ದೀಪಾವಳಿ ಹಬ್ಬವನ್ನು ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅಂತೆಯೇ, ದೀಪಾವಳಿಯ ಪ್ರಯುಕ್ತ ಅಮೆರಿಕದ ನ್ಯೂಯಾರ್ಕ್ ನಗರದ ಸುಪ್ರಸಿದ್ಧ ಎಂಪೈರ್ ಸ್ಟೇಟ್ ಕಟ್ಟಡಕ್ಕೆ ಕಿತ್ತಳೆ ಬಣ್ಣದ ವಿದ್ಯುತ್ ದೀಪಗಳನ್ನು ಬೆಳಗಿಸಿ ಅಲಂಕರಿಸಲಾಯಿತು.
ದೀಪಾಲಂಕಾರದ ಮೂಲಕ ದೀಪದ ಹಬ್ಬವನ್ನು ಆಚರಿಸಲಾಯಿತು. ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ (FIA) ಸಂಘದ ಸಹಯೋಗದೊಂದಿಗೆ, ಎಂಪೈರ್ ಸ್ಟೇಟ್ ಕಟ್ಟಡಕ್ಕೆ ಕಿತ್ತಳೆ ಬಣ್ಣದ ದೀಪಾಲಂಕಾರ ನೀಡಲಾಯಿತು.
ಕಿತ್ತಳೆ ಬಣ್ಣದಲ್ಲಿ ಕಂಗೊಳಿಸಿದ ಕಟ್ಟಡದ ಫೋಟೋವನ್ನು ಟ್ವಿಟರ್ನಲ್ಲಿ ಹರಿಬಿಟ್ಟ ಬಿಲ್ಡಿಂಗ್ನ ಆಡಳಿತ ಮಂಡಳಿ NYC ವತಿಯಿಂದ ದೀಪಾವಳಿಯ ಶುಭಾಷಯಗಳು. ನಾವು ಇಂದು ರಾತ್ರಿ ಕಟ್ಟಡಕ್ಕೆ ಕಿತ್ತಳೆ ಬಣ್ಣದ ದೀಪಾಲಂಕಾರ ಮಾಡುವ ಮೂಲಕ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದರು.
Published On - 7:46 pm, Sat, 14 November 20