ಬೊಮ್ಮಾಯಿ ದಿಲ್ಲಿ ಪ್ರವಾಸ ನಿಗದಿ ಬೆನ್ನೆಲ್ಲೆ ಸಿಎಂ ನಿವಾಸದೆದರು ಶಾಸಕರ ಪರೇಡ್​: ನನಸಾಗುತ್ತಾ ಸಚಿವ ಆಕಾಂಕ್ಷಿಗಳ ಕನಸು?

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿರುವಾಗಲೇ ಸಚಿವ ಸ್ಥಾನಕ್ಕೆ ಲಾಬಿ ನಡೆದಿದೆ.

ಬೊಮ್ಮಾಯಿ ದಿಲ್ಲಿ ಪ್ರವಾಸ ನಿಗದಿ ಬೆನ್ನೆಲ್ಲೆ ಸಿಎಂ ನಿವಾಸದೆದರು ಶಾಸಕರ ಪರೇಡ್​: ನನಸಾಗುತ್ತಾ ಸಚಿವ ಆಕಾಂಕ್ಷಿಗಳ ಕನಸು?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ವಿವೇಕ ಬಿರಾದಾರ

Updated on: Nov 26, 2022 | 10:43 AM

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ (Assimbly Election) ಕೆಲವೇ ತಿಂಗಳು ಬಾಕಿ ಉಳಿದಿರುವಾಗಲೇ ಸಚಿವ ಸ್ಥಾನಕ್ಕೆ ಲಾಬಿ ನಡೆದಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಗುಜರಾತ ಚುನಾವಣೆ (Gujarat Election) ನಂತರ ಸಚಿವ ಸಂಪುಟ (Cabinet extinstion)

ವಿಸ್ತರಣೆ ಮಾಡುತ್ತೇನೆ ಎಂದು ಶಿವಮೊಗ್ಗದಲ್ಲಿ ಘೋಷಿಸಿದ ಬೆನ್ನೆಲ್ಲೆ, ಸಿಎಂ ನಿವಾಸದ ಎದುರು ಸಚಿವ ಆಕಾಂಕ್ಷಿಗಳು ಪರೇಡ್ ಮಾಡುತ್ತಿದ್ದಾರೆ. ಇನ್ನೂ ಈ ಸಂಬಂಧ ಸಿಎಂ ಬೊಮ್ಮಾಯಿ ನ.29ರಂದು ದೆಹಲಿಗೆ ತೆರಳುತ್ತಿರುವ ಹಿನ್ನೆಲೆ ಮತ್ತಷ್ಟು ಒತ್ತಡ ಹೆಚ್ಚಾಗಿದೆ. ಸಾಹುಕಾರ್ ರಮೇಶ್​ ಜಾರಕಿಹೊಳಿ ಸಿಎಂ ಬೊಮ್ಮಾಯಿ ಮನೆಗೆ ಭೇಟಿ ನೀಡುತ್ತಿದ್ದಾರೆ. ಇನ್ನೂ ಮತ್ತೆ ಸಂಪುಟ ಸೇರಲು ಹವಣಿಸುತ್ತಿರುವ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಮತ್ತು ಸಿ. ಪಿ ಯೋಗೇಶ್ವರ ಬೊಮ್ಮಾಯಿ ಮೇಲೆ ಒತ್ತಡ ಹೇರುತ್ತಿದ್ದಾರೆ.

ಸಿಎಂ ಪ್ರತಿ ಬಾರಿಯೂ ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡುತ್ತಿದ್ದಾರೆ. ಹೀಗಾಗಿ ನಾಯಕರು ಸಿಎಂ ಬೊಮ್ಮಾಯಿಯವರು ನಿನ್ನೆಯ ಭರವಸೆ ಬಗ್ಗೆ ಗೊಂದಲದಲ್ಲಿದ್ದಾರೆ. ಈ ಬರಿಯಾದ್ರೂ ಮನದಾಸೆ ಇಡೇರಿಸುತ್ತಾರಾ ಅನ್ನೋ ಪ್ರಶ್ನೆ ಮೂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ