ಭಾರತೀಯರಿಗೆ ಪ್ರಜಾಪ್ರಭುತ್ವವೆಂದರೆ ಜೀವನ ವಿಧಾನ; ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್​​ನಲ್ಲಿ ಪ್ರಧಾನಿ ಮೋದಿ

ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್ತಿನ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಭಾರತೀಯರಿಗೆ ಪ್ರಜಾಪ್ರಭುತ್ವವು ಕೇವಲ ರಾಜಕೀಯ ಮಾದರಿಯಲ್ಲ, ಅದೊಂದು ಜೀವನ ವಿಧಾನವಾಗಿದೆ. ನಮಗೆ ಸಾವಿರಾರು ವರ್ಷಗಳ ಶ್ರೀಮಂತ ಪರಂಪರೆ ಇದೆ. ಇಲ್ಲಿನ ಅನೇಕ ಸಂಸದರು ತಮ್ಮ ಪೂರ್ವಜರಾದ ಬಿಹಾರದಿಂದ ಬಂದವರು" ಎಂದಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಗೌರವವಾದ 'ದಿ ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬೆಗೊ' ಪ್ರಶಸ್ತಿಯನ್ನು ನೀಡಲಾಯಿತು.

ಭಾರತೀಯರಿಗೆ ಪ್ರಜಾಪ್ರಭುತ್ವವೆಂದರೆ ಜೀವನ ವಿಧಾನ; ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್​​ನಲ್ಲಿ ಪ್ರಧಾನಿ ಮೋದಿ
PM Modi Addresses Trinidad and Tobago's Parliament

Updated on: Jul 04, 2025 | 10:40 PM

ಟ್ರಿನಿಡಾಡ್, ಜುಲೈ 4: ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಐತಿಹಾಸಿಕ ರೆಡ್ ಹೌಸ್ ಅನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದಕ್ಕೆ ನಾನು ನಿಮ್ಮೆಲ್ಲರಿಗೂ ವಿನಯದಿಂದ ತಲೆ ಬಾಗುತ್ತೇನೆ ಎಂದಿದ್ದಾರೆ. ಪ್ರಜಾಪ್ರಭುತ್ವವು ಭಾರತಕ್ಕೆ ಕೇವಲ ಒಂದು ರಾಜಕೀಯ ವ್ಯವಸ್ಥೆಯಲ್ಲ, ಭಾರತೀಯರಿಗೆ ಅದು ಜೀವನ ವಿಧಾನ ಮತ್ತು ಪರಂಪರೆಯಾಗಿದೆ ಎಂದು ಮೋದಿ ಬಣ್ಣಿಸಿದರು.

ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹೆಮ್ಮೆಯ ಪ್ರಜಾಪ್ರಭುತ್ವ ಮತ್ತು ಸ್ನೇಹಪರ ರಾಷ್ಟ್ರದ ಚುನಾಯಿತ ಪ್ರತಿನಿಧಿಗಳ ಮುಂದೆ ನಿಲ್ಲಲು ಬಹಳ ಗೌರವವೆನಿಸುತ್ತಿದೆ ಎಂದು ಹೇಳಿದರು. “ಈ ಐತಿಹಾಸಿಕ ಕೆಂಪು ಭವನದಲ್ಲಿ ಮಾತನಾಡಲು ಅವಕಾಶ ಸಿಕ್ಕಿದ ಭಾರತದ ಮೊದಲ ಪ್ರಧಾನಿಯಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಈ ಐತಿಹಾಸಿಕ ಕೆಂಪು ಕಟ್ಟಡವು ಸ್ವಾತಂತ್ರ್ಯ ಮತ್ತು ಘನತೆಗಾಗಿ ಟ್ರಿನಿಡಾಡ್ ಮತ್ತು ಟೊಬಾಗೋ ಜನರ ಹೋರಾಟಗಳು ಮತ್ತು ತ್ಯಾಗಗಳನ್ನು ಕಂಡಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಮೊದಲ ವಿದೇಶಿ ನಾಯಕರಾದ ಪ್ರಧಾನಿ ಮೋದಿ

ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್ತಿನ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಈ ಮಹಾನ್ ರಾಷ್ಟ್ರದ ಜನರು ಇಬ್ಬರು ಗಮನಾರ್ಹ ಮಹಿಳಾ ನಾಯಕಿಯರನ್ನು ಆಯ್ಕೆ ಮಾಡಿದ್ದಾರೆ. ಇಲ್ಲಿನ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳು ಮಹಿಳೆಯರೇ ಆಗದ್ದಾರೆ. ಅವರು ತಮ್ಮನ್ನು ತಾವು ಭಾರತೀಯ ವಲಸಿಗರ ಪುತ್ರಿಯರು ಎಂದು ಹೆಮ್ಮೆಯಿಂದ ಕರೆದುಕೊಂಡಿದ್ದಾರೆ. ಅವರು ತಮ್ಮ ಭಾರತೀಯ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಾರೆ. ನಮ್ಮ ಎರಡೂ ರಾಷ್ಟ್ರಗಳು ವಸಾಹತುಶಾಹಿ ಆಳ್ವಿಕೆಯ ನೆರಳಿನಿಂದ ಎದ್ದು ನಮ್ಮದೇ ಆದ ಕಥೆಗಳನ್ನು ಧೈರ್ಯದಿಂದ ಬರೆಯುತ್ತಿವೆ. ಇಂದು, ನಮ್ಮ ಎರಡೂ ರಾಷ್ಟ್ರಗಳು ಆಧುನಿಕ ಜಗತ್ತಿನಲ್ಲಿ ಹೆಮ್ಮೆಯ ಪ್ರಜಾಪ್ರಭುತ್ವಗಳು ಮತ್ತು ಶಕ್ತಿಯ ಸ್ತಂಭಗಳಾಗಿ ನಿಂತಿವೆ” ಎಂದಿದ್ದಾರೆ.


ಇದನ್ನೂ ಓದಿ: Video: ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು ಎಂದು ಕರೆದ ಪ್ರಧಾನಿ ಮೋದಿ


ಇದು ಪ್ರಧಾನಿ ಮೋದಿಯವರ ಟ್ರಿನಿಡಾಡ್ ಮತ್ತು ಟೊಬೆಗೊಗೆ ಮೊದಲ ಭೇಟಿಯಾಗಿದ್ದು, 1999ರ ನಂತರ ಭಾರತೀಯ ಪ್ರಧಾನಿಯೊಬ್ಬರು ಈ ದೇಶಕ್ಕೆ ನೀಡಿದ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಅವರ 5 ರಾಷ್ಟ್ರಗಳ ಪ್ರವಾಸದ ಎರಡನೇ ಹಂತದ ನಂತರ ಇಲ್ಲಿಗೆ ಅವರು ಆಗಮಿಸಿದ್ದಾರೆ. ಈ ಪ್ರವಾಸದಲ್ಲಿ ಮೊದಲು ಘಾನಾ ಕೂಡ ಸೇರಿತ್ತು. ಅಲ್ಲಿ ಮೋದಿ ಅವರಿಗೆ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇಂದು ಟ್ರಿನಿಡಾಡ್ ಮತ್ತು ಟೊಬೆಗೊದ ಆರ್ಡರ್ ಆಫ್ ಪ್ರಶಸ್ತಿಯನ್ನು ಪಡೆದ ಮೊದಲ ವಿದೇಶಿ ನಾಯಕರೆಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಇದು ಪ್ರಧಾನಿ ಮೋದಿ ಅವರಿಗೆ ಬೇರೆ ದೇಶ ನೀಡಿದ 25ನೇ ಅಂತಾರಾಷ್ಟ್ರೀಯ ಗೌರವವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:39 pm, Fri, 4 July 25