ಎಲಾನ್ ಮಸ್ಕ್ ತಂದೆ ಎರಾಲ್ ಮಸ್ಕ್ ತಮ್ಮ ಮಲಮಗಳ ಜೊತೆ ನಿಗೂಢ ಮಗುವಿಗೆ ತಂದೆಯಾಗುತ್ತಿದ್ದಾರೆ

ಜಾನಾ ಬೆಜೆನ್ಹೌಟ್, ಎರಾಲ್ ಮಸ್ಕ್ ಎರಡನೇ ಪತ್ನಿ ಹೇಡ್ ಬೆಜೆನ್ಹೌಟ್ ಅವರ ಮಗಳಾಗಿದ್ದಾರೆ. 1979ರಲ್ಲಿ ಎಲಾನ್ ಮಸ್ಕ್ ತಾಯಿ ಮಾಯೆ ಹೆಲ್ಡೆಮನ್ ಮಸ್ಕ್ ಅವರಿಂದ ಬೇರ್ಪಟ್ಟ ನಂತರ ಎರಾಲ್, ಹೇಡ್ ಅವರನ್ನು ಮದುವೆಯಾಗಿದ್ದರು.

ಎಲಾನ್ ಮಸ್ಕ್ ತಂದೆ ಎರಾಲ್ ಮಸ್ಕ್ ತಮ್ಮ ಮಲಮಗಳ ಜೊತೆ ನಿಗೂಢ ಮಗುವಿಗೆ ತಂದೆಯಾಗುತ್ತಿದ್ದಾರೆ
ಎರಾಲ್ ಮತ್ತು ಎಲಾನ್ ಮಸ್ಕ್
Follow us
TV9 Web
| Updated By: ಆಯೇಷಾ ಬಾನು

Updated on:Jul 15, 2022 | 10:05 PM

ಟೆಸ್ಲಾ ಕಂಪನಿಯ ಮುಖ್ಯಸ್ಥ ಮತ್ತು ವಿಶ್ವದ ಪ್ರಮುಖ ಕುಬೇರರಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ (Elon Musk) ಅವರ ತಂದೆ ಎರಾಲ್ ಮಸ್ಕ್ (Errol Musk) ತಮ್ಮ 35-ವರ್ಷದ ಮಲಮಗಳು ಜಾನಾ ಬೆಜೆನ್ಹೌಟ್ (Jana Bezuiddenhout) ಜೊತೆ ನಿಗೂಢವಾಗಿ ಎರಡನೇ ಮಗುವಿಗೆ ತಂದೆಯಾಗುತ್ತಿದ್ದಾರೆ.

ದಿ ಸನ್ ಪತ್ರಿಕೆಗೆ ನೀಡಿರುವ ಸಂದರ್ಶನವೊಂದರಲ್ಲಿ ಎರಾಲ್ ಮಸ್ಕ್, ‘ಈ ಭೂಮಿ ಮೇಲೆ ನಾವಿನ್ನೂ ಜೀವಂತನವಾಗಿರೋದೇ ಈ ಮಗುಗಾಗಿ’ ಎಂದು ಹೇಳಿದ್ದಾರೆ. ದಕ್ಷಿಣ ಆಪ್ರಿಕಾದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಮಸ್ಕ್ ಎರಡನೇ ಮಗುವನ್ನು ಪ್ಲ್ಯಾನ್ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಮೊದಲ ಮಗು 2019 ರಲ್ಲಿ ಹುಟ್ಟಿದ ಬಳಿಕ ತಾನು ಮತ್ತು ಜಾನಾ ಜೊತೆಯಾಗಿರುವುದಾಗಿ ಸೀನಿಯರ್ ಮಸ್ಕ್ ಹೇಳಿದ್ದಾರೆ.

ಈಗ 76ರ ಪ್ರಾಯದವಾಗಿರುವ ಎರಾಲ್ ಮಸ್ಕ್ ಮತ್ತು ಜಾನಾ 2017ರಲ್ಲಿ ಹುಟ್ಟಿದ ಇನ್ನೊಂದು ಮಗುವಿಗೂ ಪಾಲಕರಾಗಿದ್ದು ಅವನ ಹೆಸರು ಎಲಿಯಟ್ ರಶ್ ಆಗಿದೆ. ಟೆಸ್ಲಾ ಸಿಈಒ ಎಲಾನ್ ಮಸ್ಕ್ ಸೇರಿದಂತೆ ಅವರೀಗ 8 ಮಕ್ಕಳಿಗೆ ತಂದೆಯಾಗಿದ್ದಾರೆ.

ಜಾನಾ ಬೆಜೆನ್ಹೌಟ್, ಎರಾಲ್ ಮಸ್ಕ್ ಎರಡನೇ ಪತ್ನಿ ಹೇಡ್ ಬೆಜೆನ್ಹೌಟ್ ಅವರ ಮಗಳಾಗಿದ್ದಾರೆ. 1979ರಲ್ಲಿ ಎಲಾನ್ ಮಸ್ಕ್ ತಾಯಿ ಮಾಯೆ ಹೆಲ್ಡೆಮನ್ ಮಸ್ಕ್ ಅವರಿಂದ ಬೇರ್ಪಟ್ಟ ನಂತರ ಎರಾಲ್, ಹೇಡ್ ಅವರನ್ನು ಮದುವೆಯಾಗಿದ್ದರು. ಹೇಡ್ ಮತ್ತು ಎರಾಲ್ ಮೂರು ಮಕ್ಕಳಿಗೆ ತಂದೆ-ತಾಯಿಗಳಾಗಿದ್ದಾರೆ-ಎಲಾನ್, ಕಿಂಬಲ್ ಮತ್ತು ಟೊಸ್ಕಾ.

ಎರಾಲ್ ಮಸ್ಕ್ ಮತ್ತು ಹೇಡ್ 18 ವರ್ಷಗಳ ಕಾಲ ದಾಂಪತ್ಯ ನಡೆಸಿದರು ಮತ್ತು ಇವರಿಬ್ಬರಿಗೆ ಹುಟ್ಟಿದ್ದು ಇಬ್ಬರು ಮಕ್ಕಳು.

ಜಾನಾ ಅವರು ಎರಾಲ್ ಮಸ್ಕ್ ಮಗುವಿಗೆ ತಾಯಿ ಆಗುತ್ತಿರುವ ಸಂಗತಿಯು ಮಸ್ಕ್ ಕುಟುಂಬಕ್ಕೆ ಆಘಾತ ನೀಡಿದೆ ಎಂದು ವರದಿ ಹೇಳುತ್ತದೆ. ಅವರಿಗೆ ಈ ಸಂಗತಿ ಈಗಲೂ ಇಷ್ಟವಾಗುವುದಿಲ್ಲ. ನಮ್ಮ ಸಂಬಂಧದ ಬಗ್ಗೆ ಅವರು ಈಗಲೂ ಹೇಸಿಗೆ ಪಟ್ಟುಕೊಳ್ಳುತ್ತಾರೆ ಯಾಕೆಂದರೆ, ಜಾನಾ ಅವರು ಸಹೋದರಿ. ಮಲ-ಸಹೋದರಿ,’ ಎಂದು ಎರಾಲ್ ಹೇಳಿದ್ದಾರೆ.

ಟೆಕ್ ಬಿಲಿಯನ್ನೇರ್ ಸಹ ಸಂಸ್ಥಾಪಕರಾಗಿರುವ ನ್ಯೂರಾಲಿಂಕ್ ಹೆಸರಿನ ಕೃತಕ ಬುದ್ಧಿಮತ್ತೆ ಕಂಪನಿಯು ಎಲಾನ್ ಮಸ್ಕ್ ಅವಳಿ ಮಕ್ಕಳಿಗೆ ತಂದೆಯಾಗಿದ್ದಾರೆ ಎನ್ನುವ ವಿಷಯ ವರದಿಯಾದ ಮೇಲೆ ಎರಾಲ್ ಅವರ ನಿಗೂಢ ಮಗುವಿನ ವಿಷಯ ಬಯಲಾಗಿದೆ.

Published On - 2:42 pm, Fri, 15 July 22

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್