ಸರ್ಕಾರಿ ದಾಖಲೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣ, ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಮತ್ತೆ ಬಂಧನ

|

Updated on: Jun 14, 2023 | 7:56 AM

ಸರ್ಕಾರದ ದಾಖಲೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​(Donald Trump)ರನ್ನು   ಮತ್ತೆ ಬಂಧಿಸಲಾಗಿದೆ.

ಸರ್ಕಾರಿ ದಾಖಲೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣ, ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಮತ್ತೆ ಬಂಧನ
ಡೊನಾಲ್ಡ್​ ಟ್ರಂಪ್
Follow us on

ಸರ್ಕಾರದ ದಾಖಲೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​(Donald Trump)ರನ್ನು   ಮತ್ತೆ ಬಂಧಿಸಲಾಗಿದೆ. ಪ್ರಕರಣ ಸಂಬಂಧ ಮಿಯಾಮಿ ಕೋರ್ಟ್​ ಎದುರು ಟ್ರಂಪ್ ಶರಣಾಗಿದ್ದು, ಈ ವೇಳೆ ಪೊಲೀಸರು ಬಂಧಿಸಿದ್ದಾರೆ. ಟ್ರಂಪ್​ ವಿರುದ್ಧ ಸರ್ಕಾರದ ದಾಖಲೆಗಳ ಅಕ್ರಮ ಸಂಗ್ರಹ ಆರೋಪವಿದೆ, 30ಕ್ಕೂ ಹೆಚ್ಚು ರಹಸ್ಯ ಕಡತಗಳನ್ನು ಅಕ್ರಮವಾಗಿ ಹೊತ್ತೊಯ್ದ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣ ಸಂಬಂಧ ಮಿಯಾಮಿ ಕೋರ್ಟ್​ ಟ್ರಂಪ್​ರವರ ವಿಚಾರಣೆ ನಡೆಸಲಿದೆ. ಆರೋಪ ಸಾಬೀತಾದರೆ ಟ್ರಂಪ್​ಗೆ 20 ವರ್ಷ ಜೈಲು ಶಿಕ್ಷೆ ಸಾಧ್ಯತೆ ಇದೆ ಎನ್ನಲಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷರು ಎದುರಿಸುತ್ತಿರುವ ಎರಡನೇ ಕ್ರಿಮಿನಲ್ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ತಮ್ಮದೇನೂ ತಪ್ಪಿಲ್ಲ ಎಂದು ಅವರು ವಾದಿಸಿದ್ದಾರೆ.

ಮಿಯಾಮಿ ಫೆಡರಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ಜೊನಾಥನ್ ಗುಡ್​ಮ್ಯಾನ್ ಅವರ ಮುಂದೆ ವಿಚಾರಣೆ ಎದುರಿಸಿದ ಟ್ರಂಪ್, ತಮ್ಮ ವಿರುದ್ಧ ಕೇಳಿಬಂದ ಕ್ರಿಮಿನಲ್ ಆರೋಪಗಳ ತಪ್ಪೊಪ್ಪಿಕೊಂಡಿಲ್ಲ. ಈ ಪ್ರಕರಣದಲ್ಲಿ ತಮ್ಮನ್ನು ವಿನಾಕಾರಣ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಮತ್ತಷ್ಟು ಓದಿ: ರಹಸ್ಯ ದಾಖಲೆಗಳ ಪ್ರಕರಣ: ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ, ದಾಖಲೆಗಳನ್ನು ಎಲ್ಲೆಲ್ಲಿ ಅಡಗಿಸಿಟ್ಟಿದ್ದರು 

ರಹಸ್ಯ ದಾಖಲೆಗಳ ಹೊತ್ತೊಯ್ದ ಪ್ರಕರಣದಲ್ಲಿ ಒಂದೊಮ್ಮೆ ಶಿಕ್ಷೆಗೆ ಒಳಗಾದರೆ ಡೊನಾಲ್ಡ್​ ಟ್ರಂಪ್ ಅವರು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಕ್ರಿಮಿನಲ್ ಪ್ರಕರಣ ಇದಾಗಿದ್ದು, ಆರೋಪ ಸಾಬೀತಾದರೆ 20 ವರ್ಷಗಳ ಜೈಲು ಶಿಕ್ಷೆ ಖಚಿತ ಎನ್ನಲಾಗುತ್ತಿದೆ.

ಡೊನಾಲ್ಡ್​ ಟ್ರಂಪ್ ಮಿಯಾಮಿ ಕೋರ್ಟ್​ ಮುಂದೆ ವಿಚಾರಣೆಗೆ ಒಳಗಾಗುವ ಮುನ್ನ ಅವರ ಬೆಂಬಲಿಗರು ಕೋರ್ಟ್​ ಮುಂದೆ ಘೋಷಣೆ ಕೂಗಿದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ