Video: ಮೀಡಿಯಾಕ್ಕೆ ಬೈಟ್ ಕೊಡುತ್ತಿದ್ದ ಟಿಎಂಸಿ ಸಂಸದನಿಗೆ ಹಿಂದಿನಿಂದ ಬಂದ ರಾಜನಾಥ್ ಸಿಂಗ್ ಮಾಡಿದ್ದೇನು? ಇದು ಸ್ಪೆಶಲ್ ವಿಡಿಯೋ !
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗಿದ್ದು,ಅದಕ್ಕೂ ಮೊದಲು ಕಾಂಗ್ರೆಸ್ ಪ್ರತಿಪಕ್ಷಗಳ ಸಭೆ ಕರೆದಿತ್ತು. ಆದರೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದ ಪ್ರತಿಪಕ್ಷಗಳ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಪಾಲ್ಗೊಳ್ಳುವುದಿಲ್ಲ ಎಂದು ಸುದೀಪ್ ಬಂಡೋಪಾಧ್ಯಾಯ ಹೇಳಿದ್ದರು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರ ಒಂದು ವಿಶೇಷ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗ್ತಿದೆ. ಇಬ್ಬರೂ ರಾಜಕಾರಣಿಗಳು ಒಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ..ಮತ್ತು ಮನಸುಪೂರ್ತಿಯಾಗಿ ನಕ್ಕಿದ್ದಾರೆ. ಆಗಿದ್ದಿಷ್ಟೇ, ಇಂದು ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾಗಿತ್ತು. ಅದು ಮುಗಿಯುತ್ತಿದ್ದಂತೆ ಹೊರಗೆ ಸುದೀಪ್ ಬಂಡೋಪಾಧ್ಯಾಯ ಮಾಧ್ಯಮದವರೊಟ್ಟಿಗೆ, ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿದ್ದರು. ಅಷ್ಟರಲ್ಲಿ ಹಿಂದಿನಿಂದ ತಮ್ಮ ಸಿಬ್ಬಂದಿಯೊಂದಿಗೆ ಬಂದ ರಾಜನಾಥ್ ಸಿಂಗ್, ಸುದೀಪ್ ಬಂಡೋಪಾಧ್ಯಾಯ ಅವರ ಎರಡೂ ಭುಜಗಳನ್ನು ಹಿಡಿದಿದ್ದಾರೆ. ಸುದೀಪ್ ಹಿಂದಿರುಗಿ ನೋಡಿ ನಕ್ಕಿದ್ದಾರೆ. ನಂತರ ರಾಜನಾಥ್ ಸಿಂಗ್, ನೀವು ಮುಂದುವರಿಸಿ ಎನ್ನುತ್ತ ಅಲ್ಲಿಂದ ಹೋಗಿದ್ದನ್ನು ವಿಡಿಯೋದಲ್ಲ ನೋಡಬಹುದು.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆದಿದೆ. ಎರಡು ಬೇರೆಬೇರೆ ಪಕ್ಷಗಳ ನಾಯಕರ ಮಧ್ಯೆ ಎಷ್ಟೇ ಸ್ನೇಹವಿದ್ದರೂ ಅದನ್ನು ಬಹಿರಂಗವಾಗಿ ತೋರಿಸುವುದು ವಿರಳ. ಅದರಲ್ಲೂ ಬಿಜೆಪಿ-ಟಿಎಂಸಿ ಬದ್ಧ ವೈರಿಗಳಂತೆ ಇರುತ್ತವೆ. ಅಂಥದ್ದರಲ್ಲಿ ಇಬ್ಬರು ಹಿರಿಯ ನಾಯಕರ ಈ ಸಣ್ಣ ಕೀಟಲೆಯ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗಿದ್ದು,ಅದಕ್ಕೂ ಮೊದಲು ಕಾಂಗ್ರೆಸ್ ಪ್ರತಿಪಕ್ಷಗಳ ಸಭೆ ಕರೆದಿತ್ತು. ಆದರೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕರೆದಿರುವ ಪ್ರತಿಪಕ್ಷಗಳ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಪಾಲ್ಗೊಳ್ಳುವುದಿಲ್ಲ ಎಂದು ಸುದೀಪ್ ಬಂಡೋಪಾಧ್ಯಾಯ ತಿಳಿಸಿದ್ದರು.
ಇದನ್ನೂ ಓದಿ: ರಸ್ತೆಮೇಲೆಯೇ ಮೊಬೈಲ್ ಬೀಳಿಸಿಕೊಂಡ ಕತ್ರಿನಾ ತಾಯಿ; ನಿಮ್ಮ ವಾಟ್ಸಾಪ್ ಚೆಕ್ ಮಾಡುತ್ತೇವೆ ಎಂದ ಫ್ಯಾನ್ಸ್
Published On - 7:29 pm, Mon, 29 November 21