ಡೊನಾಲ್ಡ್ ಟ್ರಂಪ್ ಅವರ ಖಾಸಗಿ ವಕೀಲ ರೂಡಿ ಗ್ಯುಲೈನಿ ಅವರ ಟಿಶ್ಯೂ ಪೇಪರ್ ಅಥವಾ ಕರವಸ್ತ್ರ ಬಳಕೆಯ ವೈಖರಿಗೆ ಟ್ರೋಲ್ಗಳ ಸುರಿಮಳೆಯಾಗಿದೆ. ಅವರು ಮೂಗು ಒರೆಸಿಕೊಂಡ ಟಿಶ್ಯೂ ಪೇಪರ್ ನಿಂದಲೇ ಮುಖವನ್ನು ಸವರಿಕೊಂಡಿರುವ ವಿಡಿಯೋ ಸಾವಿರಾರು ಬಾರಿ ರಿಟ್ವೀಟ್ ಆಗಿದ್ದು, ವ್ಯಂಗ್ಯದ ಕಾಮೆಂಟ್ಗಳ ಮಹಾಪೂರವೇ ಹರಿದು ಬಂದಿದೆ.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಎದುರು ನಿಂತಿದ್ದಾಗಲೇ ಟಿಶ್ಯೂ ಪೇಪರ್ ಅಡ್ಡ ಹಿಡಿದು ಗ್ಯುಲೈನಿ ಮೂಗು ಸೀದಿದ್ದಾರೆ. ನಂತರ ಅದೇ ವಸ್ತುವಿನಿಂದ ತುಟಿ ಮತ್ತು ಮುಖ ಒರೆಸಿಕೊಂಡಿದ್ದಾರೆ.
ಈ ವಿಡಿಯೊ ನೋಡಿದವರು ಅಸಹ್ಯಿಸಿಕೊಂಡು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೊದ ಅವತರಣಿಕೆಯೊಂದು 20 ಲಕ್ಷಕ್ಕೂ ಹೆಚ್ಚು ವ್ಯೂಸ್ ಪಡೆದುಕೊಂಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು ನೀಡಿದ ಹೇಳಿಕೆಗಿಂತಲೂ ಹೆಚ್ಚಾಗಿ ಗ್ಯುಲೈನಿಯ ಈ ಕೃತ್ಯ ಜನರ ಗಮನ ಸೆಳೆದಿದೆ.
‘ಕೊರೊನಾದಂಥ ಸಾಂಕ್ರಾಮಿಕ ಇರಲಿ, ಇಲ್ಲದಿರಲಿ ಇದಂತೂ ಅಸಹ್ಯದ ನಡವಳಿಕೆ. ಇಂಥ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕೆಂದು ಮಕ್ಕಳಿಗೇ ಚೆನ್ನಾಗಿ ಗೊತ್ತಿರುತ್ತೆ’ ಎಂದು ಹಲವರು ಹರಿಹಾಯ್ದಿದ್ದಾರೆ.
oh my god I missed this pic.twitter.com/OGFzvC80Fy
— Tim Hogan (@timjhogan) November 19, 2020