ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪಾಕ್ ಸಿದ್ಧ ಎಂದ ಡೊನಾಲ್ಡ್ ಟ್ರಂಪ್

ಭಾರತದ ಪ್ರತಿ ವಿಚಾರದಲ್ಲಿ ಅಮೆರಿಕ ಒಂದಲ್ಲ ಒಂದು ರೀತಿಯಲ್ಲಿ ಹಸ್ತಕ್ಷೇಪ ಮಾಡಲು ಮುಂದಾಗುತ್ತಿದೆ . ಆದರೆ ಭಾರತ ಇದಕ್ಕೆ ಅವಕಾಶ ನೀಡುತ್ತಿಲ್ಲ, ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಪ್ರತಿನಿಧಿಗಳು ಮುಂದಿನ ವಾರ ಅಮೆರಿಕಕ್ಕೆ ಭೇಟಿ ನೀಡಿ ಸುಂಕದ ಕುರಿತು ಒಪ್ಪಂದ ಮಾಡಿಕೊಳ್ಳಲಿದ್ದಾರೆ. ಈ ವೇಳೆ ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪಾಕ್ ಸಿದ್ಧ ಎಂದ ಡೊನಾಲ್ಡ್ ಟ್ರಂಪ್
ಮೋದಿ, ಟ್ರಂಪ್​​, ಪಾಕ್ ಪ್ರಧಾನಿ

Updated on: May 31, 2025 | 11:55 AM

ಭಾರತ-ಪಾಕಿಸ್ತಾನದ ವಿಚಾರದಲ್ಲಿ ಹಾಗೂ ವಿದೇಶದ ಅನೇಕ ರಾಷ್ಟ್ರದ ವ್ಯವಸ್ಥೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಎಲ್ಲದರಲ್ಲೂ ನನ್ನದ್ದೂ ಒಂದು ಎಂದು ಹೇಳಿಕೊಂಡ ಪ್ರತಿಯೊಂದು ವಿಚಾರದಲ್ಲೂ ಮೂಗು ತೂರಿಸುವುದು. ಇದೀಗ ಮತ್ತೆ ಭಾರತ – ಪಾಕ್ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಆದರೆ ಇದಕ್ಕೆ ಭಾರತ ಅವಕಾಶ ನೀಡುತ್ತಿಲ್ಲ. ಮೇ 30ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಪ್ರತಿನಿಧಿಗಳು ಮುಂದಿನ ವಾರ ಅಮೆರಿಕಕ್ಕೆ ಭೇಟಿ ನೀಡಿ ಸುಂಕದ ಕುರಿತು ಒಪ್ಪಂದ ಮಾಡಿಕೊಳ್ಳಲಿದ್ದಾರೆ. ಈ ವೇಳೆ ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಜಂಟಿ ನೆಲೆ ಆಂಡ್ರ್ಯೂಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಭಾರತ ಅಥವಾ ಪಾಕಿಸ್ತಾನ ಎರಡೂ ದೇಶಗಳು ಮಿಲಿಟರಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಹಾಗಾಗಿ ಅವರೊಂದಿಗೆ ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ.

ಮುಂದಿನ ವಾರ ಪಾಕಿಸ್ತಾನ ಪ್ರತಿನಿಧಿಗಳು ಬರುತ್ತಿದ್ದಾರೆ. ನಾವು ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ತುಂಬಾ ಹತ್ತಿರದಲ್ಲಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಈ ಎರಡು ದೇಶಗಳು ಘರ್ಷಣೆಯಲ್ಲಿ ಇರುವ ಕಾರಣ ಅಮೆರಿಕ ಅವರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿಲ್ಲ ಎಂದು ಹೇಳಿದ್ದಾರೆ. ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರತಿಯಾಗಿ ಭಾರತ ಪಾಕಿಸ್ತಾನದ ಮೇಲೆ ಆಪರೇಷನ್​​ ಸಿಂದೂರದ ಮೂಲಕ ಪಾಕ್ ಭಯೋತ್ಪಾದಕ ನೆಲೆಗಳು ಮೇಲೆ ದಾಳಿ ನಡೆಸಿತ್ತು. ಇದು ಭಾರತದ ಇತಿಹಾಸಲ್ಲಿ ಬಹಳ ದೊದ್ಡ ಕಾರ್ಯಚರಣೆಯಾಗಿತ್ತು. ಇದೀಗ ಈ ಘರ್ಷಣೆ ಮುಂದುವರಿದಿದೆ. ಹಾಗಾಗು ಎರಡು ದೇಶಗಳ ಜತೆಗೆ ಯಾವುದೇ ಒಪ್ಪಂದಗಳನ್ನು ಮಾಡಿಕೊಳ್ಳಲು ತಯಾರಿಲ್ಲ ಎಂದು ಹೇಳಿದ್ದಾರೆ.

ಇನ್ನು ಪಾಕಿಸ್ತಾನಕ್ಕೆ ಅಮೆರಿಕ ಜಾರಿಗೆ ತಂದಿರುವ ಸುಂಕ ಏರಿಕೆ ನೀತಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಈಗಾಗಲೇ ಪಾಕ್ ಭಾರತ ಸೇರಿದಂತೆ ಅನೇಕ ದೇಶಗಳ ಮೇಲೆ ಸುಂಕ ನೀತಿಯನ್ನು ತಂದಿದೆ. ಅದರಲ್ಲಿ ಪಾಕ್​​​ಗೆ 29% ಸುಂಕವನ್ನುಎದುರಿಸಬೇಕಾಗುತ್ತದೆ . ಪಾಕಿಸ್ತಾನವು ಅಮೆರಿಕದೊಂದಿಗೆ ಹೊಂದಿರುವ $3 ಬಿಲಿಯನ್ ವ್ಯಾಪಾರ ಹೆಚ್ಚುವರಿಯೇ ಈ ಸುಂಕ ಹೊರೆಯಾಗಲಿದೆ. ಇನ್ನು ಭಾರತದೊಂದಿಗೆ ನಡೆಯುತ್ತಿರುವ ವ್ಯಾಪಾರ ಮಾತುಕತೆಗಳ ಕುರಿತು ಪ್ರತಿಕ್ರಿಯಿಸಿದ ಟ್ರಂಪ್, ನಿಮಗೆ ತಿಳಿದಿರುವಂತೆ, ನಾವು ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಇಷ್ಟಪಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಾಕ್​​​ ಪರ ನಿಮ್ಮ ಹೇಳಿಕೆ ನಮಗೆ ನಿರಾಶೆ ತಂದಿದೆ ಎಂದ ತರೂರ್, ಹೇಳಿಕೆಯಿಂದ ಹಿಂದೆ ಸರಿದ ಕೊಲಂಬಿಯಾ

ಭಾರತ-ಅಮೆರಿಕ ಸಂಬಂಧವು “ಐತಿಹಾಸಿಕ ಉತ್ತುಂಗದಲ್ಲಿದೆ” ಮತ್ತು 21 ನೇ ಶತಮಾನದಲ್ಲಿ ಪ್ರಮುಖ ಪಾಲುದಾರಿಕೆಯನ್ನು ಪ್ರತಿನಿಧಿಸುತ್ತದೆ ಎಂದು ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ ಹೇಳಿದ್ದಾರೆ. ವಾಷಿಂಗ್ಟನ್‌ನಲ್ಲಿ ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ. ವಿದೇಶಾಂಗ ಸಚಿವಾಲಯದ ಹೇಳಿಕೆಯ ಪ್ರಕಾರ, ಮಿಶ್ರಿ ಅವರು ಮೇ 27 ರಿಂದ 29 ರವರೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದರು. ಭಾರತೀಯ ರಾಯಭಾರ ಕಚೇರಿಯು ಲ್ಯಾಂಡೌ ಅವರ ಭೇಟಿಯನ್ನು ಮೊದಲ ಶ್ರೇಷ್ಠ ಸಭೆ ಎಂದು ಬಣ್ಣಿಸಿದ್ದು, ಈ ಸಭೆಯೂ ದ್ವಿಪಕ್ಷೀಯ ಆದ್ಯತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ ಎಂದು ಹೇಳಿದೆ. ಇನ್ನು ಕೇಂದ್ರ ವ್ಯಾಪಾರ ಸಚಿವ ಪಿಯೂಷ್ ಗೋಯಲ್ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದರು. ಜುಲೈ ಆರಂಭದ ವೇಳೆಗೆ ಎರಡೂ ದೇಶಗಳು ಸೀಮಿತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ. ಭಾರತವು ಪ್ರಸ್ತುತ ಅಮೆರಿಕಕ್ಕೆ ತನ್ನ ರಫ್ತಿನ ಮೇಲೆ 26% ಸುಂಕವನ್ನು ಹಾಕಿದೆ ಎಂದು ಹೇಳಿದ್ದಾರೆ. ಭಾರತವು ಶೀಘ್ರದಲ್ಲೇ ಅಮೆರಿಕದ ಕಂಪನಿಗಳಿಗೆ $50 ಶತಕೋಟಿಗೂ ಹೆಚ್ಚಿನ ಒಪ್ಪಂದಗಳನ್ನು ಮಾಡಿಕೊಳ್ಳಿದೆ ಎಂದು ಹೇಳಿದ್ದಾರೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ