Explainer: ಕೇರಳದಲ್ಲಿ ಕೊವಿಡ್ ಪ್ರಕರಣ ಹೆಚ್ಚುತ್ತಿರುವುದೇಕೆ?

Covid casesin Kerala: ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕಲ್ ಸೈನ್ಸಸ್ ಪ್ರಕಾರ, ರಾಷ್ಟ್ರೀಯ ಆರ್-ಮೌಲ್ಯವು 1 ಕ್ಕಿಂತ ಕಡಿಮೆಯಿದ್ದರೆ, ಕೇರಳದ ಆರ್-ಮೌಲ್ಯವು 1 ಕ್ಕಿಂತ ಹೆಚ್ಚಾಗಿದೆ ಮತ್ತು ಇದು ದೇಶದಲ್ಲಿ ಅತಿ ಹೆಚ್ಚು

Explainer: ಕೇರಳದಲ್ಲಿ ಕೊವಿಡ್ ಪ್ರಕರಣ ಹೆಚ್ಚುತ್ತಿರುವುದೇಕೆ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 29, 2021 | 8:58 PM

ದೇಶದಲ್ಲಿ ಪ್ರಸ್ತುತ ಅತಿ ಹೆಚ್ಚು ಸಕ್ರಿಯ ಕೊವಿಡ್ -19 (Covid-19) ಹೊಂದಿರುವ ರಾಜ್ಯ ಕೇರಳ, ಅತಿ ಹೆಚ್ಚು ಆರ್-ಮೌಲ್ಯ(R-value) ಅಥವಾ ಸಂತಾನೋತ್ಪತ್ತಿ ಅಂಶವನ್ನು ಹೊಂದಿದೆ ಎಂದು ಚೆನ್ನೈನ ಗಣಿತ ವಿಜ್ಞಾನ ಸಂಸ್ಥೆಯ ಸಂಶೋಧಕರ ವಿಶ್ಲೇಷಣೆ ಬಹಿರಂಗಪಡಿಸಿದೆ. ಕೇರಳದ ಆರ್-ಮೌಲ್ಯವು 1.11 ಆಗಿದೆ, ಇದರರ್ಥ ಒಬ್ಬ ಸೋಂಕಿತ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳಿಗೆ ಸೋಂಕನ್ನು ಹರಡುತ್ತಿದ್ದಾನೆ, ಪ್ರತಿ 100 ಸೋಂಕಿತ ವ್ಯಕ್ತಿಗಳು 111 ಜನರಿಗೆ ವೈರಸ್ ಹರಡುತ್ತಿದ್ದಾರೆ. ಜುಲೈ ಕೊನೆಯ ವಾರದಲ್ಲಿ ದೇಶದ ಒಟ್ಟಾರೆ ಆರ್ ಅಂಶ 0.95 ರಷ್ಟಿದೆ. ಹೀಗಿರುವಾಗ ಆರ್ ಅಂಶ ಎಷ್ಟು ಮಹತ್ವದ್ದಾಗಿದೆ? ಆರ್ ಅಂಶವೆಂದರೆ ಒಬ್ಬ ಕೊವಿಡ್-ಸೋಂಕಿತ ವ್ಯಕ್ತಿಯಿಂದ ಸೋಂಕಿಗೆ ಒಳಗಾಗುವ ಜನರ ಸಂಖ್ಯೆ. ಇದು ಗಣಿತದ ಲೆಕ್ಕಾಚಾರ. ಸಂಖ್ಯೆ 1 ಕ್ಕಿಂತ ಕಡಿಮೆಯಿದ್ದರೆ, ಉದಾಹರಣೆಗೆ, 0.95, ಇದರರ್ಥ ಪ್ರತಿ 100 ಸೋಂಕಿತ ಜನರು ಸೋಂಕನ್ನು 95 ಇತರ ವ್ಯಕ್ತಿಗಳಿಗೆ ರವಾನಿಸುತ್ತಾರೆ. ವಿಜ್ಞಾನಿಗಳು ಈ ಸಂಖ್ಯೆ 1 ಕ್ಕಿಂತ ಕಡಿಮೆಯಿದ್ದರೆ, ಹೊಸ ಸೋಂಕುಗಳು ಅಸ್ತಿತ್ವದಲ್ಲಿರುವ ಸೋಂಕುಗಳಿಗಿಂತ ಕಡಿಮೆ ಇರುತ್ತದೆ ಮತ್ತು ಪ್ರಕರಣಗಳ ಸಂಖ್ಯೆಯಲ್ಲಿ ಒಟ್ಟಾರೆ ಇಳಿಕೆ ಕಂಡುಬರುತ್ತದೆ ಎಂದು ವಿವರಿಸಿದ್ದಾರೆ.

ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕಲ್ ಸೈನ್ಸಸ್ ಪ್ರಕಾರ, ರಾಷ್ಟ್ರೀಯ ಆರ್-ಮೌಲ್ಯವು 1 ಕ್ಕಿಂತ ಕಡಿಮೆಯಿದ್ದರೆ, ಕೇರಳದ ಆರ್-ಮೌಲ್ಯವು 1 ಕ್ಕಿಂತ ಹೆಚ್ಚಾಗಿದೆ ಮತ್ತು ಇದು ದೇಶದಲ್ಲಿ ಅತಿ ಹೆಚ್ಚು. ಪುಣೆ ಮತ್ತು ದೆಹಲಿಯ ಆರ್-ಮೌಲ್ಯಗಳು 1 ಕ್ಕೆ ಹತ್ತಿರದಲ್ಲಿದ್ದರೆ, ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನವು ಆರ್-ಮೌಲ್ಯವನ್ನು 1 ಮೀರಿದೆ ಎಂದು ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಉತ್ತುಂಗದ ನಂತರ ಕೆಳಗಿಳಿದ ಆರ್ ಅಂಶವು ಮತ್ತೆ ಏರುತ್ತಿದೆ ಎಂದು ಸಂಸ್ಥೆ ಹೇಳಿದೆ.

ಭಾರತದಲ್ಲಿ ವಾರ ಪ್ರಕಾರ ಆರ್-ಫ್ಯಾಕ್ಟರ್

ಮಾರ್ಚ್ 9 ರಿಂದ ಏಪ್ರಿಲ್ 21 ರವರೆಗೆ: 1.37

ಏಪ್ರಿಲ್ 24 ರಿಂದ ಮೇ 1 ರವರೆಗೆ: 1.18

ಏಪ್ರಿಲ್ 29 ರಿಂದ ಮೇ 7 ರವರೆಗೆ: 1.1

ಮೇ 9 ರಿಂದ ಮೇ 11 ರವರೆಗೆ: 0.98

ಮೇ 14 ರಿಂದ ಮೇ 30 ರವರೆಗೆ: 0.82

ಮೇ 15 ರಿಂದ ಜೂನ್ 26 ರವರೆಗೆ: 0.78

ಜೂನ್ 20 ರಿಂದ ಜುಲೈ 7 ರವರೆಗೆ: 0.88

ಜುಲೈ 3 ರಿಂದ ಜುಲೈ 22 ರವರೆಗೆ: 0.95

ಒಟ್ಟಾರೆಯಾಗಿ ದೇಶದಲ್ಲಿ ಆರ್ ಅಂಶದಲ್ಲಿ ಹೆಚ್ಚಳ ಕಂಡುಬಂದಿದೆ. ಅಂಕಿಅಂಶಗಳು ಮೇ 15 ಮತ್ತು ಜೂನ್ 26 ರ ನಡುವೆ, ವೈರಸ್ ಹರಡುವಿಕೆಯ ಪ್ರಮಾಣವು ಅತ್ಯಂತ ಕಡಿಮೆ ಎಂದು ತಿಳಿಸುತ್ತದೆ.

“ಭಾರತದ ಒಟ್ಟಾರೆ ಸಕ್ರಿಯ ಪ್ರಕರಣಗಳು ವಿಶ್ವಾಸಾರ್ಹ ಅಂದಾಜು ಪಡೆಯಲು ತುಂಬಾ ಏರಿಳಿತವನ್ನು ಹೊಂದಿವೆ, ಆದರೆ ದತ್ತಾಂಶವು 1 ಕ್ಕೆ ಹತ್ತಿರವಿರುವ ಮೌಲ್ಯವನ್ನು ತೋರಿಸುತ್ತಿದೆ ಎಂದು ತಂಡವನ್ನು ಮುನ್ನಡೆಸುತ್ತಿರುವ ಗಣಿತ ವಿಜ್ಞಾನ ಸಂಸ್ಥೆಯ ಸೀತಭ್ರಾ ಸಿನ್ಹಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಕೇರಳದ ಹೆಚ್ಚಿನ ಆರ್-ಮೌಲ್ಯದ ಪ್ರಕಾರ ಸೋಂಕು ರಾಜ್ಯದಲ್ಲಿ ವೇಗವಾಗಿ ಹರಡುತ್ತಿದೆ ಎಂದು ಸೂಚಿಸುತ್ತದೆ. ಕೇರಳದ ಕೊವಿಡ್ -19 ಪರಿಸ್ಥಿತಿ ಇನ್ನೂ ಕೆಲವು ವಾರಗಳವರೆಗೆ ಮುಂದುವರಿಯುತ್ತದೆ ಎಂದು ತಜ್ಞರು ಊಹಿಸಿದ್ದಾರೆ.

ಇದನ್ನೂ ಓದಿ:  ಕೇರಳದಲ್ಲಿ ಕೊವಿಡ್ ಪ್ರಕರಣ ಹೆಚ್ಚಳ; ಪರಿಸ್ಥಿತಿ ಪರಿಶೀಲಿಸಲು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಸದಸ್ಯರ ತಂಡ ಕಳುಹಿಸಿದ ಕೇಂದ್ರ ಸರ್ಕಾರ

ಇದನ್ನೂ ಓದಿ: Kerala Lockdown: ಕೇರಳದಲ್ಲಿ ಕೊರೊನಾ ಮತ್ತೆ ಹೆಚ್ಚಳ; ವಾರಾಂತ್ಯದಲ್ಲಿ ಸಂಪೂರ್ಣ ಲಾಕ್​ಡೌನ್ ಘೋಷಿಸಿದ ರಾಜ್ಯ ಸರ್ಕಾರ

(Why Covid cases increasing in Kerala which has highest R-value)

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ