Donald Trump: ಟ್ವಿಟರ್​, ಫೇಸ್​ಬುಕ್​ಗೆ ಸಡ್ಡು ಹೊಡೆಯಲು ಮುಂದಾದ ಟ್ರಂಪ್; ಸ್ವಂತ ಸಾಮಾಜಿಕ ಜಾಲತಾಣ ಘೋಷಣೆ

| Updated By: shivaprasad.hs

Updated on: Oct 21, 2021 | 9:51 AM

Truth Social: ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮದೇ ಸ್ವಂತ ಸಾಮಾಜಿಕ ಜಾಲತಾಣ ಆರಂಭಿಸುವುದಾಗಗಿ ಘೋಷಿಸಿದ್ದಾರೆ. ಅದಕ್ಕೆ ‘ಟ್ರೂಥ್ ಸೋಷಿಯಲ್’ ಎಂದು ಹೆಸರಿಡಲಾಗಿದೆ.

Donald Trump: ಟ್ವಿಟರ್​, ಫೇಸ್​ಬುಕ್​ಗೆ ಸಡ್ಡು ಹೊಡೆಯಲು ಮುಂದಾದ ಟ್ರಂಪ್; ಸ್ವಂತ ಸಾಮಾಜಿಕ ಜಾಲತಾಣ ಘೋಷಣೆ
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
Follow us on

ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಂತ ಸಾಮಾಜಿಕ ಜಾಲತಾಣ ಆರಂಭಿಸುವುದಾಗಿ ಘೋಷಿಸಿದ್ದಾರೆ. ಅಮೆರಿಕ ಚುನಾವಣೆ ಸಂದರ್ಭದಲ್ಲೇ ಟ್ರಂಪ್ ಈ ಕುರಿತು ಘೋಷಿಸಿದ್ದರು. ಪ್ರಸ್ತುತ ತಮ್ಮ ಘೋಷಣೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಸಾಮಾಜಿಕ ಜಾಲತಾಣಕ್ಕೆ ‘ಟ್ರೂತ್ ಸೋಷಿಯಲ್’ ಎಂದು ಹೆಸರಿಡಲಾಗಿದೆ. ನವೆಂಬರ್​ನಲ್ಲಿ ‘ಟ್ರೂತ್ ಸೋಷಿಯಲ್’ ಲಾಂಚ್ ಆಗುವ ಸಾಧ್ಯತೆ ಇದೆ. ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿರುವ ಟ್ರಂಪ್, ‘‘​ತಾಲಿಬಾನಿಗಳು ಟ್ವಿಟರ್​ನಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ ನಮ್ಮ ಅಮೇರಿಕಾ ಅಧ್ಯಕ್ಷರು ಈ ಕುರಿತು ಮೌನತಾಳಿದ್ದಾರೆ. ಅಂತಹ ಜಗತ್ತಿನಲ್ಲಿ ನಾವು ಜೀವಿಸುತ್ತಿದ್ದೇವೆ’’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಡೊನಾಲ್ಡ್ ಟ್ರಂಪ್ ಫೇಸ್​ಬುಕ್ ಹಾಗೂ ಟ್ವಿಟರ್​ನಿಂದ ನಿಷೇಧಕ್ಕೊಳಗಾಗಿದ್ದಾರೆ. ವಿವಾದಾತ್ಮಕ ಪೋಸ್ಟ್​ಗಳಿಂದ ಅವರು ಸಾಮಾಜಿಕ ಜಾಲತಾಣಗಳಿಂದ ಬ್ಯಾನ್ ಆಗಿದ್ದರು. ಆ ಸಮಯದಲ್ಲಿ ಟೆಕ್ ದೈತ್ಯರಿಗೆ ಸಡ್ಡು ಹೊಡೆಯಲು ಪ್ರತ್ಯೇಕ ಸಾಮಾಜಿಕ ಜಾಲತಾಣ ಆರಂಭಿಸುವ ಮುನ್ಸೂಚನೆ ನೀಡಿದ್ದರು. ಇದೀಗ ‘ಟ್ರಂಪ್ ಮೀಡಿಯಾ ಆಂಡ್ ಟೆಕ್ನಾಲಜಿ’ ಸಂಸ್ಥೆಯ ಮೊದಲ ಪ್ರಾಜೆಕ್ಟ್​ನ ಭಾಗವಾಗಿ ‘ಟ್ರೂಥ್ ಸೋಷಿಯಲ್’ ಲಾಂಚ್ ಆಗಲಿದೆ.

ಈ ಕುರಿತು ಎಎನ್​ಐ ಹಂಚಿಕೊಂಡಿರುವ ಟ್ವೀಟ್:

ಪ್ರಸ್ತುತ ‘ಟ್ರೂಥ್ ಸೋಷಿಯಲ್​’ ಆಪಲ್ ಸ್ಟೋರ್​ನಲ್ಲಿ ರಿಜಿಸ್ಟರ್ ಆಗುವ ಪ್ರಕ್ರಿಯೆ ನಡೆಯುತ್ತಿದ್ದು, ಬೀಟಾ ಬಳಕೆದಾರರಿಗೆ ನವೆಂಬರ್​ನಿಂದ ಲಭ್ಯವಾಗುವ ನಿರೀಕ್ಷೆ ಇದೆ. ಸಾಮಾನ್ಯ ಬಳಕೆದಾರರಿಗೆ 2022ರ ಮೊದಲ ತ್ರೈಮಾಸಿಕದಲ್ಲಿ ಸಿಗುವ ನಿರೀಕ್ಷೆ ಇದೆ. ಟ್ರಂಪ್ ಪ್ರಸ್ತುತ ಯಾವ ಸಾಮಾಜಿಕ ಜಾಲತಾಣದಲ್ಲೂ ಖಾತೆಯನ್ನು ಹೊಂದಿಲ್ಲ. ‘ಟ್ರೂಥ್ ಸೋಷಿಯಕ್’ ಮುಖಾಂತರವೇ ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಕೊಳ್ಳುವುದಾಗಿ ಟ್ರಂಪ್ ತಿಳಿಸಿದ್ದಾರೆ.

ಇದನ್ನೂ ಓದಿ:

’ಫ್ರೆಂಡ್​ ರಿಕ್ವೆಸ್ಟ್​ ಅಕ್ಸೆಪ್ಟೆಡ್​’-ಅಮರಿಂದರ್​ ಸಿಂಗ್​ ಮೈತ್ರಿ ಮಾತಿಗೆ ಅಸ್ತು ಎಂದ ಬಿಜೆಪಿ..ಆದರೆ ಮುಂದೇನು?

ವಿಜಯನಗರ: 600 ಮೆಟ್ಟಿಲು ಹತ್ತಿ ದೇವರ ಹರಕೆ ತೀರಿಸಿದ ಭಕ್ತ ದರ್ಶನ ಪಡೆದು ಹೊರ ಬರುವಾಗ ಸಾವು

‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿಗೆ ಬಹುಭಾಷಾ ಸಿನಿಮಾ ಆಫರ್​; ಈ ಚಿತ್ರಕ್ಕೆ ಹೀರೋ ಯಾರು?