Indonesia Earthquake: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ, ಸಾವಿನ ಸಂಖ್ಯೆ 162ಕ್ಕೆ ಏರಿಕೆ!

| Updated By: ರಮೇಶ್ ಬಿ. ಜವಳಗೇರಾ

Updated on: Nov 21, 2022 | 10:56 PM

ಇಂಡೋನೇಷ್ಯಾದಲ್ಲಿ ಭೂಕಂಪ ಸಂಭವಿಸಿದೆ. ಈ ದುರಂತದಲ್ಲಿ ಸಾವಿನ ಸಂಖ್ಯೆ 162ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

Indonesia Earthquake: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ, ಸಾವಿನ ಸಂಖ್ಯೆ 162ಕ್ಕೆ ಏರಿಕೆ!
ಸಾಂದರ್ಭಿಕ ಚಿತ್ರ
Follow us on

ಇಂಡೋನೇಷ್ಯಾ: ಇಂಡೋನೇಷ್ಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವಿನ ಏರುತ್ತಲೇ ಇದೆ. ಇದೀಗ ಬಂದ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 162ಕ್ಕೆ ಏರಿಕೆಯಾಗಿದ್ದು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇಂದು (ನವೆಂಬರ್ 21) ಮಧ್ಯಾಹ್ನ ಇಂಡೋನೇಷ್ಯಾದ ಪ್ರಮುಖ ದ್ವೀಪವಾದ ಜಾವಾದಲ್ಲಿ 5.6 ತೀವ್ರತೆಯ ಭೂಕಂಪವು ಸಂಭವಿಸಿತ್ತು.  ಭೂಕಂಪವು ರಾಜಧಾನಿ ಜಕಾರ್ತಾದಿಂದ ಆಗ್ನೇಯಕ್ಕೆ 75 ಕಿಮೀ ದೂರದಲ್ಲಿರುವ ಸಿಯಾಂಜೂರ್‌ನಲ್ಲಿ ಮತ್ತು 10 ಕಿಮೀ (6.2 ಮೈಲುಗಳು) ಆಳದಲ್ಲಿ ಸಂಭವಿಸಿದೆ ಎಂದು ಹವಾಮಾನ ಮತ್ತು ಭೂಭೌತಶಾಸ್ತ್ರ ಸಂಸ್ಥೆ (ಬಿಎಂಕೆಜಿ) ತಿಳಿಸಿದೆ.

ಹೆಚ್ಚಿನವರು ಕಟ್ಟಡಗಳ ಅವಶೇಷಗಳ ಒಳಗೆ ಸಿಲುಕಿಕೊಂಡಿದ್ದಾರೆ ಎಂದು  ಸಿಯಾಂಜೂರ್ ಆಡಳಿತದ ಮುಖ್ಯಸ್ಥ ಹರ್ಮನ್ ಸುಹೆರ್ಮನ್ ಹೇಳಿದರು.

ರಾಷ್ಟ್ರೀಯ ವಿಪತ್ತು ಏಜೆನ್ಸಿ ಪ್ರಕಾರ ಈ ಪ್ರದೇಶದಲ್ಲಿ ಹಲವಾರು ಮನೆಗಳು ಮತ್ತು ಇಸ್ಲಾಮಿಕ್ ಬೋರ್ಡಿಂಗ್ ಶಾಲೆಗೆ ಹಾನಿಯಾಗಿದೆ ಎಂದು ಹೇಳಿದರು. ಈ ಬಗ್ಗೆ ಒಂದು ವಿಡಿಯೋ ಕೂಡ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸಿಯಾಂಜೂರ್‌ನಲ್ಲಿ ಭೂಕುಸಿತದಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಲಾಗಿದೆ ಆದರೆ ಇನ್ನೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾವು ಒಬ್ಬ ಮಹಿಳೆ ಮತ್ತು ಮಗುವನ್ನು ಜೀವಂತವಾಗಿ ಸ್ಥಳಾಂತರಿಸಿದ್ದೇವೆ ಎಂದು ಸಿಯಾಂಜೂರ್ ಪೊಲೀಸ್ ಮುಖ್ಯಸ್ಥ ಡೋನಿ ಹೆರ್ಮಾವಾನ್ ಬ್ರಾಡ್‌ಕಾಸ್ಟರ್ ಮೆಟ್ರೋ ಟಿವಿಗೆ ತಿಳಿಸಿದ್ದಾರೆ,

 

 

 

Published On - 2:11 pm, Mon, 21 November 22