ಬೇಲಿಯೇ ಎದ್ದು ಹೊಲ ಮೇಯ್ದಂತೆ, ಭಾರತಕ್ಕೆ ಮಾದಕ ವಸ್ತು ಕಳ್ಳಸಾಗಣೆಯಲ್ಲಿ ಲಾಹೋರ್ನ ಆ್ಯಂಟಿ ನಾರ್ಕೋಟಿಕ್ ಸೆಲ್ನ ಮುಖ್ಯಸ್ಥರ ಕೈವಾಡ
ಡ್ರೋನ್ಗಳ ಮೂಲಕ ಭಾರತ ಹಾಗೂ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಿರುವುದಾಗಿ ಪಾಕಿಸ್ತಾನದ ಮಾದಕ ದ್ರವ್ಯ ನಿಗ್ರಹ ಪಡೆ ಮಾಹಿತಿ ನೀಡಿದೆ. ಪಾಕಿಸ್ತಾನದ ಪೊಲೀಸರ ಪ್ರಕಾರ, ಕಳೆದ ವಾರ ಪಾಕಿಸ್ತಾನದ ರೇಂಜರ್ಗಳು ಮಾದಕದ್ರವ್ಯಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರು ಭಾರತೀಯ ಪ್ರಜೆಗಳನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.
ಲಾಹೋರ್, ಆಗಸ್ಟ್ 31: ಡ್ರೋನ್ಗಳ ಮೂಲಕ ಭಾರತ ಹಾಗೂ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಿರುವುದಾಗಿ ಪಾಕಿಸ್ತಾನದ ಮಾದಕ ದ್ರವ್ಯ ನಿಗ್ರಹ ಪಡೆ ಮಾಹಿತಿ ನೀಡಿದೆ. ಪಾಕಿಸ್ತಾನದ ಪೊಲೀಸರ ಪ್ರಕಾರ, ಕಳೆದ ವಾರ ಪಾಕಿಸ್ತಾನದ ರೇಂಜರ್ಗಳು ಮಾದಕದ್ರವ್ಯಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರು ಭಾರತೀಯ ಪ್ರಜೆಗಳನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.
ಗುರ್ಮೀತ್ ಸಿಂಗ್ , ಶಿಂದರ್ ಸಿಂಗ್, ಜೋಗಿಂದರ್ ಸಿಂಗ್ ಹಾಗೂ ವಿಶಾಲ್ ಜಗ್ಗ ಸೇರಿದಂತೆ ನಾಲ್ವರು ಕಳ್ಳಸಾಗಣೆದಾರರು ಭಾರತದ ಫಿರೋಜ್ಪುರದವರು ಮತ್ತು ರತನ್ಪಾಲ್ ಹಾಗೂ ಗರ್ವೇಂದರ್ ಸಿಂಗ್ ಜಲಂಧರ್ ಹಾಗೂ ಲುಧಿಯಾನದವರು ಎಂದು ಹೇಳಿದ್ದಾರೆ.
ಆದರೆ ಸತ್ಯವೇ ಬೇರೆ, ಪಂಜಾಬ್ ಪೊಲೀಸರ ಮಾಹಿತಿ ಪ್ರಕಾರ, ಲಾಹೋರ್ ಆ್ಯಂಟಿ-ನಾರ್ಕೋಟಿಕ್ ಸೆಲ್ನ ಮುಖ್ಯಸ್ಥ ಮಝರ್ ಇಕ್ಬಾಲ್, ಡ್ರಗ್ಸ್ ವಿಶೇಷವಾಗಿ ಹೆರಾಯಿನ್ ಅನ್ನು ಡ್ರೋನ್ಗಳ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಿದ ಆರೋಪ ಹೊತ್ತಿದ್ದಾರೆ. ಅವರನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಕ್ಬಾಲ್ ಕಳ್ಳಸಾಗಣೆ ಮೂಲಕ ಕೋಟ್ಯಂತರ ರೂಪಾಯಿ ಕಳಿಸಿದ್ದು, ಇತ್ತೀಚೆಗೆ ಬಂಧಿತ ಭಾರತೀಯ ಕಳ್ಳಸಾಗಣೆದಾರರ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಕುರಿತು ತನಿಖೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಹಿರಿಯ ಪೊಲೀಸ್ ಅಧಿಕಾರಿಗಳ ಉನ್ನತಾಧಿಕಾರಿಗಳ ಸಮಿತಿಯನ್ನು ರಚಿಸಿದ್ದೇವೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ಓದಿ: Punjab: ಅಮೃತಸರದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನಿ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್ ಯೋಧರು, 4 ದಿನಗಳಲ್ಲಿ 5ನೇ ಘಟನೆ
ಪ್ರಾಥಮಿಕ ತನಿಖೆ ಪ್ರಕಾರ, ಇಕ್ಬಾಲ್ ಮತ್ತು ಅವರ ಗ್ಯಾಂಗ್ ಕಸೂರ್ನಿಂದ ಡ್ರೋನ್ಗಳ ಮೂಲಕ ಭಾರತಕ್ಕೆ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಲಾಹೋರ್ ಪೊಲೀಸರ ಆ್ಯಂಟಿ ನಾರ್ಕೋಟಿಕ್ ಸೆಲ್ ಮುಖ್ಯಸ್ಥರು ಈ ಜಾಲವನ್ನು ನಿರ್ವಹಿಸುತ್ತಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ