AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತವು ಕುಟುಂಬ ಮತ್ತು ಸಂಸ್ಕೃತಿಯನ್ನು ಪರಸ್ಪರ ಬೆಸೆದುಕೊಂಡಿದೆ; ರಿಷಿ ಸುನಕ್ ಪುತ್ರಿ ಅನೌಷ್ಕಾ

Rishi Sunak : ‘ನಾನು ನೃತ್ಯವನ್ನು ಬಹಳ ಪ್ರೀತಿಸುತ್ತೇನೆ. ಅದರಲ್ಲೂ ಕೂಚಿಪುಡಿ. ಏಕೆಂದರೆ ನೃತ್ಯ ಮಾಡುವಾಗ ನಮ್ಮ ಮನಸ್ಸನ್ನು ಆವರಿಸಿದ ಚಿಂತೆ, ಒತ್ತಡ, ಬೇಸರ ಎಲ್ಲವೂ ತನ್ನಿಂತಾನೇ ದೂರವಾಗುತ್ತದೆ’ ಅನೌಷ್ಕಾ ಸುನಕ್​

ಭಾರತವು ಕುಟುಂಬ ಮತ್ತು ಸಂಸ್ಕೃತಿಯನ್ನು ಪರಸ್ಪರ ಬೆಸೆದುಕೊಂಡಿದೆ; ರಿಷಿ ಸುನಕ್ ಪುತ್ರಿ ಅನೌಷ್ಕಾ
ಲಂಡನ್​ನಲ್ಲಿ ನಡೆದ ಕೂಚಿಪುಡಿ ನೃತ್ಯೋತ್ಸವ ರಂಗ್ -2022ರಲ್ಲಿ ಭಾಗಿಯಾದ ಅನೌಷ್ಕಾ ಸುನಕ್
TV9 Web
| Updated By: ಶ್ರೀದೇವಿ ಕಳಸದ|

Updated on:Nov 26, 2022 | 1:13 PM

Share

Viral : ಲಂಡನ್​ನಲ್ಲಿ ನಡೆದ ‘ಕೂಚಿಪುಡಿ ನೃತ್ಯೋತ್ಸವ- ರಂಗ್​ 2022’ ದಲ್ಲಿ ಭಾಗವಹಿಸಿದ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್​ ಅವರ ಮಗಳು ಅನೌಷ್ಕಾ ಸುನಕ್​ ನೃತ್ಯಪ್ರದರ್ಶನದಲ್ಲಿ ಭಾಗವಹಿಸಿದ್ದರು. ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭಾರತವು ನನ್ನ ಕುಟುಂಬ ಮತ್ತು ಸಂಸ್ಕೃತಿಯನ್ನು ಬೆಸೆದಿದೆ. ಪ್ರತೀ ವರ್ಷವೂ ನಾನು ಭಾರತಕ್ಕೆ ಬರಲು ಇಷ್ಟಪಡುತ್ತೇನೆ ಎಂದು ಅನೌಷ್ಕಾ ತಿಳಿಸಿದ್ದಾರೆ.

ಪ್ರಸಿದ್ಧ ಕೂಚಿಪುಡಿ ಕಲಾವಿದೆ ಅರುಣಿಮಾ ಕುಮಾರ್ ಅವರು ಈ ನೃತ್ಯೋತ್ಸವವನ್ನು ಲಂಡನ್​ನಲ್ಲಿ ಆಯೋಜಿಸಿದ್ದರು. ಬೇರೆ ಬೇರೆ ದೇಶಗಳಿಂದ ಬಂದ 4ರಿಂದ 85 ವರ್ಷದವರೆಗಿನ ನೂರು ಕಲಾವಿದರು ಇದರಲ್ಲಿ ಭಾಗವಹಿಸಿದ್ದರು. ಇಂಡಿಯಾ ಟುಡೇ ಅನೌಷ್ಕಾಳನ್ನು ಮಾತನಾಡಿಸಿದಾಗ, ‘ನಾನು ನೃತ್ಯವನ್ನು ಬಹಳ ಪ್ರೀತಿಸುತ್ತೇನೆ. ಅದರಲ್ಲೂ ಕೂಚಿಪುಡಿ. ಏಕೆಂದರೆ ನೃತ್ಯ ಮಾಡುವಾಗ ನಮ್ಮ ಮನಸ್ಸನ್ನು ಆವರಿಸಿದ ಚಿಂತೆ, ಒತ್ತಡ, ಬೇಸರ ಎಲ್ಲವೂ ತನ್ನಿಂತಾನೇ ದೂರವಾಗುತ್ತದೆ. ಎಲ್ಲವನ್ನೂ ಮರೆತು ನೃತ್ಯವನ್ನಷ್ಟೇ ನಮ್ಮ ಮನಸ್ಸು ಯೋಚಿಸುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅನೌಷ್ಕಾ ನೃತ್ಯ ಪ್ರದರ್ಶನದಲ್ಲಿ ಅವರ ತಾಯಿ ಅಕ್ಷತಾ ಮೂರ್ತಿ ಮತ್ತು ಶಿಕ್ಷಕರು ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದರು. ಆಯೋಜಕಿ ಅರುಣಿಮಾ, ‘ಹಿರಿಯ ಕಿರಿಯ ಕಲಾವಿದರ ನೃತ್ಯಪ್ರದರ್ಶನಕ್ಕೆ ರಂಗ್​ 2022 ಒಂದು ಉತ್ತಮ ವೇದಿಕೆಯಾಗಿತ್ತು. ಮಕ್ಕಳು, ಹಿರಿಯರು ಮತ್ತು ವಿಶೇಷ ಪರಿಣತಿ ಉಳ್ಳ ಕಲಾವಿದರಿಗೆ ಹೀಗೆ ಒಂದೇ ವೇದಿಕೆ ಸಿಗುವುದು ಅಪರೂಪ. ಕೂಚಿಪುಡಿಯು ಭಾರತದ ವಿವಿಧ ನೃತ್ಯಪ್ರಕಾರಗಳಿಗೆ ಅವಕಾಶವನ್ನು ಕಲ್ಪಿಸಿತು’ ಎಂದಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:24 am, Sat, 26 November 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!