ಪಶ್ಚಿಮ ರಷ್ಯಾ(Russia)ದ ಪ್ಸ್ಕೋವ್ ನಗರದ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ ನಡೆದಿದ್ದು, 4 ವಿಮಾನಗಳಿಗೆ ಹಾನಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಡ್ರೋನ್ ದಾಳಿಯ ಪರಿಣಾಮವಾಗಿ, ನಾಲ್ಕು Il-76 ವಿಮಾನಗಳು ಹಾನಿಗೊಳಗಾದವು. ಬೆಂಕಿ ಕಾಣಿಸಿಕೊಂಡಿತು ಮತ್ತು ಎರಡು ವಿಮಾನಗಳು ಬೆಂಕಿಯಿಂದಾಗಿ ಸಿಡಿದಿದೆ. ರಷ್ಯಾದ ಮಾಧ್ಯಮಗಳು ಪೋಸ್ಟ್ ಮಾಡಿದ ವೀಡಿಯೊಗಳಲ್ಲಿ ವಿಮಾನ ನಿಲ್ದಾಣದಲ್ಲಿ ದಟ್ಟವಾದ ಕಪ್ಪು ಹೊಗೆಯನ್ನು ಕಾಣಬಹುದಾಗಿದೆ.
ವಿಮಾನ ನಿಲ್ದಾಣದ ಮೇಲಿನ ಡ್ರೋನ್ ದಾಳಿಯನ್ನು ನಾವು ವಿಫಲಗೊಳಿಸಿದ್ದೇವೆ ಎಂದು ಗವರ್ನರ್ ಮಿಖಾಯಿಲ್ ವೆಡೆರ್ನಿಕೋವ್ ಹೇಳಿದ್ದಾರೆ.
ಪೆಸ್ಕೋವ್ ಉಕ್ರೇನ್ ಗಡಿಯಿಂದ ಸುಮಾರು 800 ಕಿಲೋಮೀಟರ್ ದೂರದಲ್ಲಿದೆ, ದರ ಸುತ್ತಮುತ್ತಲಿನ ಪ್ರದೇಶವು ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳಾದ ಲಾಟ್ವಿಯಾ ಮತ್ತು ಎಸ್ಟೋನಿಯಾದ ಗಡಿಯಾಗಿದೆ.
ಮಾಸ್ಕೋದ ವ್ನುಕೊವೊ ವಿಮಾನ ನಿಲ್ದಾಣದ ಮೇಲಿನ ವಾಯುಪ್ರದೇಶವನ್ನು ಮುಚ್ಚಲಾಗಿದೆ ಎಂದು TASS ವರದಿ ಮಾಡಿದೆ. ಮೇ ತಿಂಗಳಲ್ಲಿ ಪೆಸ್ಕೋವ್ ಪ್ರದೇಶದಲ್ಲಿ ಡ್ರೋನ್ ದಾಳಿ ನಡೆದಿತ್ತು.
ಮತ್ತಷ್ಟು ಓದಿ: Ukraine Drone Attack: ಉಕ್ರೇನ್ನ ಡ್ರೋನ್ ದಾಳಿಯಿಂದ 2 ಕಟ್ಟಡಗಳಿಗೆ ಹಾನಿ, ಮಾಸ್ಕೋ ವಿಮಾನ ನಿಲ್ದಾಣ ಬಂದ್
ಕಳೆದ ಕೆಲವು ತಿಂಗಳುಗಳಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಡ್ರೋನ್ ದಾಳಿಗಳು ಹೆಚ್ಚಿವೆ. ಎರಡೂ ದೇಶಗಳು ಪದೇ ಪದೇ ಡ್ರೋನ್ ದಾಳಿ ನಡೆಸಿವೆ. ಮೇ ತಿಂಗಳಲ್ಲಿ, ಉಕ್ರೇನ್ ಕಪ್ಪು ಸಮುದ್ರದ ಬಳಿ ಕ್ರೈಮಿಯಾದಲ್ಲಿ ರಷ್ಯಾದ ಅತಿದೊಡ್ಡ ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡಿತು. ಮತ್ತು ಮೇ 3 ರಂದು, ಉಕ್ರೇನ್ ಪುಟಿನ್ ಅವರ ಸರ್ಕಾರಿ ಕಚೇರಿಯ ಮೇಲೆ ಡ್ರೋನ್ ದಾಳಿ ನಡೆಸಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ