ಲಂಡನ್: ಬ್ರಿಟನ್ (United Kingdom) ಉಪ ಪ್ರಧಾನಿ ಡೊಮಿನಿಕ್ ರಾಬ್ (Dominic Raab) ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ AFP ತಿಳಿಸಿದೆ. ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರ ಆಪ್ತ ಸಹಾಯಕ ಮತ್ತು ಉಪ ಪ್ರಧಾನಿ ಡೊಮಿನಿಕ್ ರಾಬ್ ಅವರು ಕಚೇರಿ ಸಿಬ್ಬಂದಿಗಳನ್ನು ಬೆದರಿಸುತ್ತಿದ್ದಾರೆ ಎಂಬ ಆರೋಪದ ನಡುವೆ ರಾಜೀನಾಮೆ ನೀಡಿದ್ದಾರೆ. ಡೊಮಿನಿಕ್ ರಾಬ್ ಅವರು ಯುಕೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದ ಸಮಯದಿಂದ ಈ ಆರೋಪಗಳು ಬಂದಿವೆ.
ಡೊಮಿನಿಕ್ ರಾಬ್ ಅವರು ತನ್ನ ನಡವಳಿಕೆಯ ವರದಿಯು ತನ್ನ ವಿರುದ್ಧದ ಎರಡು ಹಕ್ಕುಗಳನ್ನು ಎತ್ತಿಹಿಡಿದಿದೆ ಮತ್ತು ಎರಡೂ “ದೋಷಪೂರಿತ” ಎಂದು ಹೇಳಿದ್ದಾರೆ. ಈ ತನಿಖೆಯ ಆದೇಶವನ್ನು ನಾನು ಒಪ್ಪುತ್ತೇನೆ. ಈ ತನಿಖಾ ವರದಿ ನನ್ನ ವಿರುದ್ಧದ ಎರಡು ಹಕ್ಕುಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ತಳ್ಳಿಹಾಕಿದೆ. ನನ್ನ ಮೇಲೆ ಬಂದಿರುವ ಆರೋಪ ದೋಷಪೂರಿತವಾಗಿವೆ, ಆದರೂ ನಾನು ನಮ್ಮ ಉತ್ತಮ ಸರ್ಕಾರದ ನಡವಳಿಕೆಗೆ ಇದು ಅಪಾಯಕಾರಿ ಆಗಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತವು ಕುಟುಂಬ ಮತ್ತು ಸಂಸ್ಕೃತಿಯನ್ನು ಪರಸ್ಪರ ಬೆಸೆದುಕೊಂಡಿದೆ; ರಿಷಿ ಸುನಕ್ ಪುತ್ರಿ ಅನೌಷ್ಕಾ
British Deputy Prime Minister and justice minister Dominic Raab resigns following an independent investigation into formal complaints of bullying, reports Reuters
— ANI (@ANI) April 21, 2023
ಡೊಮಿನಿಕ್ ರಾಬ್ ಅವರ ಈ ನಡವಳಿಕೆಯ ಬಗ್ಗೆ ತಿಂಗಳ ಹಿಂದೆ ಸುದೀರ್ಘ ತನಿಖೆ ನಡೆದಿದೆ. ಇದೀಗ ಅವರ ರಾಜೀನಾಮೆ ನೀಡಿದ್ದಾರೆ. ಮೂರು ವಿಭಿನ್ನ ಇಲಾಖೆಗಳಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನ ಆಧಾರದಲ್ಲಿ ಅವರ ಮೇಲೆ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಸರ್ಕಾರಿ ಅಧಿಕಾರಿಗಳಿಂದ ಪುರಾವೆಗಳು ಕೇಳಲಾಗಿದೆ ಮತ್ತು ಔಪಚಾರಿಕ ದೂರುಗಳ ನಂತರ ಡೊಮಿನಿಕ್ ರಾಬ್ ನವೆಂಬರ್‌ನಲ್ಲಿ ತನಿಖೆಗೆ ಆದೇಶ ನೀಡಲಾಗಿದೆ.
ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Fri, 21 April 23