Dawood Malik: ಭಾರತದ ಮೋಸ್ಟ್ ವಾಟೆಂಡ್ ಉಗ್ರ ದಾವೂದ್ ಮಲಿಕ್ ಹತ್ಯೆ
ಭಾರತದ ಮೋಸ್ಟ್ ವಾಟೆಂಡ್ ಉಗ್ರನಾಗಿದ್ದ ದಾವೂದ್ ಮಲಿಕ್ ಉಗ್ರ ಮೌಲಾನಾ ಮಸೂದ್ ಅಜರ್ನ ಆಪ್ತನಾಗಿದ್ದನು. ದಾವೂದ್ ಮಲಿಕ್ ಖಾಸಗಿ ಆಸ್ಪತ್ರೆಗೆ ತೆರಳಿದ್ದ ವೇಳೆ ಹೊಂಚು ಹಾಕಿ ದಾಳಿ ಮಾಡಲಾಗಿದೆ.
ನವದೆಹಲಿ: ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಮತ್ತೊಬ್ಬ ಉಗ್ರನನ್ನು ವಿದೇಶಿ ನೆಲದಲ್ಲಿ ಹತ್ಯೆ ಮಾಡಲಾಗಿದೆ. ಪಾಕಿಸ್ತಾನದ (Pakistan) ಆಶ್ರಯದಲ್ಲಿದ್ದ ಲಷ್ಕರ್-ಎ-ಜಬ್ಬಾರ್ (Lashkar-E-Jabbar) ಸಂಘಟನೆಯ ಸ್ಥಾಪಕ, ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಮಲಿಕ್ನನ್ನು (Dawood Malik) ಉತ್ತರ ವಜೀರಿಸ್ತಾನ ಜಿಲ್ಲೆಯ ಮಿರಾಲಿಯಲ್ಲಿ ಅಪರಿಚಿತ ಮುಸುಕುಧಾರಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಭಾರತದ ಮೋಸ್ಟ್ ವಾಟೆಂಡ್ ಉಗ್ರನಾಗಿದ್ದ ದಾವೂದ್ ಮಲಿಕ್ ಉಗ್ರ ಮೌಲಾನಾ ಮಸೂದ್ ಅಜರ್ನ ಆಪ್ತನಾಗಿದ್ದನು. ದಾವೂದ್ ಮಲಿಕ್ ಖಾಸಗಿ ಆಸ್ಪತ್ರೆಗೆ ತೆರಳಿದ್ದ ವೇಳೆ ಹೊಂಚು ಹಾಕಿ ದಾಳಿ ಮಾಡಲಾಗಿದೆ. ಮಾಡಿ ಈ ಘಟನೆಯು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ನಡುವೆ ಆಂತರಿಕ ಯುದ್ಧದ ಅನುಮಾನಕ್ಕೆ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ದಾವೂದ್ ಮಲಿಕ್ ಭಾರತದ ಭದ್ರತಾ ಏಜೆನ್ಸಿಗಳ ಕಣ್ಗಾವಲಿನಲ್ಲಿದ್ದನು. ಆತನ ವಿರುದ್ಧ ಭಯೋತ್ಪದನಾ ಚಟುವಟಿಕೆ ಸಂಬಂಧ ಹಲವು ಪ್ರಕರಣಗಳಿವೆ.
ಇದನ್ನೂ ಓದಿ: ಹಮಾಸ್ ಉಗ್ರರು ಇಸ್ರೇಲ್ನಲ್ಲಿ ಮನೆಗಳಿಗೆ ನುಗ್ಗಿ ಗುಂಡಿನ ದಾಳಿ ನಡೆಸಿರುವ ಆಘಾತಕಾರಿ ವಿಡಿಯೋ ವೈರಲ್
ಮುಂಬೈ ಮೇಲಿನ 26/11 ಭಯೋತ್ಪಾದಕ ದಾಳಿಯ ಮಾಸ್ಟರ್ಮೈಂಡ್ ಮತ್ತು ಎಲ್ಇಟಿ (ಲಷ್ಕರ್-ಎ-ತೈಬಾ) ಮುಖ್ಯಸ್ಥ ಹಫೀಜ್ ಸಯೀದ್ನ ಆಪ್ತ ಸಹಾಯಕನೂ ಆಗಿದ್ದ ಖೈಸರ್ ಫಾರೂಕ್ನನ್ನು ಹತ್ಯೆ ಮಾಡಲಾಗಿತ್ತು. ಅಕ್ಟೋಬರ್ 11 ರಂದು, ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ ಮತ್ತು 2016 ರ ಪಠಾಣ್‌ಕೋಟ್ ಭಯೋತ್ಪಾದನಾ ದಾಳಿ ಪ್ರಕರಣದ ಪ್ರಮುಖ ಸಂಚುಕೋರ ಶಾಹಿದ್ ಲತೀಫ್‌ನನ್ನು ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.
ಮತ್ತಷ್ಟು ಅಂತರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:00 am, Sun, 22 October 23