ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರು ಇನ್ನು ವೈಟ್ಹೌಸ್ನಲ್ಲಿ ಉಳಿಯುವುದು ಕೆಲವೇ ದಿನ ಮಾತ್ರ. ಅಧ್ಯಕ್ಷರಾಗಿ ಟ್ರಂಪ್ ಕೊನೆಯ ದಿನಗಳಲ್ಲೂ ಸಾಕಷ್ಟು ಹಗರಣಗಳು ಹೊರ ಬೀಳುತ್ತಿವೆ. ಈಗ ಟ್ರಂಪ್ ಅವರ ಹೊಸ ಆಡಿಯೋ ಟೇಪ್ ಒಂದು ಲೀಕ್ ಆಗಿದ್ದು, ಮತ ಪಡೆಯಲು ಚುನಾವಣಾ ಅಧಿಕಾರಿಗಳಿಗೆ ಒತ್ತಡ ಹೇರಿರುವುದು ಕಂಡು ಬಂದಿದೆ.
ಅಮೆರಿಕದ ಸ್ಥಳೀಯ ಮಾಧ್ಯಮಗಳು ಟ್ರಂಪ್ ಜಾರ್ಜಿಯಾದ ಚುನಾವಣಾ ಅಧಿಕಾರಿಗಳ ಜೊತೆ ಮಾತನಾಡಿದ ಆಡಿಯೋ ಒಂದನ್ನು ಲೀಕ್ ಮಾಡಿದೆ. ಇದರಲ್ಲಿ ಚುನಾವಣಾ ಅಧಿಕಾರಿಗಳ ಬಳಿ ಸಹಾಯ ಮಾಡುವಂತೆ ಟ್ರಂಪ್ ಒತ್ತಡ ಹಾಕಿದ್ದಾರೆ.
ನನ್ನನ್ನು ಗೆಲ್ಲಿಸಲು ಹೆಚ್ಚೆಚ್ಚು ಮತಗಳನ್ನು ಹುಡುಕಿ ಎಂದು ಚುನಾವಣಾ ಅಧಿಕಾರಿಗಳಿಗೆ ಟ್ರಂಪ್ ಒತ್ತಡ ಹಾಕಿರುವುದು ಆಡಿಯೋದಲ್ಲಿ ಕೇಳಿ ಬಂದಿದೆ. ಸದ್ಯ, ಈ ಆಡಿಯೋ ಅಮೆರಿಕದಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಚಲನ ಸೃಷ್ಟಿಸಿದೆ.
ಈ ಆಡಿಯೋ ಹೊರ ಬರುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ವೋಟರ್ ಸ್ಕ್ಯಾಮ್ ಬಗ್ಗೆ ನಾನು ರಾಜ್ಯ ಕಾರ್ಯದರ್ಶಿ ಬ್ರಾಡ್ ರಾಫೆನ್ಸ್‌ಪರ್ಗರ್ ಜೊತೆ ಮಾತನಾಡಲು ಪ್ರಯತ್ನಿಸಿದ್ದೆ. ಆದರೆ, ಈ ಬಗ್ಗೆ ಅವರು ಉತ್ತರಿಸಲು ನಿರಾಕರಿಸಿದ್ದಾರೆ ಎಂದಿದ್ದಾರೆ.
I spoke to Secretary of State Brad Raffensperger yesterday about Fulton County and voter fraud in Georgia. He was unwilling, or unable, to answer questions such as the “ballots under table” scam, ballot destruction, out of state “voters”, dead voters, and more. He has no clue!
— Donald J. Trump (@realDonaldTrump) January 3, 2021
ಇದಕ್ಕೆ ಜಾರ್ಜಿಯಾ ಚುನಾವಣಾ ಅಧಿಕಾರಿ ಉತ್ತರ ನೀಡಿದ್ದು, ಇದು ಸಂಪೂರ್ಣ ಸುಳ್ಳು. ಈ ಆಡಿಯೋದಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ.