ನ್ಯೂಯಾರ್ಕ್: ಕೊರೊನಾವೈರಸ್ ಡೆಲ್ಟಾ ರೂಪಾಂತರವು ವೈರಸ್ ಇತರ ಎಲ್ಲ ಆವೃತ್ತಿಗಳಿಗಿಂತ ಹೆಚ್ಚು ತೀವ್ರವಾದ ಕಾಯಿಲೆಗೆ ಕಾರಣವಾಗಬಹುದು. ಸಿಡುಬು (Chickenpox) ರೀತಿಯಲ್ಲಿ ಇದು ಸುಲಭವಾಗಿ ಹರಡಬಹುದು ಎಂದು ಅಮೆರಿಕ ಆರೋಗ್ಯ ಪ್ರಾಧಿಕಾರದ ಆಂತರಿಕ ದಾಖಲೆಯನ್ನು ಉಲ್ಲೇಖಿಸಿ ಅಮೆರಿಕ ಮಾಧ್ಯಮ ವರದಿ ಮಾಡಿದೆ.
ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರದ (CDC) ದಾಖಲೆಯಲ್ಲಿರುವ ಅಪ್ರಕಟಿತ ಮಾಹಿತಿ ಪ್ರಕಾರ ಸಂಪೂರ್ಣವಾಗಿ ಲಸಿಕೆ ಪಡೆದ ಜನರು ಡೆಲ್ಟಾ ರೂಪಾಂತರವನ್ನು ಹರಡಬಹುದು. ಭಾರತದಲ್ಲಿ ಇದನ್ನು ಮೊದಲು ಗುರುತಿಸಲಾಗಿದೆ. ಲಸಿಕೆ ಹಾಕದ ಜನರಂತೆಯೇ ಲಸಿಕೆ ಹಾಕಿಸಿಕೊಂಡವರೂ ಹರಡುತ್ತಾರೆ ಎಂದು ವರದಿಗಳು ಹೇಳಿವೆ. ದಾಖಲೆಯ ವಿಷಯಗಳನ್ನು ಮೊದಲು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಡೆಲ್ಟಾ ರೂಪಾಂತರದ ಸೋಂಕು ಲಸಿಕೆ ಹಾಕಿದ ಜನರು ಮೂಗು ಮತ್ತು ಗಂಟಲಿನಲ್ಲಿ ಸಾಗುವಂತೆ ಲಸಿಕೆ ಹಾಕದ ಜನರಲ್ಲಿಯೂ ಸಾಗುತ್ತದೆ. ಇದು ಸುಲಭವಾಗಿ ಹರಡಬಹುದು ಎಂದು ಸಿಡಿಸಿ ನಿರ್ದೇಶಕ ಡಾ. ರೋಚೆಲ್ ಪಿ ವಾಲೆನ್ಸ್ಕಿ ಹೇಳಿದ್ದಾರೆ.
ಆದರೆ ಆಂತರಿಕ ದಾಖಲೆಯೂ ರೂಪಾಂತರದ ವಿಶಾಲವಾದ ಮತ್ತು ತೀವ್ರ ನೋಟವನ್ನು ನೀಡುತ್ತದೆ.
ಡೆಲ್ಟಾ ರೂಪಾಂತರವು MERS, SARS, ಎಬೋಲಾ, ನೆಗಡಿ, ಜ್ವರ ಮತ್ತು ಸಿಡುಬುಗಳಿಗೆ ಕಾರಣವಾಗುವ ವೈರಸ್‌ಗಳಿಗಿಂತ ಹೆಚ್ಚು ಹರಡುತ್ತದೆ, ಮತ್ತು ಇದು ಸಿಡುಬು ರೀತಿ ಸಾಂಕ್ರಾಮಿಕವಾಗಿದೆ. ದಾಖಲೆ ಪ್ರಕಾರ, ಅದರ ನಕಲನ್ನು ದಿ ನ್ಯೂಯಾರ್ಕ್ ಟೈಮ್ಸ್ ಕೂಡ ಪಡೆದುಕೊಂಡಿದೆ.
ಡೆಲ್ಟಾ ರೂಪಾಂತರ – ಮೂಲತಃ B.1.617.2 ಎಂದು ಕರೆಯಲ್ಪಡುತ್ತದೆ. ದಾಖಲೆ ಪ್ರಕಾರ ಇದು ಹೆಚ್ಚು ತೀವ್ರವಾದ ಕಾಯಿಲೆಗೆ ಕಾರಣವಾಗಬಹುದು.
ದಾಖಲೆಯ ದನಿಯು ಸಿಡಿಸಿ ವಿಜ್ಞಾನಿಗಳಲ್ಲಿ ಡೆಲ್ಟಾ ದೇಶಾದ್ಯಂತ ಹರಡಿರುವ ಬಗ್ಗೆ ಎಚ್ಚರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಫೆಡರಲ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ, ದಾಖಲೆಯಲ್ಲಿಲ್ಲಿ ವಿವರಿಸಿದ ಸಂಶೋಧನೆ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
“ಸಿಡಿಸಿಯು ಡೆಲ್ಟಾದಲ್ಲಿ ಬರುವ ದತ್ತಾಂಶದ ಬಗ್ಗೆ ಬಹಳ ಕಳವಳ ವ್ಯಕ್ತಪಡಿಸಿದ್ದು ಸೋಂಕು ವಿರುದ್ಧ ಈಗ ಕ್ರಮ ಕೈಗೊಳ್ಳಬೇಕಿದೆ ಎಂದು ಅಧಿಕಾರಿ ಹೇಳಿದರು.
16.2 ಕೋಟಿ ಲಸಿಕೆ ಹಾಕಿದ ಅಮೆರಿಕನ್ನರಲ್ಲಿ ವಾರಕ್ಕೆ ಸರಿಸುಮಾರು 35,000 ರೋಗಲಕ್ಷಣದ ಸೋಂಕುಗಳಿವೆ ಎಂದು ಜುಲೈ 24 ರವರೆಗೆ ಸಿಡಿಸಿ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಆಂತರಿಕ ಪ್ರಸ್ತುತಿಯಲ್ಲಿ ಉಲ್ಲೇಖಿಸಲಾಗಿದೆ.ಆದರೆ ಏಜೆನ್ಸಿ ತೀವ್ರವಲ್ಲದ ಅಥವಾ ಲಕ್ಷಣರಹಿತ ಸೋಂಕುಗಳನ್ನು ಪತ್ತೆಹಚ್ಚುವುದಿಲ್ಲ, ಆದ್ದರಿಂದ ನಿಜವಾದ ಪ್ರಕರಣಗಳು ಹೆಚ್ಚಾಗಿರಬಹುದು.
ಡೆಲ್ಟಾ ರೂಪಾಂತರದ ಸೋಂಕು ವಾಯು ಮೂಲಕ ವೈರಸ್ ಪ್ರಮಾಣವನ್ನು ಉತ್ಪಾದಿಸುತ್ತದೆ, ಇದು ಆಲ್ಫಾ ರೂಪಾಂತರದಿಂದ ಸೋಂಕಿತ ಜನರಲ್ಲಿ ಕಂಡುಬರುವುದಕ್ಕಿಂತ ಹತ್ತು ಪಟ್ಟು ಹೆಚ್ಚಾಗಿದೆ. ಇದು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ವರದಿ ಗಮನಿಸಿದೆ.
ಇತ್ತೀಚಿನ ಅಧ್ಯಯನದ ಪ್ರಕಾರ, ಡೆಲ್ಟಾ ಸೋಂಕಿತ ವ್ಯಕ್ತಿಯಲ್ಲಿ ವೈರಸ್‌ನ ಪ್ರಮಾಣವು ವೈರಸ್‌ನ ಮೂಲ ಆವೃತ್ತಿಯಿಂದ ಸೋಂಕಿಗೊಳಗಾದ ಜನರಿಗಿಂತ ಸಾವಿರ ಪಟ್ಟು ಹೆಚ್ಚು ಇದೆ. ಸಿಡಿಸಿ ವರದಿ ಅನೇಕ ಅಧ್ಯಯನಗಳ ಮಾಹಿತಿಯನ್ನು ಅವಲಂಬಿಸಿದೆ.
ಡೆಲ್ಟಾ ರೂಪಾಂತರವು “ನಮಗೆ ತಿಳಿದಿರುವ ಹೆಚ್ಚು ಹರಡುವ ವೈರಸ್‌ಗಳಲ್ಲಿ ಒಂದಾಗಿದೆ. ದಡಾರ, ಸಿಡುಬು, ಇದು – ಅವೆಲ್ಲವೂ ಅಲ್ಲಿಯೇ ಇವೆ” ಎಂದು ಡಾ. ವ್ಯಾಲೆನ್ಸ್ಕಿ ಸಿಎನ್‌ಎನ್‌ಗೆ ತಿಳಿಸಿದರು. ಶಾಲೆಗಳಲ್ಲಿ ಎಲ್ಲರೂ – ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಸಂದರ್ಶಕರು ಯಾವಾಗಲೂ ಮಾಸ್ಕ್ ಧರಿಸಬೇಕು ಎಂದು ಅವರು ಹೇಳಿದರು.
“ಇತರ ರೂಪಾಂತರಗಳಿಗೆ ವ್ಯತಿರಿಕ್ತವಾಗಿ, ಲಸಿಕೆ ಹಾಕಿದ ಜನರು ಅನಾರೋಗ್ಯಕ್ಕೆ ಒಳಗಾಗದಿದ್ದರೂ ಸಹ ಸೋಂಕಿಗೆ ಒಳಗಾಗುತ್ತಾರೆ ಮತ್ತು ಸೋಂಕಿಗೆ ಒಳಗಾಗದ ಜನರಂತೆಯೇ ವೈರಸ್ ಅನ್ನು ಹರಡುತ್ತಾರೆ ” ಎಂದು ದಾಖಲೆ ವೀಕ್ಷಿಸಿದ್ದ ಎಮೋರಿ ಲಸಿಕೆ ಕೇಂದ್ರದ ಮುಖ್ಯಸ್ಥ ವಾಲ್ಟರ್ ಒರೆನ್‌ಸ್ಟೈನ್ ಎಂದು ಸಿಎನ್‌ಎನ್‌ಗೆ ತಿಳಿಸಿದರು. ಆದರೆ ಲಸಿಕೆ ಹಾಕಿದ ಜನರು ಸುರಕ್ಷಿತ ಎಂದು ದಾಖಲೆ ಸೂಚಿಸುತ್ತದೆ.
“ಲಸಿಕೆಗಳು ಶೇಕಡಾ 90 ಕ್ಕಿಂತ ಹೆಚ್ಚು ತೀವ್ರವಾದ ರೋಗವನ್ನು ತಡೆಯುತ್ತವೆ, ಆದರೆ ಸೋಂಕು ಅಥವಾ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಕಡಿಮೆ ಪರಿಣಾಮಕಾರಿಯಾಗಬಹುದು” ಎಂದು ಅದು ಹೇಳುತ್ತದೆ. “ಆದ್ದರಿಂದ, ವ್ಯಾಕ್ಸಿನೇಷನ್ ಹೊರತಾಗಿಯೂ ಹೆಚ್ಚಿನ ಸಮುದಾಯ ಹರಡುವಿಕೆ” ಇರುತ್ತದೆ ಎಂದು ದಾಖಲೆ ಹೇಳಿದೆ.
ಇದನ್ನೂ ಓದಿ: Explainer: ಕೇರಳದಲ್ಲಿ ಕೊವಿಡ್ ಪ್ರಕರಣ ಹೆಚ್ಚುತ್ತಿರುವುದೇಕೆ?
(Delta variant of the coronavirus may cause more severe illness spread as easily as chickenpox says Reports)