AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಕ್ವೇಡರ್: ಏಕಾಏಕಿ ಸುದ್ದಿವಾಹಿನಿಯ ಸ್ಟುಡಿಯೋಗೆ ನುಗ್ಗಿದ ಶಸ್ತ್ರಸಜ್ಜಿತ ದುಷ್ಕರ್ಮಿಗಳು

ಬಂಧೂಕುಧಾರಿಗಳು ಏಕಾಏಕಿ ಟಿವಿ ಸ್ಟುಡಿಯೋದೊಳಗೆ ನುಗ್ಗಿ, ಸಿಬ್ಬಂದಿಯನ್ನು ಬೆದರಿಸಿರುವ ಘಟನೆ ಈಕ್ವೇಡರ್​ನಲ್ಲಿ ನಡೆದಿದೆ. ಕೆಲವು ಮುಸುಕುಧಾರಿ ಬಂದೂಕುಧಾರಿಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದ್ದಾರೆ. ವ್ಯಕ್ತಿಯೊಬ್ಬರು ಕೈಮುಗಿದು ಅವರಿಗೆ ಏನೋ ಹೇಳುತ್ತಿರುವುದನ್ನು ಕಾಣಬಹುದು.

ಈಕ್ವೇಡರ್: ಏಕಾಏಕಿ ಸುದ್ದಿವಾಹಿನಿಯ ಸ್ಟುಡಿಯೋಗೆ ನುಗ್ಗಿದ ಶಸ್ತ್ರಸಜ್ಜಿತ ದುಷ್ಕರ್ಮಿಗಳು
ಈಕ್ವೇಡರ್
ನಯನಾ ರಾಜೀವ್
|

Updated on: Jan 10, 2024 | 7:57 AM

Share

ಬಂಧೂಕುಧಾರಿಗಳು ಏಕಾಏಕಿ ಟಿವಿ ಸ್ಟುಡಿಯೋದೊಳಗೆ ನುಗ್ಗಿ, ಸಿಬ್ಬಂದಿಯನ್ನು ಬೆದರಿಸಿರುವ ಘಟನೆ ಈಕ್ವೇಡರ್​ನಲ್ಲಿ ನಡೆದಿದೆ. ಕೆಲವು ಮುಸುಕುಧಾರಿ ಬಂದೂಕುಧಾರಿಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದ್ದಾರೆ. ವ್ಯಕ್ತಿಯೊಬ್ಬರು ಕೈಮುಗಿದು ಅವರಿಗೆ ಏನೋ ಹೇಳುತ್ತಿರುವುದನ್ನು ಕಾಣಬಹುದು.

ಸುದ್ದಿ ಸಂಸ್ಥೆ AFP ಪ್ರಕಾರ, ಈ ಘಟನೆ ಮಂಗಳವಾರ (ಜನವರಿ 9) ನಡೆದಿದೆ. ಅಲ್ಲಿ ಹಲವಾರು ಪತ್ರಕರ್ತರು ಮತ್ತು ಸಿಬ್ಬಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿದೆ ಇಡೀ ಘಟನೆಯು ಚಾನೆಲ್​ನ ಲೈವ್​ನಲ್ಲಿ ಪ್ರಸಾರವಾಗುತ್ತಿತ್ತು.

ಪ್ರಬಲ ಗ್ಯಾಂಗ್ ನಾಯಕನೊಬ್ಬ ಜೈಲಿನಿಂದ ತಪ್ಪಿಸಿಕೊಂಡಿದ್ದು ಸರ್ಕಾರವು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದೆ. ರ್ಕಾರ ತುರ್ತುಪರಿಸ್ಥಿತಿ ಹೇರಿದ ನಂತರ ದೇಶವು ಸರಣಿ ದಾಳಿಗೆ ತುತ್ತಾಗುತ್ತಿದೆ. ಇತರ ವರದಿಗಳಲ್ಲಿ, ಅತ್ಯಂತ ಅಪಾಯಕಾರಿ ಡ್ರಗ್ ಲಾರ್ಡ್ ಜೋಸ್ ಅಡಾಲ್ಫೊ ಮಾಕಿಯಾಸ್ (ಫಿಟೊ ಎಂದೂ ಕರೆಯುತ್ತಾರೆ) ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಮತ್ತಷ್ಟು ಓದಿ:Gangster Tillu Tajpuriya Murder: ತಿಹಾರ್ ಜೈಲಿನಲ್ಲಿ ಗ್ಯಾಂಗ್​ಸ್ಟರ್ ತಿಲ್ಲು ತಾಜ್​ಪುರಿಯಾ ಹತ್ಯೆ

ಸಿಗ್ನಲ್ ಕಡಿತಗೊಳ್ಳುವ ಮೊದಲು ಚಾನಲ್ ಕನಿಷ್ಠ 15 ನಿಮಿಷಗಳ ಕಾಲ ನೇರ ಪ್ರಸಾರ ಮಾಡಿದೆ. ಗುಂಡು ಹಾರಿಸಬೇಡಿ ಎನ್ನುವ ಕೂಗು, ನೆಲದ ಮೇಲೆ ಬಿದ್ದಿರುವ ಸಿಬ್ಬಂದಿ ಎಲ್ಲವೂ ಲೈವ್​ನಲ್ಲಿ ಪ್ರಸಾರವಾಗಿದೆ.

ಈಗಾಗಲೇ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ, ಎರಡು ಸಿಬ್ಬಂದಿ ಗಾಯಗೊಂಡಿದ್ದಾರೆ. ಅಧ್ಯಕ್ಷ 60 ದಿನಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.ಜೈಲುಗಳಲ್ಲಿ ಸೇರಿದಂತೆ ಮಿಲಿಟರಿ ಗಸ್ತುಗಳನ್ನು ಸಕ್ರಿಯಗೊಳಿಸಲಾಗಿದೆ. ಕ್ರಿಮಿನಲ್​ ಗ್ಯಾಂಗ್​ನ ನಾಯಕ ಅಡಾಲ್ಪೊ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿಕೊಂಡು ಜೈಲಿನಿಂದ ಓಡಿ ಹೋಗಿದ್ದ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ