AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alaska Earthquake: ಅಲಾಸ್ಕಾದಲ್ಲಿ ಪ್ರಬಲ ಭೂಕಂಪ; ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲು

ಯುಎಸ್​ನ ಅಲಾಸ್ಕಾದಲ್ಲಿ ಪದೇಪದೇ ಭೂಕಂಪನ ಆಗುತ್ತಿರುತ್ತದೆ. ಜುಲೈನಲ್ಲಿ 8.2ರಷ್ಟು ತೀವ್ರತೆಯಲ್ಲಿ ಪ್ರಬಲ ಭೂಕಂಪ ಆಗಿತ್ತು. ಪೆರಿವಿಲ್ಲೆಯಿಂದ ಆಗ್ನೇಯಕ್ಕೆ 91 ಕಿಮೀ ದೂರದಲ್ಲಿ ಭೂಕಂಪ ಉಂಟಾಗಿದ್ದು, ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಸುನಾಮಿ ಮುನ್ನೆಚ್ಚರಿಕೆ ನೀಡಿತ್ತು.

Alaska Earthquake: ಅಲಾಸ್ಕಾದಲ್ಲಿ ಪ್ರಬಲ ಭೂಕಂಪ; ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲು
ಭೂಕಂಪದ ಚಿತ್ರ
TV9 Web
| Edited By: |

Updated on:Dec 22, 2021 | 8:20 AM

Share

ಅಮೆರಿಕದ ಅಲಾಸ್ಕಾದಲ್ಲಿ ಮಂಗಳವಾರ ಮಧ್ಯಾಹ್ನ 1.42ರ ಹೊತ್ತಿಗೆ ಪ್ರಬಲ ಭೂಕಂಪ (Alaska Earthquake) ಸಂಭಿವಿಸಿದೆ. ಇದರ ತೀವ್ರತೆ ರಿಕ್ಟರ್​ ಮಾಪಕದಲ್ಲಿ 6.3ರಷ್ಟು ದಾಖಲಾಗಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ. ಈ ಬಾರಿ ಭೂಮೇಲ್ಮೈ ಆಳದಿಂದ 125 ಕಿಮೀ ಆಳದಲ್ಲಿ ಸಂಭವಿಸಿದೆ. ಸದ್ಯ ಯಾವುದೇ ರೀತಿಯ ಸುನಾಮೆ ಎಚ್ಚರಿಕೆ ಇಲ್ಲ ಎಂದು ಹೇಳಲಾಗಿದೆ.  

ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ಕೇಂದ್ರದ ಪ್ರಕಾರ ಇಲ್ಲಿ 5.9ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.  ಅಂಕಾರೇಜ್​​ನ ನೈಋತ್ಯಕ್ಕೆ ಸುಮಾರು 138 ಮೈಲುಗಳಷ್ಟು ದೂರವಿರುವ ಇಲಿಯಾಮ್ನಾ ಜ್ವಾಲಾಮುಖಿ ಸಮೀಪವೇ ಭೂಕಂಪ ಉಂಟಾಗಿದೆ ಎಂದು ಯುಎಸ್​​ಜಿಎಸ್​ ತಿಳಿಸಿದೆ.  ಅಲಾಸ್ಕಾದ ಕೆನೈ ಪೆನಿನ್ಸುಲಾದಿಂದ ಕುಕ್​ ಇನ್ಲೆಟ್ನಾದಾದ್ಯಂತ ಭೂಮಿ ಕಂಪನವಾಗಿದೆ. ಇಲ್ಲಿಂದ ದೂರವಿರುವ ಫೇರ್ಬ್ಯಾಂಕ್ಸ್​, ಕೊಡಿಯಾಕ್​ ಮತ್ತು ವಾಡ್ಲೆಜ್​​ನಲ್ಲೂ ಭೂಮಿ ನಡುಗಿದ ವರದಿಯಾಗಿದೆ.   ಆದರೆ ಎಲ್ಲಿಯೂ ಯಾವುದೇ ಆಸ್ತಿಪಾಸ್ತಿ, ಮನೆಗಳಿಗೆ ಹಾನಿಯಾಗಿಲ್ಲ. ಪ್ರಾಣ ಹಾನಿಯೂ ಆಗಿಲ್ಲ ಎಂದು ವರದಿಯಾಗಿದೆ.

ಯುಎಸ್​ನ ಅಲಾಸ್ಕಾದಲ್ಲಿ ಪದೇಪದೇ ಭೂಕಂಪನ ಆಗುತ್ತಿರುತ್ತದೆ. ಜುಲೈನಲ್ಲಿ 8.2ರಷ್ಟು ತೀವ್ರತೆಯಲ್ಲಿ ಪ್ರಬಲ ಭೂಕಂಪ ಆಗಿತ್ತು. ಪೆರಿವಿಲ್ಲೆಯಿಂದ ಆಗ್ನೇಯಕ್ಕೆ 91 ಕಿಮೀ ದೂರದಲ್ಲಿ ಭೂಕಂಪ ಉಂಟಾಗಿದ್ದು, ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಸುನಾಮಿ ಮುನ್ನೆಚ್ಚರಿಕೆ ನೀಡಿತ್ತು. ಆಗ ರಸ್ತೆಗಳೆಲ್ಲ ಭರ್ಜರಿ ಸೀಳುಬಿಟ್ಟಿದ್ದವು. ಅಪಾರ ಪ್ರಮಾಣದ ಹಾನಿಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿಯೇ ಜೂನ್​​ನಲ್ಲಿ ಆದ ಭೂಕಂಪದ ತೀವ್ರತೆ ಅತ್ಯಂತ ಹೆಚ್ಚು ಎಂದು ವಿಶ್ಲೇಸಿಸಲಾಗಿದೆ. ಅದರ ಹೊರತಾಗಿ 2020ರ ಅಕ್ಟೋಬರ್​ನಲ್ಲೂ ಕೂಡ ಅಲಾಸ್ಕಾದ ಸ್ಯಾಡ್ ಪಾಯಿಂಟ್​ ಎಂಬಲ್ಲಿ 7.5 ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಇದರ ತೀವ್ರತೆಗೆ ಸಾಗರದಲ್ಲಿ ಸುನಾಮಿ ಮಾದರಿಯ ಅಲೆಗಳು ಎದ್ದಿದ್ದವು. ಹಾಗೇ, 2020ರ ಜುಲೈನಲ್ಲೂ ಕೂಡ ಪೆನಿನ್ಸುಲಾದಲ್ಲಿ 7.8 ತೀವ್ರತೆಯಲ್ಲಿ ಭೂಮಿ ನಡುಗಿತ್ತು. ಒಟ್ಟಾರೆ ಈ ಪ್ರದೇಶದಲ್ಲಿ ಆಗಾಗ ಭೂಕಂಪನ ಸಂಭವಿಸುವುದು ಸಾಮಾನ್ಯವೆಂಬಂತಾಗಿದೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶ; ಹುದ್ದೆ, ವೇತನ ಮೊದಲಾದ ಮಾಹಿತಿ ಇಲ್ಲಿದೆ

Published On - 8:19 am, Wed, 22 December 21

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ