AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಂಗೋಲಿ ಬಿಡಿಸಿ.. ದೀಪ ಬೆಳಗಿಸಿ.. ಹಬ್ಬವನ್ನು ಸಂಭ್ರಮಿಸಿದ ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್

ಬ್ರಿಟನ್​ನ ಹಣಕಾಸು ಸಚಿವ ರಿಷಿ ಸುನಕ್ ಇಂದು ಲಂಡನ್​ನ ತಮ್ಮ ನಿವಾಸದ ಎದುರು ರಂಗೋಲಿ ಬಿಡಿಸಿ, ದೀಪವನ್ನು ಬೆಳಗುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದರು. ಇನ್ಫೋಸಿಸ್ ಕಂಪನಿಯ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯರಾಗಿರುವ ರಿಷಿ ಸುನಕ್ ನಾನೊಬ್ಬ ಹೆಮ್ಮೆಯ ಹಿಂದೂ ಎಂಬ ವಿಚಾರದ ಬಗ್ಗೆ ಮಾತನಾಡಿ ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ದೀಪವಳಿಯೂ ಒಂದು. ದೀಪಾವಳಿ ಪ್ರತಿಯೊಬ್ಬರ ಜೀವನದಲ್ಲಿ ಕತ್ತಲೆಯನ್ನು ಸರಿಸಿ ಬೆಳಕನ್ನು ಹರಿಸುವ ಹಬ್ಬವಾಗಿದೆ ಎಂದು ಹೇಳಿದರು. ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಇಂಗ್ಲೆಂಡ್​ನಲ್ಲಿ ಲಾಕ್​ಡೌನ್​ […]

ರಂಗೋಲಿ ಬಿಡಿಸಿ.. ದೀಪ ಬೆಳಗಿಸಿ.. ಹಬ್ಬವನ್ನು ಸಂಭ್ರಮಿಸಿದ ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್
KUSHAL V
|

Updated on: Nov 14, 2020 | 8:21 PM

Share

ಬ್ರಿಟನ್​ನ ಹಣಕಾಸು ಸಚಿವ ರಿಷಿ ಸುನಕ್ ಇಂದು ಲಂಡನ್​ನ ತಮ್ಮ ನಿವಾಸದ ಎದುರು ರಂಗೋಲಿ ಬಿಡಿಸಿ, ದೀಪವನ್ನು ಬೆಳಗುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದರು. ಇನ್ಫೋಸಿಸ್ ಕಂಪನಿಯ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯರಾಗಿರುವ ರಿಷಿ ಸುನಕ್ ನಾನೊಬ್ಬ ಹೆಮ್ಮೆಯ ಹಿಂದೂ ಎಂಬ ವಿಚಾರದ ಬಗ್ಗೆ ಮಾತನಾಡಿ ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ದೀಪವಳಿಯೂ ಒಂದು. ದೀಪಾವಳಿ ಪ್ರತಿಯೊಬ್ಬರ ಜೀವನದಲ್ಲಿ ಕತ್ತಲೆಯನ್ನು ಸರಿಸಿ ಬೆಳಕನ್ನು ಹರಿಸುವ ಹಬ್ಬವಾಗಿದೆ ಎಂದು ಹೇಳಿದರು.

ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಇಂಗ್ಲೆಂಡ್​ನಲ್ಲಿ ಲಾಕ್​ಡೌನ್​ ಜಾರಿಗೊಳಿಸಿದ್ದು, ಒಬ್ಬರನೊಬ್ಬರು ಭೇಟಿ ಮಾಡದೆ ಇರುವುದು ತೀರಾ ಕಷ್ಟಕರವಾಗಿದೆ. ಇದು ನನಗೂ ತಿಳಿದಿದೆ. ಆದರೆ, ಈ ಸಮಯದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸರಳವಾಗಿ ಮತ್ತು ಜವಾಬ್ದಾರಿಯಿಂದ ಹಬ್ಬವನ್ನು ಆಚರಿಸುವುದು ಸೂಕ್ತ. ಈಗಾಗಲೇ ವೈರಸ್ ಹರಡುವುದನ್ನು ತಡೆಯುವಲ್ಲಿ ಎಡವಿದ್ದೇವೆ. ಇಂತಹ ನಿರ್ಲಕ್ಷ್ಯ ಮತ್ತಷ್ಟು ಕಠಿಣ ಪರಿಸ್ಥಿತಿ ತಂದೊಡ್ಡುತ್ತದೆ ಎಂಬ ಎಚ್ಚರಿಕೆಯನ್ನು ಸಹ ನೀಡಿದರು.

ಮುಂಬರುವ ದಿನಗಳಲ್ಲಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುವ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರಲಿದೆ. ಆದರೆ ಈ ಕೊರೋನಾ ಕಾಲದಲ್ಲಿ ಎಚ್ಚರಿಕೆಯಿಂದ ಇರಬೇಕು. ಬೇಜವಾಬ್ದಾರಿತನದಿಂದ ವರ್ತಿಸಿದರೆ ಮುಂದಿನ ದಿನಗಳಲ್ಲಿ ಎದುರಾಗುವ ಸಂತೋಷದ ಘಳಿಗೆಯನ್ನು ಅನುಭವಿಸಲು ಸಾಧ್ಯವಿಲ್ಲ ಎಂದು ತಿಳಿ ಹೇಳಿದರು.

-=-=