ವಿಜಯನಗರ: 600 ಮೆಟ್ಟಿಲು ಹತ್ತಿ ದೇವರ ಹರಕೆ ತೀರಿಸಿದ ಭಕ್ತ ದರ್ಶನ ಪಡೆದು ಹೊರ ಬರುವಾಗ ಸಾವು

600 ಮೆಟ್ಟಿಲು ಹತ್ತಿ ದರ್ಶನ ಪಡೆಯುವಾಗ ಎದೆ ನೋವು ಕಾಣಿಸಿಕೊಂಡಿದೆ. ಸ್ಥಳೀಯರು ಡೋಲಿಯಲ್ಲಿ ಕೆಳಗೆ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೆ ಮಾರ್ಗ ಮಧ್ಯವೇ ಸಾವನ್ನಪ್ಪಿದ್ದಾರೆ.

ವಿಜಯನಗರ: 600 ಮೆಟ್ಟಿಲು ಹತ್ತಿ ದೇವರ ಹರಕೆ ತೀರಿಸಿದ ಭಕ್ತ ದರ್ಶನ ಪಡೆದು ಹೊರ ಬರುವಾಗ ಸಾವು
ಪ್ರಾತಿನಿಧಿಕ ಚಿತ್ರ

ದಾವಣಗೆರೆ: ದೇವರ ದರ್ಶನ ಪಡೆದು ವಾಪಸಾಗುವಾಗ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗೆಮ್ಮ ಕ್ಷೇತ್ರದಲ್ಲಿ 60 ವರ್ಷದ ಹುಚ್ಚಪ್ಪ ಎಂಬುವವರು ಮೃತಪಟ್ಟಿದ್ದಾರೆ. ಹುಚ್ಚಪ್ಪ 600 ಮೆಟ್ಟಿಲು ಹತ್ತಿ ದೇವಿಗೆ ಹರಕೆ ತೀರಿಸಿ, ದೇವರ ದರ್ಶನ ಪಡೆದು ವಾಪಸಾಗುತ್ತಿದ್ದರು. ಈ ವೇಳೆ ಹೃದಯಾಘಾತದಿಂದ ಉಚ್ಚಂಗೆಮ್ಮ ಕ್ಷೇತ್ರದಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತ ವೃದ್ಧ ದಾವಣಗೆರೆ ನಗರದ ನಿವಾಸಿ. ಪತ್ನಿ ಸಹಿತ ಉಚ್ಚಂಗೆಮ್ಮನ ದರ್ಶನಕ್ಕೆ ತೆರಳಿದ್ದರು.

600 ಮೆಟ್ಟಿಲು ಹತ್ತಿ ದರ್ಶನ ಪಡೆಯುವಾಗ ಎದೆ ನೋವು ಕಾಣಿಸಿಕೊಂಡಿದೆ. ಸ್ಥಳೀಯರು ಡೋಲಿಯಲ್ಲಿ ಕೆಳಗೆ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೆ ಮಾರ್ಗ ಮಧ್ಯವೇ ಸಾವನ್ನಪ್ಪಿದ್ದಾರೆ. ಆರೋಗ್ಯ ಸಿಬ್ಬಂದಿ ವ್ಯವಸ್ಥೆ ಮಾಡಿ. ಗುಡ್ಡದ ಮೇಲಿನ ಪುಣ್ಯಕ್ಷೇತ್ರದಲ್ಲಿ ಓರ್ವ ಆರೋಗ್ಯ ಸಿಬ್ಬಂದಿ ನೇಮಕ ಮಾಡಿ. ಕನಿಷ್ಠ ತುರ್ತು ಚಿಕಿತ್ಸೆಗಾದರೂ ವ್ಯವಸ್ಥೆ ಮಾಡಿ ಅಂತ ಸ್ಥಳೀಯರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

ವ್ಯಕ್ತಿಯ ಮೃತದೇಹ ಪತ್ತೆ
ಕೋಲಾರ: ನೇಣುಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಕೋಲಾರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಿರ್ಮಾಣಹಂತದ ಕಟ್ಟಡದಲ್ಲಿ ಅಪರಿಚಿತನ ಶವ ಪತ್ತೆಯಾಗಿದೆ. ಸತೀಶ್ ಎಂಬುವರಿಗೆ ನಿರ್ಮಾಣಹಂತದ ಕಟ್ಟಡ ಸೇರಿದೆ.

ಇದನ್ನೂ ಓದಿ

ಕರಾವಳಿಯಲ್ಲಿ ಶುರುವಾಯ್ತು ಹೊಸ ವಿವಾದ; ದೇಗುಲದ ಆಭರಣ ಹೆಸರಲ್ಲಿ ಹೈಡ್ರಾಮಾ, ಆಡಳಿತ ಮಂಡಳಿ-ಬಾಳ್ತಿಲ ವಂಶಸ್ಥರ ನಡುವೆ ಕದನ

’ಫ್ರೆಂಡ್​ ರಿಕ್ವೆಸ್ಟ್​ ಅಕ್ಸೆಪ್ಟೆಡ್​’-ಅಮರಿಂದರ್​ ಸಿಂಗ್​ ಮೈತ್ರಿ ಮಾತಿಗೆ ಅಸ್ತು ಎಂದ ಬಿಜೆಪಿ..ಆದರೆ ಮುಂದೇನು?

Click on your DTH Provider to Add TV9 Kannada