ನೇಪಾಳದ ಕಠ್ಮಂಡುವಿನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಧಾಡಿಂಗ್ನಲ್ಲಿದೆ. ಭೂಕಂಪವು ಬೆಳಗ್ಗೆ 7.39ಕ್ಕೆ ಸಂಭವಿಸಿದೆ. ಬಾಗ್ಮತಿ ಹಾಗೂ ಗಂಡಕಿ ಪ್ರಾಂತ್ಯದ ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ. ಕಂಪನದಿಂದ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಟಿಬೆಟ್ ಹಾಗೂ ಭಾರತೀಯ ಟೆಕ್ಟೋನಿಕ್ ಪ್ಲೇಟ್ಗಳು ಸಂಧಿಸುವ ಸ್ಥಳದಲ್ಲಿ ಅಪ್ಪಳಿಸಿದೆ. 2015ರಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿ, 9 ಸಾವಿರ ಮಂದಿ ಸಾವ್ನನಪ್ಪಿದ್ದರು. ನೇಪಾಳ ಪ್ರಪಂಚದಲ್ಲಿ 11ನೇ ಅತಿ ಹೆಚ್ಚು ಭೂಕಂಪ ಪೀಡಿತ ರಾಷ್ಟ್ರವಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:35 am, Sun, 22 October 23