ಅಮೆರಿಕ ಮತ್ತು ವಿಶ್ವದಾದ್ಯಂತ ಕುತೂಹಲ ಹುಟ್ಟಿಸಿದ್ದ ಮಿನ್ನಿಯಾಪೋಲಿಸ್‌ನಲ್ಲಿ ಜಾರ್ಜ್ ಫ್ಲಾಯ್ಡ್ ಅವರ ವಿವಾದಾತ್ಮಕ ಸಾವಿನ ಬಗ್ಗೆ ಅಲ್ಲಿನ ಕೆಳ ನ್ಯಾಯಾಲಯ ತೀರ್ಪು ನೀಡಿದ್ದು ಅಮೆರಿಕದ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಮಿನ್ನಿಯಾಪೋಲಿಸ್‌ನಲ್ಲಿ, ಆರು ಜನ ಬಿಳಿ ಮತ್ತು ಆರು ಜನರ ವರ್ಣೀಯ ನ್ಯಾಯಾಧೀಶರನ್ನೊಳಗೊಂಡ 12 ಸದಸ್ಯರ ನ್ಯಾಯಪೀಠ ತಂಡವು ಚೌವಿನ್ ಅವರನ್ನು ಉದ್ದೇಶಪೂರ್ವಕವಾಗಿ ದ್ವಿತೀಯ ಹಂತದ ಕೊಲೆಗೆ ತಪ್ಪಿತಸ್ಥರೆಂದು ಪರಿಗಣಿಸಿತು. ಆದರೆ, ಅವರ ಶಿಕ್ಷೆಯ ಪ್ರಮಾಣ ಇನ್ನೂ ಘೋಷಣೆ ಮಾಡಿಲ್ಲ. ಈ ಅಪರಾಧಕ್ಕಾಗಿ ಚೌವಿನ್ಗೆ 40 ವರ್ಷಗಳವರೆಗೆ ಜೈಲು ಶಿಕ್ಷೆಯ ಸಾಧ್ಯತೆ ಇದೆ.
ಈ ಘಟನೆ ಇಡೀ ಅಮೆರಿಕವನ್ನು ನಡುಗಿಸಿತ್ತು
ಕಳೆದ ವರ್ಷ ಜನೇವರಿಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಆರೋಪಕ್ಕಾಗಿ ಜಾರ್ಜ್ ಫ್ಲಾಯ್ಡ್ನನ್ನು ಮಿನ್ನಿಯಾಪೊಲೀಸ್ನ ಪೊಲೀಸರು ಹಿಡಿದರು. ಆಗ ಚೌವಿನ್ ಮೊಣಕಾಲೂರಿ, ಫ್ಲಾಯ್ಡ್‌ನ ಕುತ್ತಿಗೆಯನ್ನೊತ್ತಿ ಆತನಿಗೆ ಶ್ವಾಸೋಚ್ಛ್ವಾಸ ಕೂಡ ಮಾಡಲು ಕೊಡುವುದಿಲ್ಲ. ಈ ಕೃತ್ಯವನ್ನು ತೃತೀಯ ಹಂತದ ಕೊಲೆ ಎಂದು ಪರಿಗಣಿಸಿದ ಪೀಠ, ಇದು ಅತ್ಯಂತ ಅಪಾಯಕಾರಿ ಮತ್ತು ಉದ್ದೇಶಪೂರ್ವಕವಾಗಿ ಮಾಡಿದ ಕೊಲೆ ಎಂದು ಹೇಳಿದೆ.
ಇದಕ್ಕೆ 25 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಸಮಾಜದಲ್ಲಿ ಅಪಾಯವನ್ನು ಸೃಷ್ಟಿಸುವ ಅಪರಾಧ, ಆದ್ದರಿಂದ ದ್ವಿತೀಯ ಹಂತದ ನರಹತ್ಯೆ ಎಂದು ಹೇಳಿದೆ. ಕಾನೂನು ತಜ್ಞರ ಪ್ರಕಾರ, ಚೌವಿನ್ ಸುದೀರ್ಘ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವುದರಿಂದ ಸುಮಾರು ಎರಡು ತಿಂಗಳ ಅವಧಿಯಲ್ಲಿ ಶಿಕ್ಷೆ ವಿಧಿಸುವ ನಿರೀಕ್ಷೆಯಿದೆ.
ನ್ಯಾಯಾಧೀಶ ಪೀಟರ್ ಕಾಹಿಲ್ ಮಿನ್ನಿಯಾಪೋಲಿಸ್ ನ್ಯಾಯಾಲಯದ ಕೊಠಡಿಯಲ್ಲಿ ತೀರ್ಪನ್ನು ಓದುತ್ತಿದ್ದಂತೆ, ಮಾಸ್ಕ್ ಹಾಕಿಕೊಂಡಿದ್ದ ಮಾಜಿ ಪೊಲೀಸ್ ಅಧಿಕಾರಿ ಮುಚ್ಚಿದ ಮುಖದಿಂದ ಕೆಳಭಾಗವನ್ನು ನೋಡಿದರು. ಆ ನಂತರ, ಪೊಲೀಸ್ ಅಧಿಕಾರಿಯೊಬ್ಬರು ಅಪರಾಧಿ ಚೌವಿನ್ ಅವರನ್ನು ಕೈಕೋಳ ತೊಡಿಸಿ ಅಲ್ಲಿಂದ ಕರೆದೊಯ್ದರು.
2005 ರಿಂದ ಈ ರೀತಿಯ ಏಳು ಪ್ರಕರಣಗಳು ನಡೆದಿವೆ. ಇದರಲ್ಲಿ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿರತಾಗಿದ್ದಾಗ ಗುಂಡು ಹಾರಿಸಿದ್ದಕ್ಕೆ ಅವರೆಲ್ಲ ಕೊಲೆಯ ಅಪರಾಧಕ್ಕೆ ಗುರಿಯಾಗಿದ್ದಾರೆ.
ಫ್ಲಾಯ್ಡ್ ಕುಟುಂಬ ಏನು ಹೇಳಿತು?
ತೀರ್ಪನ್ನು ಕೇಳಿದ ಫ್ಲಾಯ್ಡ್ ಕುಟುಂಬವು ನಿರಾಳವಾದಂತಿದೆ. ಇಂದು, ನಾವು ಮತ್ತೆ ಉಸಿರಾಡಲು ಸಾಧ್ಯವಾಗುತ್ತಿದೆ ಎಂದು ಮಿನ್ನಿಯಾಪೋಲಿಸ್‌ನಲ್ಲಿ ಫ್ಲಾಯ್ಡ್ ಅವರ ಸಹೋದರರಲ್ಲಿ ಒಬ್ಬರು ಹೇಳಿದರು. ಇನ್ನೊಬ್ಬ ಸಹೋದರ ಟೆರೆನ್ಸ್ ಫ್ಲಾಯ್ಡ್, “ನಾನು ಅವನನ್ನು ಕಳೆದುಕೊಂಡಿದ್ದೇನೆ, ನಿಜ. ಆದರೆ ಈಗ ಅವನು ಇತಿಹಾಸವಾಗಿದ್ದಾನೆ.”
ಅಮೆರಿಕನ್ನರ ಮನೆಗಳಲ್ಲಿ ಮೂರು ವಾರಗಳ ವಿಚಾರಣೆಯು ನೇರ ಪ್ರಸಾರವಾಗಿತ್ತು. 17 ವರ್ಷದ ಡಾರ್ನೆಲ್ಲಾ ಫ್ರೇಜಿಯರ್ ಎಂಬ ಹಾದಿಹೋಕ ಚಿತ್ರೀಕರಿಸಿದ ವೀಡಿಯೋವನ್ನು ಬಳಸಿಕೊಂಡು ಪ್ರಾಸಿಕ್ಯೂಷನ್ ಆರೋಪ ಪಟ್ಟಿ ಸಲ್ಲಿಸಿತ್ತು. “ನಿಮ್ಮ ಸಾಮಾನ್ಯ ಜ್ಞಾನವನ್ನು ಬಳಸಿ. ನಿಮ್ಮ ಕಣ್ಣುಗಳನ್ನು ನಂಬಿರಿ. ನೀವು ಸತ್ಯವನ್ನೇ ನೋಡಿದ್ದೀರಿ” ಎಂದು ಪ್ರಾಸಿಕ್ಯೂಟರ್ ಸ್ಟೀವ್ ಷ್ಲೀಚರ್ ತಮ್ಮ ವಾದ ಮುಕ್ತಾಯ ಮಾಡುವಾಗ ಹೇಳಿದ್ದರು.
ಆರೋಪಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಪರ ವಾದ ಮಂಡಿಸಿದ್ದ ವಕೀಲ ಎರಿಕ್ ನೆಲ್ಸನ್ ತೀರ್ಪುಗಾರರ ಗಮನವನ್ನು ವೀಡಿಯೊದಿಂದ ಫ್ಲಾಯ್ಡ್‌ನ ಆರೋಗ್ಯ ಮತ್ತು ಮಾದಕವಸ್ತು ಬಳಕೆಯ ಕಡೆಗೆ ತಿರುಗಿಸಲು ಪ್ರಯತ್ನಿಸಿದರು. “ರಾಜ್ಯವು ನಿಜವಾಗಿಯೂ 9 ನಿಮಿಷ 29 ಸೆಕೆಂಡುಗಳು ಮೇಲೆ ಕೇಂದ್ರೀಕರಿಸಿದೆ. ಇದು ಸರಿಯಾದ ವಿಶ್ಲೇಷಣೆಯಲ್ಲ. ಏಕೆಂದರೆ 9 ನಿಮಿಷ 29 ಸೆಕೆಂಡುಗಳು ಹಿಂದಿನ 15 ನಿಮಿಷ 59 ಸೆಕೆಂಡುಗಳನ್ನು ನಿರ್ಲಕ್ಷಿಸುತ್ತದೆ, ಸಂಪೂರ್ಣವಾಗಿ ಕಡೆಗಣಿಸುತ್ತದೆ” ಎಂದು ಅವರು ತಮ್ಮ ಮುಕ್ತಾಯದ ವಾದಗಳಲ್ಲಿ ಹೇಳಿದರು.
ಈ ತೀರ್ಪಿಗೂ ಮೊದಲು ಮೂರು ವಾರಗಳ ಕಾಲ ನಡೆದ ವಿಚಾರಣೆಯಲ್ಲಿ 45 ಸಾಕ್ಷಿಗಳು ಸಾಕ್ಷ್ಯ ಹೇಳಿದ್ದಷ್ಟೇ ಅಲ್ಲ, ನ್ಯಾಯಾಲಯ ಹಲವಾರು ಗಂಟೆಗಳ ವೀಡಿಯೊ ತುಣುಕನ್ನು ನೋಡಿತು. ಫ್ಲಾಯ್ಡ್ ಸಾವಿನ ಗ್ರಾಫಿಕ್ ತುಣುಕನ್ನು ವೀಕ್ಷಿಸುತ್ತಿದ್ದಾಗ ಹಲವಾರು ಸಾಕ್ಷಿಗಳಲ್ಲಿ ಕಣ್ಣೀರು ಉಕ್ಕಿತ್ತು ಮತ್ತು ಆ ಘಟನೆಗಳು ಕಣ್ಣೆದುರು ತೆರೆದುಕೊಳ್ಳುತ್ತಿದ್ದಂತೆ “ಎಲ್ಲರೂ ಅಸಹಾಯಕರು” ಎಂದು ಉದ್ಗರಿಸಿದರು ಎಂದು ಬಿಬಿಸಿ ತನ್ನ ವರದಿಯಲ್ಲಿ ಹೇಳಿದೆ.
ಚೌವಿನ್ ಸ್ವತಃ ಸಾಕ್ಷ್ಯ ಹೇಳದಿರಲು ನಿರಾಕರಿಸಿದ್ದಾನೆ. ಆ ಮೂಲಕ ತನ್ನ ಮೇಲಿರುವ ಆರೋಪದ ವಿರುದ್ಧ ತನ್ನ ವಾದವನ್ನು ಪ್ರತಿಪಾದಿಸುವ ಹಕ್ಕನ್ನು ಉಳಿಸಿಕೊಂಡಿದ್ದಾನೆ.
ಇದನ್ನೂ ಓದಿ:
ಆಫ್ರಿಕಾ ಮೂಲದ ವ್ಯಕ್ತಿಯ ಹತ್ಯೆ ಬೆನ್ನಲ್ಲೇ ಅಮೆರಿಕದಲ್ಲಿ ಹೆಚ್ಚಾಯ್ತು ಜನಾಂಗೀಯ ಸಂಘರ್ಷ!
(An American court found guilty the police officer who caused the death of George Floyd in Minneapolis)