Viral Video: ಬಿಎಂಟಿಸಿ ಬಸ್ ಚಾಲಕನಿಂದ ಬೈಕ್ ಸವಾರನ ಮೇಲೆ ಹಲ್ಲೆ: ಚಾಲಕ ಸಸ್ಪೆಂಡ್
ಬಿಎಂಟಿಸಿ ಬಸ್ ಚಾಲಕ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿರುವ ಘಟನೆ ನಿನ್ನೆ (ನ. 25) ಬೆಂಗಳೂರಿನ ಯಲಹಂಕ ಬಳಿ ನಡೆದಿದೆ.
ಬೆಂಗಳೂರು: ಬಿಎಂಟಿಸಿ ಬಸ್ ಚಾಲಕ (BMTC Bus Driver) ಬೈಕ್ ಸವಾರನ ಮೇಲೆ ಹಲ್ಲೆ ಮಾಡಿರುವ ಘಟನೆ ನಿನ್ನೆ (ನ. 25) ಬೆಂಗಳೂರಿನ (Bengaluru) ಯಲಹಂಕ (Yalahanka) ಬಳಿ ನಡೆದಿದೆ. ಸಂದೀಪ್ (44) ಹಲ್ಲೆಗೊಳಗಾದ ಬೈಕ್ ಸವಾರ. ಯಲಹಂಕ ಬಳಿ ಸಂದೀಪ್ ತಮ್ಮ ಪತ್ನಿಯೊಂದಿಗೆ ತೆರಳುತ್ತಿದ್ದರು. ಈ ವೇಳೆ ಬಿಎಂಟಿಎಸ್ ಬಸ್ವೊಂದು ಮತ್ತೊಂದು ಬಸ್ನ್ನು ಓವರ್ ಟೇಕ್ ಮಾಡಲು ಯತ್ನಿಸಿದೆ. ಆಗ ಬೈಕ್ ಸವಾರ ಅಡ್ಡಿಪಡಿಸಿದನೆಂದು ಬಿಎಂಟಿಸಿ ಬಸ್ ಚಾಲಕ ಆನಂದ್, ಬೈಕ್ ಸವಾರ ಸಂದೀಪನೊಂದಿಗೆ ಕಿರಿಕ್ ತೆಗೆದಿದ್ದಾನೆ.
ಈ ವೇಳೆ ಸಂದೀಪ, ಆನಂದಗೆ ಮಧ್ಯದ ಬೆರಳು ತೋರಿಸಿದ್ದಾನೆ. ಇದಕ್ಕೆ ಕ್ರೋದಗೊಂಡ ಆನಂದ್, ಸಂದೀಪ್ನೊಂದಿಗೆ ಜಗಳಕ್ಕೆ ಇಳಿದಿದ್ದಾನೆ. ಗಲಾಟೆ ತಾರಕಕ್ಕೆ ಏರಿ ಚಾಲಕ ಆನಂದ್ ಸಂದೀಪ್ಗೆ ಮನಸೋ ಇಚ್ಛೆ ಥಳಿಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Road Rage in #Bengaluru: A biker was assaulted by a #BMTC bus driver for being in the way while overtaking another bus in #Yelahanka.
The driver, who alleged he was shown the middle-finger by the biker, has been suspended.#Karnataka #BBMP #ViralVideo pic.twitter.com/SXko1kPsjp
— Hate Detector ? (@HateDetectors) November 25, 2022
ಇನ್ನೂ ಗಾಯಾಳು ಬೈಕ್ ಸವಾರ ಸಂದೀಪ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕ ಆನಂದ್ನನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:40 am, Sat, 26 November 22