AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿಯ ದೀಪಗಳು ಕತ್ತಲೆಯನ್ನು ಓಡಿಸಿ ನಿರೀಕ್ಷೆಯ ಬೆಳಕನ್ನು ಮೂಡಿಸಲಿ: ಜಾನ್ಸನ್ | UK PM wishes British Hindus Jains and Sikhs on Deepavali

ಯುನೈಟಿಡ್ ಕಿಂಗ್​ಡಮ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್, ಬ್ರಿಟಿಷ್ ಹಿಂದೂಗಳು, ಸಿಕ್ಖರು ಮತ್ತು ಜೈನರಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಅವರು, ಕೊವಿಡ್-19 ಪ್ಯಾಂಡಿಮಿಕ್​ನ ಸಂಕಷ್ಟದ ಸಮಯದಲ್ಲಿ ಭಾರತೀಯ ಮೂಲದ ಬ್ರಿಟನ್​ಗಳು ಜನರಿಗೆ ಮಾಡಿರುವ ಸಹಾಯವನ್ನು ಮನಸಾರೆ ಕೊಂಡಾಡಿದ್ದಾರೆ. ‘ಈ ಪಿಡುಗನ್ನು ನಾವು ಮಟ್ಟಹಾಕುತ್ತೇವೆ’ ಎಂದು ಅವರು ಅದೇ ವಿಡಿಯೊದಲ್ಲಿ ಹೇಳಿದ್ದಾರೆ. ‘‘ನಮಸ್ತೆ ಮತ್ತು ಹ್ಯಾಪಿ ದೀಪಾವಳಿ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಕಾಮನೆಗಳು. ಈ ಸುಂದರವಾದ, ಸಂತಸಮಯ ದೀಪಾವಳಿ ಹಬ್ಬದ ಪ್ರಯುಕ್ತ, […]

ದೀಪಾವಳಿಯ ದೀಪಗಳು ಕತ್ತಲೆಯನ್ನು ಓಡಿಸಿ ನಿರೀಕ್ಷೆಯ ಬೆಳಕನ್ನು ಮೂಡಿಸಲಿ: ಜಾನ್ಸನ್ | UK PM wishes British Hindus Jains and Sikhs on Deepavali
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 14, 2020 | 7:48 PM

Share

ಯುನೈಟಿಡ್ ಕಿಂಗ್​ಡಮ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್, ಬ್ರಿಟಿಷ್ ಹಿಂದೂಗಳು, ಸಿಕ್ಖರು ಮತ್ತು ಜೈನರಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಅವರು, ಕೊವಿಡ್-19 ಪ್ಯಾಂಡಿಮಿಕ್​ನ ಸಂಕಷ್ಟದ ಸಮಯದಲ್ಲಿ ಭಾರತೀಯ ಮೂಲದ ಬ್ರಿಟನ್​ಗಳು ಜನರಿಗೆ ಮಾಡಿರುವ ಸಹಾಯವನ್ನು ಮನಸಾರೆ ಕೊಂಡಾಡಿದ್ದಾರೆ. ‘ಈ ಪಿಡುಗನ್ನು ನಾವು ಮಟ್ಟಹಾಕುತ್ತೇವೆ’ ಎಂದು ಅವರು ಅದೇ ವಿಡಿಯೊದಲ್ಲಿ ಹೇಳಿದ್ದಾರೆ.

‘‘ನಮಸ್ತೆ ಮತ್ತು ಹ್ಯಾಪಿ ದೀಪಾವಳಿ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಕಾಮನೆಗಳು. ಈ ಸುಂದರವಾದ, ಸಂತಸಮಯ ದೀಪಾವಳಿ ಹಬ್ಬದ ಪ್ರಯುಕ್ತ, ಲಕ್ಷಾಂತರ ದೀಪಗಳನ್ನು ಇಲ್ಲಿ ಮತ್ತೆ ಬೆಳಗಿಸಲಾಗಿದೆ. ಈ ವರ್ಷದ ಆಚರಣೆ ಭಿನ್ನವಾಗಿದೆ ಅಂತ ನನಗೆ ಗೊತ್ತಿದೆ. ದೇಶದಾದ್ಯಂತ ಜನರು ಮಾಡುತ್ತಿರುವ ತ್ಯಾಗಗಳ ಬಗ್ಗೆ ನನಗೆ ಗೊತ್ತಿದೆ. ಎಲ್ಲರ ಬದುಕು ನಿಂತಂತಾಗಿಬಿಟ್ಟಿದೆ. ನಿಮ್ಮ ಕೆಲಸಗಳು, ವ್ಯಾಪಾರದ ಮೇಲೆ ಭಾರಿ ಪರಿಣಾಮ ಬಿದ್ದಿರುವ ಸಂಗತಿಯನ್ನೂ ನಾನು ಬಲ್ಲೆ. ಆದರೆ ಈ ಮಹಾಮಾರಿ ಅಟ್ಟಹಾಸಗೈಯುತ್ತಿರುವ ಸಮಯದಲ್ಲಿ, ಬ್ರಿಟಿಷ್ ಹಿಂದೂಗಳು, ಸಿಕ್ಖರು ಮತ್ತು ಜೈನ್ ಸಮುದಾಯದವರು ತಮ್ಮ ಶಕ್ತಿ ಮೀರಿ ಜನರಿಗೆ ಸಹಾಯ ಮಾಡುತ್ತಿರುವುದನ್ನು ಕಂಡು ನನ್ನ ಹೃದಯ ತುಂಬಿಬಂದಿದೆ ಮತ್ತು ಅವರೆಡೆಗಿರುವ ಆದರ ಇನ್ನೂ ಹೆಚ್ಚಾಗಿದೆ. ಈ ದೀಪಾವಳಿ ಹಬ್ಬದಂದು ಬೆಳಗಿಸಲಾಗುವ ಲಕ್ಷಾಂತರ ದೀಪಗಳು ವಿಶ್ವದಾದ್ಯಂತ ಕತ್ತಲೆಯನ್ನು ಹೊಡೆದೋಡಿಸಿ, ಉಜ್ವಲ ಭವಿಷ್ಯದ ಬೆಳಕಿನ ಕಿರಣಗಳನ್ನು ಮೂಡಿಸುತ್ತವೆ ಎಂಬ ನಂಬಿಕೆ ನನ್ನಲ್ಲಿದೆ,’’ ಎಂದು ಜಾನ್ಸನ್ ಟ್ವೀಟ್ ಮಾಡಿದ್ದಾರೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ