾಪಕ ಆಕ್ರೋಶ
ಟೆಕ್ಸಾಸ್ ಯಹೂದಿ ಮಂದಿರದಲ್ಲಿದ್ದ ಒತ್ತೆಯಾಳುಗಳ ಬಿಡುಗಡೆ; ಅವರು ಸುರಕ್ಷಿತರಾಗಿದ್ದಾರೆ ಎಂದ ಗವರ್ನರ್ ಗ್ರೆಗ್ ಅಬಾಟ್

ಇದನ್ನೂ ಓದಿ: ಟೆಕ್ಸಾಸ್​ ಶಾಲೆಯಲ್ಲಿ ಗುಂಡಿನ ದಾಳಿ: 19 ಮಕ್ಕಳು ಸೇರಿ 21 ಮುಗ್ಧರ ಹತ್ಯೆ, ಶೋಕಾಚರಣೆಗೆ ಅಧ್ಯಕ್ಷ ಜೋ ಬೈಡೆನ್ ಸೂಚನೆ

ಗಣ್ಯ ಕ್ರೀಡಾ ಶೂಟರ್‌ಗಳು, ಒಲಂಪಿಕ್ ಅಥ್ಲೀಟ್‌ಗಳು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಕೆಲವು ಕ್ಷೇತ್ರದವರಿಗೆ ಈ ಹ್ಯಾಂಡ್‌ಗನ್ ಫ್ರೀಜ್​ನಿಂದ ವಿನಾಯಿತಿ ನೀಡಲಾಗುತ್ತದೆ. ಈಗಾಗಲೇ ಕೈಬಂದೂಕುಗಳನ್ನು ಹೊಂದಿರುವ ಕೆನಡಿಯನ್ನರು ಅವುಗಳನ್ನು ಇರಿಸಿಕೊಳ್ಳಲು ಅನುಮತಿಸಲಾಗುವುದು.

ಕೆನಡಾ ಎರಡು ವರ್ಷಗಳ ಹಿಂದೆ ಪೋರ್ಟಾಪಿಕ್, ನೋವಾ ಸ್ಕಾಟಿಯಾದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯ ಹಿನ್ನೆಲೆಯಲ್ಲಿ AR-15 ರೈಫಲ್‌ನಂತಹ 1,500 ಮಾದರಿಗಳ ಆಕ್ರಮಣಕಾರಿ ಶಸ್ತ್ರಾಸ್ತ್ರಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ. ಈ ನಿರ್ಧಾರದ ವಿರುದ್ಧ ಇನ್ನೂ ಕೆಲವು ಬಂದೂಕುಗಳ ಮಾಲೀಕರು ನ್ಯಾಯಾಲಯದಲ್ಲಿ ಕೇಸ್ ನಡೆಸುತ್ತಿದ್ದಾರೆ. ಇದೀಗ ಜಾರಿಗೊಳಿಸಲಾದ ಹೊಸ ಕಾನೂನಿನ ಪ್ರಕಾರ, ಏರ್‌ಸಾಫ್ಟ್ ರೈಫಲ್‌ಗಳಂತಹ ನೈಜ ಗನ್‌ಗಳಂತೆ ಕಾಣುವ ಕೆಲವು ಆಟಿಕೆಗಳ ಮೇಲೆ ಕೂಡ ನಿಷೇಧ ಹೇರಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 am, Tue, 31 May 22