Japan Earthquake: ಜಪಾನ್​​ನಲ್ಲಿ ಪ್ರಬಲ ಭೂಕಂಪ; ರಿಕ್ಟರ್​ ಮಾಪಕದಲ್ಲಿ 6.5ರಷ್ಟು ತೀವ್ರತೆ ದಾಖಲು

| Updated By: Lakshmi Hegde

Updated on: Nov 29, 2021 | 7:58 PM

ಸತತ ಮಳೆಯಿಂದ ನಲುಗುತ್ತಿರುವ ತಮಿಳುನಾಡಿನಲ್ಲೂ ಇಂದು ಭೂಕಂಪನವಾಗಿದೆ.ಇಂದು ಮುಂಜಾನೆ 4.17ರ ಹೊತ್ತಗೆ ತಮಿಳುನಾಡಿನ ವೆಲ್ಲೋರ್​​ನಲ್ಲಿ ಭೂಕಂಪ ಆಗಿದ್ದು, ಭೂಮೇಲ್ಮೈಯಿಂದ 25 ಕಿಮೀ ಆಳದಲ್ಲಿ ಕಂಪಿಸಿದೆ.

Japan Earthquake: ಜಪಾನ್​​ನಲ್ಲಿ ಪ್ರಬಲ ಭೂಕಂಪ; ರಿಕ್ಟರ್​ ಮಾಪಕದಲ್ಲಿ 6.5ರಷ್ಟು ತೀವ್ರತೆ ದಾಖಲು
ಸಾಂಕೇತಿಕ ಚಿತ್ರ
Follow us on

ಜಪಾನ್​​ನ ಹೊನ್ಶು ಪ್ರದೇಶದ ಆಗ್ನೇಯ ಭಾಗದಲ್ಲಿ ಇಂದು ಸಂಜೆ 6 ಗಂಟೆ ಹೊತ್ತಿಗೆ ಪ್ರಬಲ ಭೂಕಂಪ ಸಂಭವಿಸಿದೆ. ಇದರ ತೀವ್ರತೆ ರಿಕ್ಟರ್​ ಮಾಪಕದಲ್ಲಿ 6.5ರಷ್ಟು ದಾಖಲಾಗಿದೆ ಎಂದು ಜಿಎಫ್​ಝಡ್​​ ಜರ್ಮನ್​ ಭೂಕಂಪನ ಸಂಶೋಧನಾ ಕೇಂದ್ರ ತಿಳಿಸಿದೆ. ಹಾಗೇ, ಭೂಮೇಲ್ಮೈಯಿಂದ 10 ಕಿಮೀ ಆಳದಲ್ಲಿ ಭೂಮಿ ನಡುಗಿದೆ ಎಂದೂ ಹೇಳಲಾಗಿದೆ. ಯಾವುದೇ ಸಾವು-ನೋವಿನ ವರದಿ ಆಗಿಲ್ಲ.

ಇತ್ತೀಚೆಗೆ ಭಾರತ ಸೇರಿ ವಿವಿಧ ದೇಶಗಳಲ್ಲಿ ಆಗಾಗ ಭೂಕಂಪನ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ 6.3 ರಷ್ಟು ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಬಾಂಗ್ಲಾದೇಶದ ಚಿತ್ತಗಾಂಗ್​​ನಿಂದ ಪೂರ್ವಕ್ಕೆ 175 ಕಿಮೀ ದೂರದಲ್ಲಿ, ಭೂಮೇಲ್ಮೈಯಿಂದ 60ಕಿಮೀ ಆಳದಲ್ಲಿ ಭೂಮಿ ನಡುಗಿತ್ತು.

ತಮಿಳುನಾಡಿನಲ್ಲೂ ಭೂಕಂಪನ
ಸತತ ಮಳೆಯಿಂದ ನಲುಗುತ್ತಿರುವ ತಮಿಳುನಾಡಿನಲ್ಲೂ ಇಂದು ಭೂಕಂಪನವಾಗಿದೆ.ಇಂದು ಮುಂಜಾನೆ 4.17ರ ಹೊತ್ತಗೆ ತಮಿಳುನಾಡಿನ ವೆಲ್ಲೋರ್​​ನಲ್ಲಿ ಭೂಕಂಪ ಆಗಿದ್ದು, ಭೂಮೇಲ್ಮೈಯಿಂದ 25 ಕಿಮೀ ಆಳದಲ್ಲಿ ಕಂಪಿಸಿದೆ. ಇದರ ತೀವ್ರತೆ 3.6ರಷ್ಟಿತ್ತು ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಇದನ್ನೂ ಓದಿ:  Video: ಮೀಡಿಯಾಕ್ಕೆ ಬೈಟ್​ ಕೊಡುತ್ತಿದ್ದ ಟಿಎಂಸಿ ಸಂಸದನಿಗೆ ಹಿಂದಿನಿಂದ ಬಂದ ರಾಜನಾಥ್​ ಸಿಂಗ್​ ಮಾಡಿದ್ದೇನು? ಇದು ಸ್ಪೆಶಲ್​ ವಿಡಿಯೋ !